ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಸೀಜûನ್-2 ಪತ್ರಿಕಾ ಪ್ರಕಟಣೆ – ಜೀ ಕನ್ನಡ

ಜಾಹೀರಾತುಗಳು
ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಸೀಜûನ್-2

Comedy Khiladigalu Championship Season 2 Finale

ವಿಭಿನ್ನತೆಗೆ ಹೆಸರಾದ ಜಿûೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಸಹ ಒಂದು. ನಿತ್ಯದ ಜಂಜಾಟದಲ್ಲಿ ಒದ್ದಾಡುವ ಅದೆμÉ್ಟೂೀ ಮನಸ್ಸುಗಳಿಗೆ ಹಾಸ್ಯದ ಮೂಲಕ ಸಾಂತ್ವನದ ಕಚಗುಳಿಯನ್ನಿಡುವ ಉದ್ದೇಶದಿಂದ ಹುಟ್ಟಿಕೊಂಡ ಮಹಾವೇದಿಕೆ ಕಾಮಿಡಿ ಕಿಲಾಡಿಗಳು. ಏನೇ ಇರ್ಲಿ ನಿಮ್ ಟೆನ್ಶನ್ಸು, ಇನ್ಮೇಲೆ ಎಲ್ಲಾ ಉಡೀಸು, ಯಾಕಂದ್ರೇ ಮತ್ತೇ ಬಂದ್ರು ನಮ್ಮ ಕಾಮಿಡಿ ಚಾಂಪಿಯನ್ಸು ಅನ್ನೋ ಸ್ಲೋಗನ್ ಮೂಲಕ ನಗ್ಸೋದೆ ನಮ್ಮ ಸಿದ್ದಾಂತ ಅಂತ ವಾರಪೂರ್ತಿ ತಯರಾಗಿ ವಾರಾಂತ್ಯದಲ್ಲಿ ಇಡೀ ಕರುನಾಡನ್ನೇ ನಗೆಗಡಲಲ್ಲಿ ತೇಲಿಸಿ, ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಸ್ಥಾನ ಗಳಿಸಿಕೊಂಡ ಕೀರ್ತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

ಅದೇ ರೀತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಂತರ, ಕಾಮಿಡಿ ಕಿಲಾಡಿಗಳು ಚಾಂಪಿಯನ್‍ಶಿಪ್ ಎನ್ನುವ ಹೊಸ ಪರಿಲ್ಪನೆಯ ಮೂಲಕ ಶುರುವಾದ ಹಾಸ್ಯದ ರಣಾಂಗಣದಲ್ಲಿ ಮೂರು ಸೀಸನ್‍ನ 6 ತಂಡದ ಕಿಲಾಡಿಗಳು ನಿರಂತರ ರಂಗ ತಾಲೀಮಿನ ಮೂಲಕ ಹಾಸ್ಯಕ್ಕೆ ಮತ್ತಷ್ಟು ಮೆರುಗನ್ನ ನೀಡಿ, ವಾರಾಂತ್ಯವಾದರೆ ಸಾಕು ಕಾರ್ಯಕ್ರಮಕ್ಕಾಗಿ ವೀಕ್ಷಕರು ಕಾತುರದಿಂದ ಕಾಯುವಂತೆ ಮಾಡುವಲ್ಲಿ ಸೈ ಎನಿಸಿಕೊಂಡಿದ್ದಾರೆ.ಳೀ ಸರಿ ಸುಮಾರು 37 ವಾರಗಳು ನಡೆದ ಈ ಕಾರ್ಯಕ್ರಮವು 220ಕ್ಕು ಹೆಚ್ಚು ನಾಟಕಗಳು, ಭಿನ್ನ, ವಿಭಿನ್ನ ಗೆಟಪ್‍ಗಳ ಮೂಲಕ ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶಗಳು ಹಾಗೂ ಪ್ರಯೋಗಾತ್ಮಕ ಸ್ಕಿಟ್‍ಗಳನ್ನ ಪ್ರದರ್ಶಿಸಿ ವಿಶೇಷ ಎನ್ನಿಸಿಕೊಂಡಿದೆ.

ಜಾಹೀರಾತುಗಳು

ಕೊರೋನಾ ಸಾಂಕ್ರಾಮಿಕ ಖಾಯಿಲೆಯಿಂದ ಲಾಕ್ಡೌನ್ ಎನ್ನುವ ಕರಾಳ ಛಾಯೆ ಜಗತ್ತಿನೆಲ್ಲ ಆವರಿಸಿ, ಅದರಿಂದ ವಿಚಲಿತರಾದ ಮನಸ್ಸುಗಳಿಗೆ ಹೊಸ ಚೈತನ್ಯ ನೀಡುವಂತೆ ಮತ್ತೇ ಶುರುವಾದ ಕಾರ್ಯಕ್ರಮ ಸಂಜೀವಿನಿಯಾಯಿತೆಂದರೆ ತಪ್ಪಲ್ಲ. ಮನರಂಜನೆಯ ಮೂಲಕ ನಾಡಿನ ಮೆಚ್ಚುಗೆಯ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಸೀಸನ್ 2 ಈಗ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಎಂದಿನಂತೆ ನಮ್ಮ ಕಾರ್ಯಕ್ರಮದ ಹೆಮ್ಮೆಯ ತೀರ್ಪುಗಾರರಾದ ನವರಸ ನಾಯಕ ಜಗ್ಗೇಶ್, ಯೋಗರಾಜ್ ಭಟ್, ಹಾಗು ಕ್ರೇಜಿಕ್ವೀನ್ ರಕ್ಷಿತಾರವರು ಕಾರ್ಯಕ್ರಮದ ಸಾರಥ್ಯ ವಹಿಸಿದರೆ, ನಗುವಿನ ವಾರಿಯರ್ಸ್‍ಗಳ ರಾಯಭಾರಿಯಾದ ಕರ್ನಾಟಕದ ನೆಚ್ಚಿನ ನಿರೂಪಕ ಮಾಸ್ಟರ್ ಆನಂದ್‍ರವರು ಗ್ರ್ಯಾಂಡ್ ಫಿನಾಲೆಯ ನಿರೂಪಣೆಯ ಸಾರಥ್ಯ ವಹಿಸುತ್ತಿದ್ದಾರೆ.

ಇವರೆಲ್ಲರ ಜೊತೆಗೆ ನೂರಾರು ತಂತ್ರಜ್ಞರು ಹಾಗು ಶ್ರಮಿಕರ ನಿರಂತರ ಪರಿಶ್ರಮದಲ್ಲಿ ಸಜ್ಜಾಗಿರುವ ಗ್ರ್ಯಾಂಡ್ ಫಿನಾಲೆ ವೇದಿಕೆ ಕೂಡ ಸೀಸನ್ 2 ಚಾಂಪಿಯನ್ ಶಿಪ್ ಟ್ರೋಫಿ ವಿನ್ನರ್ ಯಾರಾಗಬಹುದು ಎಂಬ ಕುತೂಹಲದ ಕ್ಷಣಗಣನೆಗೆ ಎದಿರು ನೋಡುತ್ತಿದೆ. ಒಟ್ಟಾರೆ 6 ತಂಡಗಳ ವಿಭಿನ್ನ ಹಾಸ್ಯ ನಾಟಕಗಳ ಜೊತೆ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ಪ್ರತಿಭೆಗಳು ಕೂಡ ಕರುನಾಡನ್ನ ರಂಜಿಸಲು ಸಿದ್ದರಾಗಿದ್ದಾರೆ.

ಈ ಎಲ್ಲಾ ಅವೀಸ್ಮರಣೀಯ ಕ್ಷಣಗಣಗಳಿಗೆ ಗ್ರ್ಯಾಂಡ್ ಫಿನಾಲೆ ವೇದಿಕೆ ಸಜ್ಜಾಗಿದ್ದು, ವಾರಾಂತ್ಯದ ಮನರಂಜನೆಯ ಮಹಾಪೂರ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಗ್ರ್ಯಾಂಡ್ ಫಿನಾಲೆಯ ಸಂಚಿಕೆ ಜುಲೈ 10 ಶನಿವಾರ ಹಾಗು 11 ರ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ

You may also like...

Leave a Reply

Your email address will not be published. Required fields are marked *