ಜಾಹೀರಾತು
ಜೀ ಕನ್ನಡ ಚಾನೆಲ್

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 – ಏಪ್ರಿಲ್ 16 ರಿಂದ ಜೀ ಕನ್ನಡದಲ್ಲಿ ಶುರುವಾಗ್ತಿದೆ

ಜಾಹೀರಾತುಗಳು
Dance Karnataka Dance season 6
Dance Karnataka Dance season 6

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅದ್ದೂರಿ ನಾಟ್ಯ ಪ್ರಾಕಾರಗಳ ಮೂಲಕ ಇಡೀ ಕರ್ನಾಟಕವನ್ನು ಕುಣಿಸುವಂತ ಜನ ಮೆಚ್ಚಿದ ಕಾರ್ಯಕ್ರಮ. ಶ್ರೀಮಂತ ವೇದಿಕೆ ಸೃಷ್ಟಿಸಿ ನೋಡುಗರಿಗೆ ಅತ್ಯದ್ಭುತ ಮನರಂಜನೆ ನೀಡುವ ಸಲುವಾಗಿ ಜೀ ಕನ್ನಡ ವಾಹಿನಿ ಹೆಮ್ಮೆಯಿಂದ ಪ್ರಸ್ತುತ ಪಡಿಸುತ್ತಿರುವ ಶೋ ಇದಾಗಿದೆ. ನಿರೂಪಣೆಯಿಂದ ಹಿಡಿದು ತೀರ್ಪುಗಾರಿಕೆಯವರೆಗೂ ನೈಜತೆಯನ್ನು ಕಾಯ್ದಿರಿಸಿಕೊಂಡು 5 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಕಾರ್ಯಕ್ರಮ ಇದೀಗ 6ನೇ ಸೀಸನ್ ಗೆ ಕಾಲಿಡುತ್ತಿದೆ. ತನ್ನೆಲ್ಲಾ ಕಾರ್ಯಕ್ರಮಗಳಲ್ಲೂ ಸಿರಿತನವನ್ನಷ್ಟೇ ಅಲ್ಲದೇ ಹಲವು ವಿಶೇಷತೆಗಳನ್ನು ಹೊತ್ತು ತರುವ ವಾಹಿನಿ DKD 6ರಲ್ಲೂ ಮನರಂಜನೆಯ ಮಹಾಹಬ್ಬ ಆಚರಿಸುತ್ತ ನಿಮ್ಮೆಲ್ಲರ ವಾರಾಂತ್ಯವನ್ನು ವರ್ಣಮಯವಾಗಿಸುವ ಭರವಸೆ ನೀಡಿದೆ.

ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲೂ ಆಡಿಷನ್ಸ್ ನಡೆಸಿ ಬೆಳಕಿಗೆ ಬಾರದ ಅದ್ಭುತ ಡ್ಯಾನ್ಸಿಂಗ್ ಪ್ರತಿಭೆಗಳನ್ನು ಹೆಕ್ಕಿ ತಂದಿರುವ ತಂಡ ಅವರನ್ನು ಇಡೀ ಕರುನಾಡಿಗೆ ಭರ್ಜರಿಯಾಗಿ ಪರಿಚಯಿಸುವ ಆಶಯ ಹೊಂದಿದೆ . ಡ್ಯಾನ್ಸ್ ಮೂಲಕವೂ ತನ್ನ ಮನರಂಜನಾ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿರುವ ಈ ಶೋ ಅದೆಷ್ಟೋ ಜನರ ಕನಸಿನ ವೇದಿಕೆಯಾಗಿದೆ.

ಇನ್ನು ಈ ಬಾರಿ ಹಲವು ವಿಶೇಷತೆಗಳನ್ನು ಈ ಶೋ ಹೊತ್ತು ತರುತ್ತಿದ್ದು ಅದರಲ್ಲಿ ಪ್ರಮುಖವಾಗಿ ಕರುನಾಡ ಚಕ್ರವರ್ತಿ . ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಮಹಾಗುರುವಾಗಿ ಈ ಡ್ಯಾನ್ಸಿಂಗ್ ವೇದಿಕೆಗೆ ಆಗಮಿಸಿರುವುದು ಕಾರ್ಯಕ್ರಮದ ಮೆರುಗು ಹೆಚ್ಚಿಸಿದೆ. 2010 ನೇ ಇಸವಿಯಲ್ಲೇ ನಾನಿರುವುದೇ ನಿಮಗಾಗಿ ಎಂದು ನಿರೂಪಕನಾಗಿ ಜೀ ಕನ್ನಡಕ್ಕೆ ಕಾಲಿಟ್ಟಿದ್ದ ಶಿವಣ್ಣ ಇದೀಗ ಕುಟುಂಬಕ್ಕೆ ಮರಳಿ ಹೊಸದೊಂದು ಹುರುಪು ತುಂಬಿದ್ದಾರೆ. ತಮ್ಮ ಅದ್ಭುತವಾದ ಡ್ಯಾನ್ಸಿಂಗ್ ಪ್ರತಿಭೆಯಿಂದ ಕನ್ನಡಿಗರ ಮನೆಮಾತಾಗಿರುವ ಇವರು ನಾಟ್ಯ ಸಾರ್ವಭೌಮ ಎಂದೇ ಖ್ಯಾತರಾಗಿದ್ದಾರೆ. ಇನ್ನು ಇವರ ಆಗಮನ ಕಾರ್ಯಕ್ರಮಕ್ಕಷ್ಟೇ ಅಲ್ಲದೇ ವಾಹಿನಿಗೂ ಡಬಲ್ ಎನರ್ಜಿ ಬಂದಂತಾಗಿದೆ ಎನ್ನುತ್ತದೆ ಜೀ ಕನ್ನಡ ವಾಹಿನಿ.

ಜಾಹೀರಾತುಗಳು

ಈಗಾಗಲೇ ಬಿಡುಗಡೆಗೊಂಡಿರುವ ಶಿವಣ್ಣ ಅವರ ಪ್ರೊಮೋ ಅದ್ಭುತವಾದ ಪ್ರತಿಕ್ರೆಯೆ ಪಡೆದುಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಠಿಸಿದೆ. ವಾಹಿನಿಯಷ್ಟೇ ಅಲ್ಲ ನೋಡುಗರು ಸಹ ಕಿರುತೆರೆಗೆ ಶಿವಣ್ಣರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಈ ಪ್ರೊಮೊ ಯಶಸ್ಸು.ಕಳೆದ ಸೀಸನ್ ಗಳಂತೆ ಈ ಸೀಸನ್ ನಲ್ಲೂ ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಮಾಸ್ಟರ್ , ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ಯ ಜನ್ಯ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ತೀರ್ಪುಗಾರರಾಗಿರಲಿದ್ದಾರೆ.

ತಮ್ಮ ಲವಲವಿಕೆಯ ಮಾತುಗಳು, ಸ್ಪಷ್ಟ ನಿರೂಪಣೆಯಿಂದ ಪ್ರಸಿದ್ದಿ ಪಡೆದಿರುವ ಅನುಶ್ರೀ ಅವರೇ ಈ ಸೀಸನ್ ನಲ್ಲೂ ನಿರೂಪಣೆಯ ಜವಾಬ್ಧಾರಿ ಹೊತ್ತಿದ್ದಾರೆ.ಇದೇ ಏಪ್ರಿಲ್ 16ರಿಂದ ಪ್ರತಿ ಶನಿವಾರ – ಭಾನುವಾರ ರಾತ್ರಿ 9ಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – 6 ಕಾರ್ಯಕ್ರಮ ಪ್ರಸಾರವಾಗಲಿದ್ದು ನಿಮ್ಮ ವಾರಾಂತ್ಯವನ್ನು ವರ್ಣಮಯವಾಗಿಸಲಿದೆ.

Recent Posts

ಗಂಗೆ ಗೌರಿ – ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಡಿಸೆಂಬರ್ 11 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30 ಕ್ಕೆ

ಇದೇ ಡಿಸೆಂಬರ್‌ 11 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ - ಗಂಗೆ ಗೌರಿ ಹೊಸ…

1 day ago

ಆಸೆ , ರಮೇಶ್ ಅರವಿಂದ್ ನಿರ್ಮಾಣದಲ್ಲಿ ಶುರುವಾಗ್ತಿದೆ ಹೊಚ್ಚ ಹೊಸ ಧಾರಾವಾಹಿ , ಇದೇ ಸೋಮವಾರದಿಂದ ರಾತ್ರಿ 7.30ಕ್ಕೆ!

ಸ್ಟಾರ್ ಸುವರ್ಣ - ಆಸೆ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ನೂತನವಾದ ಮನಮುಟ್ಟುವ ಮನರಂಜನೆಯ ಧಾರಾವಾಹಿಗಳನ್ನು ನೀಡುತ್ತಲೇ ಬರುತ್ತಿದೆ,…

3 days ago

ಸುವರ್ಣ ಜಾಕ್ ಪಾಟ್ ಕಾಂಟೆಸ್ಟ್ ನಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಹುಮಾನ ಗೆದ್ದ ಹಾಸನದ ಮಹಿಳೆ.. ನಿಮಗಿದೆ ಮತ್ತೊಂದು ಸುವರ್ಣಾವಕಾಶ ?

ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಹೀಗಾಗಿ ನೋಡುಗರಿಗೆ ಇನ್ನಷ್ಟು ಮನೋರಂಜನೆ ನೀಡಲು ಶುರುಮಾಡಿದ ವಿಭಿನ್ನ…

7 days ago

ಅವನು ಮತ್ತೆ ಶ್ರಾವಣಿ”ಯಲ್ಲಿ ವಿವಾಹ ಅಧ್ಯಾಯ.. ಮಹಾ ತಿರುವುಗಳುಳ್ಳ ಸಂಚಿಕೆಗಳು ಸೋಮ-ಶನಿ ರಾತ್ರಿ 10 ಗಂಟೆಗೆ..!

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಅವನು ಮತ್ತೆ ಶ್ರಾವಣಿ' ಎಂಬ…

1 week ago

ಸುವರ್ಣ ಜಾಕ್ ಪಾಟ್ – ಇದೇ ನವೆಂಬರ್ 26 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ – ಸ್ಟಾರ್ ಸುವರ್ಣ

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ, ಪ್ರೇಕ್ಷಕರಿಗೆ…

2 weeks ago

ಡ್ರಾಮಾ ಜ್ಯೂನಿಯರ್ಸ್ ಸೀಸನ್ 5 , ಶುರುವಾಗ್ತಿದೆ ಪ್ರೇಕ್ಷಕರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಇದೇ ನವೆಂಬರ್ 18 ರಿಂದ ಶನಿವಾರ – ಭಾನುವಾರ ರಾತ್ರಿ 9 ಗಂಟೆಗೆ..!

ರಿಯಾಲಿಟಿ ಶೋಗಳಲ್ಲಿ ನಿರೀಕ್ಷೆಗೂ ಮೀರಿ ತನ್ನದೇ ಸಂಚಲನ ಮೂಡಿಸಿದ ವಾಹಿನಿ ಜ಼ೀ ಕನ್ನಡ. ಪ್ರೇಕ್ಷಕರ ಬೇಕು, ಬೇಡಗಳನ್ನು ಅರ್ಥೈಸಿಕೊಂಡು ಇಲ್ಲಿಯವರೆಗೂ…

3 weeks ago
ಜಾಹೀರಾತು