ಅವನು ಮತ್ತೆ ಶ್ರಾವಣಿ, ಶುರುವಾಗ್ತಿದೆ ಹೊಚ್ಚ ಹೊಸ ಭಾವನಾತ್ಮಕ ಪ್ರೀತಿ ಕಥೆ ಇದೇ ಅಕ್ಟೋಬರ್ 2 ರಿಂದ ರಾತ್ರಿ 10 ಗಂಟೆಗೆ !

ಜಾಹೀರಾತುಗಳು

ಸ್ಟಾರ್ ಸುವರ್ಣ – ಅವನು ಮತ್ತೆ ಶ್ರಾವಣಿ

ಸ್ಟಾರ್ ಸುವರ್ಣ - ಅವನು ಮತ್ತೆ ಶ್ರಾವಣಿ
Avanu Mathe Shravani Serial Star Suvarna

ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಹೊಸತನದೊಂದಿಗೆ ವಿಭಿನ್ನ ಕಥಾ ಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಿದೆ. ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿ 900 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಪ್ರೇಕ್ಷಕರ ಮನಗೆದ್ದು ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇದೀಗ ಅದೇ ಹೆಸರಿನಲ್ಲಿ ಹೊಸದೊಂದು ಲವ್ ಸ್ಟೋರಿಯನ್ನು ಪ್ರಸಾರ ಮಾಡಲು ಸ್ಟಾರ್ ಸುವರ್ಣ ಸಜ್ಜಾಗಿದೆ.

ಅವನು ಮತ್ತೆ ಶ್ರಾವಣಿ

ಬದುಕಿನಲ್ಲಿ ನಡೆದಿದ್ದ ಕಹಿ ಘಟನೆಗಳಿಂದಾಗಿ ಕಥಾನಾಯಕಿ ಶ್ರಾವಣಿ ವಿದೇಶದಲ್ಲಿ ವಾಸವಾಗಿರ್ತಾಳೆ. 4 ವರ್ಷಗಳ ಬಳಿಕ ಶ್ರಾವಣಿ ತನ್ನ ದೊಡ್ಡಪ್ಪನ ಮಗಳ ಮದುವೆಯ ಸಲುವಾಗಿ ವಿದೇಶದಿಂದ ಭಾರತಕ್ಕೆ ಬರುತ್ತಾಳೆ. ತಾನು ಪ್ರೀತಿಸಿ ಮದುವೆಯಾಗಿ ವಿಚ್ಚೇಧನ ಪಡೆದ ಅಭಿಮನ್ಯು , ತನ್ನ ತಂಗಿಯನ್ನು ಮದುವೆಯಾಗಲಿರುವ ಹುಡುಗ ಎಂಬ ಸತ್ಯ ಶ್ರಾವಣಿಗೆ ತಿಳಿಯುತ್ತದೆ.

ಜಾಹೀರಾತುಗಳು

ವರ್ಷಗಳ ಬಳಿಕ ಇವರಿಬ್ಬರು ಮುಖ ಮುಖಿಯಾಗ್ತಾರೆ. ಇನ್ನು ಈ ಕತೆಯಲ್ಲಿ ಇನ್ನೊಂದು ಮುಖ್ಯಪಾತ್ರ ನಿರ್ವಹಿಸುತ್ತಿರುವುದು ‘ಚೀಕು’ ಎಂಬ ನಾಯಿ. ಮಗುವಿನಂತಿರುವ ಈ ನಾಯಿ ಅಭಿಮನ್ಯು ಹಾಗು ಶ್ರಾವಣಿಯನ್ನು ಮತ್ತೆ ಹೇಗೆ ಒಂದು ಮಾಡುತ್ತದೆ ? ಈ ಪ್ರೇಮಿಗಳಿಬ್ಬರು ದೂರವಾಗಲು ಕಾರಣವಾದರು ಏನು ? ಈ ಎರಡಕ್ಷರದ ಪ್ರೀತಿಗೆ..ಸಿಗಲಿದೆಯೇ ಎರಡನೇ ಅವಕಾಶ ? ಅನ್ನೋದೇ “ಅವನು ಮತ್ತೆ ಶ್ರಾವಣಿ” ಧಾರಾವಾಹಿಯ ಮುಖ್ಯ ಕಥಾ ಹಂದರ.

Avanu Mathe Shravani - ಅವನು ಮತ್ತೆ ಶ್ರಾವಣಿ
Avanu Mathe Shravani

ಸ್ಟಾರ್ ಸುವರ್ಣ

ಇನ್ನು ಈ ಧಾರಾವಾಹಿಯು ಅದ್ಬುತ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ಸ್ಕಂದ ಅಶೋಕ್, ನಾಯಕಿಯಾಗಿ ಅನುಷಾ ರಮೇಶ್ ಅಭಿನಯಿಸುತ್ತಿದ್ದಾರೆ. ಹದಿನೈದು ವರ್ಷಗಳಿಂದ ಹೊಸತನಕ್ಕೆ ಮೊದಲ ಆಧ್ಯತೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗ್ತಿದೆ ಭಾವನಾತ್ಮಕ ಪ್ರೀತಿಕತೆ “ಅವನು ಮತ್ತೆ ಶ್ರಾವಣಿ” ಇದೇ ಅಕ್ಟೋಬರ್ 2 ರಿಂದ ರಾತ್ರಿ 10 ಗಂಟೆಗೆ ತಪ್ಪದೇ ವೀಕ್ಷಿಸಿ.

Similar Posts

Leave a Reply

Your email address will not be published. Required fields are marked *