
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಪ್ರೇಕ್ಷಕರಿಗೆ ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದುಮಣಿಗಳು, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮರಳಿಮನಸಾಗಿದೆ, ಮನಸೆಲ್ಲಾನೀನೇ, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ “ಅರಗಿಣಿ-2” ಎಂಬ ಶೀರ್ಷಿಕೆಯಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗುತ್ತಿದೆ.
ಇದು ಕೋಪ, ದ್ವೇಷದಿಂದ ಶುರುವಾಗಿ ಪ್ರೀತಿಯ ಮಳೆ ಸುರಿಸೋ ಮನ ಮುಟ್ಟುವ ಪ್ರೇಮಕತೆಯೇ “ಅರಗಿಣಿ-2”.ತಂದೆ ತಾಯಿ ಇಲ್ಲದ ಆಗರ್ಭ ಶ್ರೀಮಂತ ವಿಕ್ರಮಾಧಿತ್ಯ, ಅಕ್ಕ ಅಂದ್ರೆ ಈತನಿಗೆ ಪಂಚಪ್ರಾಣ, ಅಕ್ಕನಿಗಾಗಿ ಏನನ್ನು ಬೇಕಿದ್ರೂ ತ್ಯಾಗ ಮಾಡಲು ಸಿದ್ಧನಿರುವ ಮುದ್ದಿನ ತಮ್ಮ. ಯಾವಾಗಲು ಸಿಡುಕುಮೂತಿ ಹಾಕೊಳ್ಳೋ ಈತ ಕೆಲಸದಲ್ಲಿ ಪಕ್ಕ ಪರ್ಫೆಕ್ಟ್. ಚಿಕ್ಕಂದಿನಲ್ಲಿ ನಡೆದ ಕೆಲವು ಘಟನೆಗಳಿಗೆ ಪ್ರತ್ಯುತ್ತರ ನೀಡಲು ಹಠ ತೊಟ್ಟು, ಗುರಿ ಮುಟ್ಟಿದ ಛಲಗಾರ ಈ ಕಥಾನಾಯಕ ವಿಕ್ರಮಾಧಿತ್ಯ.
ಇನ್ನು ಕಥಾನಾಯಕಿ ಪದ್ಮಾವತಿ. ಬಡ ಕುಟುಂಬದಿಂದ ಬಂದಿರೋ ಈಕೆ ಶುದ್ಧ ತರ್ಲೆ, ಮುದ್ದಾಗಿ ತನ್ನ ಪೆದ್ದುತನದಿಂದ ಮನೆಮಂದಿಯನ್ನೆಲ್ಲ ನಗಿಸೋ ನಗುಮೊಗದ ಕಣ್ಮಣಿ. ಪದ್ಮಾವತಿಗೆ ಅಮ್ಮ-ಅಪ್ಪ ಹಾಗು ಅಕ್ಕ ಅಂದ್ರೆ ಪಂಚಪ್ರಾಣ. ಮನೆಯ ಜವಬ್ದಾರಿ ಹೊತ್ತುಕೊಂಡಿರೋ ಈಕೆ ಉದ್ಯೋಗಕ್ಕಾಗಿ ಪರಿತಪಿಸುತ್ತಿರುತ್ತಾಳೆ. ಎಷ್ಟೇ ಕಷ್ಟಗಳು ಎದುರಾದಾಗಲೂ ನಗು ಮುಖದಿಂದಲೇ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳೋ ಮುಗ್ದ ಹುಡುಗಿ ಪದ್ಮಾವತಿ.
ಆದರೆ ವಿಕ್ರಮಾದಿತ್ಯನಿಗೆ ಬಡ ಹುಡುಗಿ ಪದ್ಮಾವತಿ ಮೇಲೆ ಅಕಸ್ಮಾತ್ ಆಗಿ ಹುಟ್ಟಿಕೊಂಡ ದ್ವೇಷ, ಹಾಗೂ ಎರಡು ಸಂಸಾರದ ನಡುವೆ ಆಂತರಿಕ ಸಮಸ್ಯೆಗಳು. ಜೊತೆಗೆ ದ್ವೇಷದಲ್ಲಿ ಪ್ರೇಮ ಮೂಡುವ ಸನ್ನಿವೇಶಗಳ ಭಾವಾಶೇಷವೇ ಈ ಧಾರಾವಾಹಿಯ ಕಥಾಹಂದರ. ಹೊಚ್ಚ ಹೊಸ ಧಾರಾವಾಹಿ “ಅರಗಿಣಿ-2” ಇದೇ ಡಿಸೆಂಬರ್ 12ರಿಂದ ಮಧ್ಯಾಹ್ನ 2.30ಕ್ಕೆ ನಿಮ್ಮ ನೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.