ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ಹೊಚ್ಚ ಹೊಸ ಧಾರಾವಾಹಿ “ನಮ್ಮ ಲಚ್ಚಿ”..ಇದೇ ಫೆಬ್ರವರಿ 6 ರಿಂದ ರಾತ್ರಿ 8 ಗಂಟೆಗೆ..!
ಕನ್ನಡಿಗರಿಗೆ ಹೊಸತನದೊಂದಿಗೆ ವಿಭಿನ್ನ ರೀತಿಯ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ಮತ್ತೊಂದು ಹೊಸ ಕಥೆಯೊಂದು ಶುರುವಾಗುತ್ತಿದೆ ಅದೇ “ನಮ್ಮ ಲಚ್ಚಿ”. ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾ ನೀನೇ, ಕಥೆಯೊಂದು ಶುರುವಾಗಿದೆ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಜೇನುಗೂಡು ಹಾಗೂ ಹೊಂಗನಸು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮನೆಯ ಮಾತಾಗಿದೆ. ಈ ಸಾಲಿಗೆ ಇದೀಗ ‘ನಮ್ಮ ಲಚ್ಚಿ’ ಎಂಬ ಹೊಸ ಕಥೆಯೊಂದು ಸೇರ್ಪಡೆಯಾಗಲಿದೆ. ಹಳ್ಳಿಯಲ್ಲಿ ಬೆಳೆದಿರೋ ಪುಟ್ಟ … Read more