ಪುನೀತ್ ರಾಜ್ ಕುಮಾರ್ – ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

ಜಾಹೀರಾತುಗಳು

ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಯುವರತ್ನ ಪುನೀತ್ ರಾಜ್ ಕುಮಾರ್

Puneeth Rajkumar on DKD
Puneeth Rajkumar on DKD

ಜೀ ಕನ್ನಡದ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ನಲ್ಲಿ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಭಾಗವಹಿಸಿದ್ದಾರೆ. ಸ್ವತಃ ಅದ್ಭುತ ನೃತ್ಯಕ್ಕೆ ಹೆಸರಾದ ಅ‍ಪ್ಪು ಉಪಸ್ಥಿತಿ ಎಲ್ಲ ನೃತ್ಯಪಟುಗಳ ಉತ್ಸಾಹ ಹೆಚ್ಚಿಸಿದೆ. ಪುನೀತ್ ಕೂಡಾ ಸ್ಪರ್ಧಿಗಳೊಂದಿಗೆ ಸ್ವತಃ ಕುಣಿದು ಅವರೊಂದಿಗೆ ತಾವೂ ಒಬ್ಬರಾದರು.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಗಳೆಲ್ಲರಲ್ಲೂ ಪುನೀತ್ ಉಪಸ್ಥಿತಿ ಸಂಚಲನ ಉಂಟು ಮಾಡಿತು. ಈಗಾಗಲೇ ತಮ್ಮ ಪ್ರತಿಭೆಯಿಂದ ಕರ್ನಾಟಕದ ಮನೆ ಮನೆಯ ವೀಕ್ಷಕರನ್ನು ಸೆಳೆದ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸ್ಪರ್ಧಿಗಳಿಗೆ ಉತ್ತೇಜನ ನೀಡಿದ್ದಲ್ಲದೆ ಈ ಕಾರ್ಯಕ್ರಮ ತಮ್ಮ ಅಚ್ಚುಮೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದು ಎಂದರು.

ಜೀ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಕಳೆದ ಹತ್ತು ವರ್ಷಗಳಿಂದ ಕರ್ನಾಟಕದ ಜನತೆಗೆ ರಂಜಿಸುತ್ತಿದೆ. ಪ್ರತಿ ಸೀಸನ್ ಮುಗಿಯುತ್ತಿದ್ದಂತೆ ಮುಂದಿನ ಸೀಸನ್ ಗೆ ಕಾಯುವಂತೆ ಮಾಡುವ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಈ ಬಾರಿ ಮತ್ತಷ್ಟು ವಿಶೇಷತೆಗಳನ್ನು ಮೈಗೂಡಿಸಿಕೊಂಡಿದೆ.

ತಮ್ಮ ಸಲಹೆ, ಮಾರ್ಗದರ್ಶನದಿಂದ ನೃತ್ಯಗಾರರಿಗೆ ಸ್ಫೂರ್ತಿ ತುಂಬುವ ಖ್ಯಾತ ನಟ ವಿಜಯ್ ರಾಘವೇಂದ್ರ, ಖ್ಯಾತ ನಟಿ ರಕ್ಷಿತಾ ಪ್ರೇಮ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಪುನೀತ್ ಅವರೊಂದಿಗೆ ರಂಜನೆಗೆ ತಮ್ಮ ಬದುಕಿನ ಅಪರೂಪದ ಕ್ಷಣಗಳನ್ನು ಬೆರೆಸಿದರು.

ನಿರೂಪಕಿ ಅನುಶ್ರೀ ಎಂದಿನಂತೆ ತಮ್ಮ ವಿಶಿಷ್ಟ ಮಾತುಗಾರಿಕೆ, ಶೈಲಿಯಿಂದ ಗಮನ ಸೆಳೆದರು.

ಜಾಹೀರಾತುಗಳು

ಕನ್ನಡ ಟಿವಿ ಶೋಗಳು

Leave a Reply

Your email address will not be published. Required fields are marked *