
ವಿಭಿನ್ನ, ವಿಶಿಷ್ಟ ರಿಯಾಲಿಟಿ ಶೋಗಳ ಮೂಲಕ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ ಬಂದಿರುವ ಜ಼ೀ ಕನ್ನಡ ವಾಹಿನಿಯು ಕನ್ನಡ ಕಿರುತೆರೆ ಲೋಕದಲ್ಲಿ ಅಗ್ರಸ್ಥಾನಿಯಾಗಿ ನಿಂತಿದೆ. ಸಾಮಾಜಿಕ ಬದ್ಧತೆಯ ಜೊತೆಗೆ ಮನರಂಜನೆಯನ್ನು ಉಣ ಬಡಿಸುತ್ತಾ ಕನ್ನಡಿಗರ ಮೆಚ್ಚುಗೆ ಗಳಿಸಿದೆ.
ಇದೀಗ ಜ಼ೀ ಕನ್ನಡ ವಾಹಿನಿಯು ಈ ವೀಕೆಂಡ್‌ನಲ್ಲಿ ಎರಡು ಅದ್ಭುತ ಶೋಗಳನ್ನು ಒಟ್ಟಿಗೆ ಲಾಂಚ್ ಮಾಡಲು ಸಜ್ಜಾಗಿದೆ. ಮಕ್ಕಳ ಜೊತೆ ಮಕ್ಕಳಾಗಿ ಸಂಭ್ರಮಿಸುವ ʼಛೋಟಾ ಚಾಂಪಿಯನ್ʼ ಹಾಗು ಕುಣಿಯೋ ಕಾಲ್ಗಳಿಗೆ ಗೆಜ್ಜೆ ಕಟ್ಟೋ ಡ್ಯಾನ್ಸಿಂಗ್ ಶೋ ʼಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7ʼ ಈ ವೀಕೆಂಡ್‌ನಿಂದ ನಿಮ್ಮ ಮನೆ-ಮನಗಳಿಗೆ ಲಗ್ಗೆ ಇಡಲಿವೆ. ಸಾಮಾನ್ಯರನ್ನು ಸೆಲೆಬ್ರೆಟಿ ಮಾಡುವ ಈ ಜೋಡಿ ಕಾರ್ಯಕ್ರಮಗಳು ಮನೆ ಮಂದಿಗೆಲ್ಲಾ ಡಬ್ಬಲ್ ಮನರಂಜನೆ ನೀಡಲಿವೆ.
ಮುದ್ದು ಮಕ್ಕಳ ಕ್ಯೂಟ್ನೆಸ್. ತರಲೆ-ತುಂಟಾಟಗಳನ್ನು ಸಂಭ್ರಮಿಸುವ ಛೋಟಾ ಚಾಂಪಿಯನ್ ಕಾರ್ಯಕ್ರಮವು ಇದೇ ಶನಿವಾರ ಹಾಗು ಭಾನುವಾರದಿಂದ ಸಂಜೆ 6ಕ್ಕೆ ಪ್ರಸಾರವಾಗಲಿದೆ. ಕುರಿ ಪ್ರತಾಪ್ ಹಾಗು ಶ್ವೇತಾ ಚೆಂಗಪ್ಪ ಈ ಕಾರ್ಯಕ್ರಮದ ನಿರೂಪಕರಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮಸ್ತ್ ಮನರಂಜನೆ ನೀಡಲಿದ್ದಾರೆ. ಮಕ್ಕಳ ಲೋಕದಲ್ಲಿ ಮಕ್ಕಳಾಗಿ ಸಂಭ್ರಮಿಸಲು ನೀವು ರೆಡಿಯಾಗಿ.
ಇದರ ಜೊತೆಗೆ ಕುಣಿಯೋ ಕಾಲ್ಗಳಿಗೆ ಗೆಜ್ಜೆ ಕಟ್ಟಿ ಸಾಮಾನ್ಯ ಪ್ರತಿಭೆಯನ್ನ ಸೆಲೆಬ್ರೆಟಿ ಮಾಡುವ ಅತೀ ದೊಡ್ಡ ಡ್ಯಾನ್ಸ್ ಶೋ ʼಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7ʼ ಇದೇ ಶನಿವಾರ ಹಾಗು ಭಾನುವಾರದಿಂದ ರಾತ್ರಿ 7:30 ಕ್ಕೆ ಪ್ರಸಾರವಾಗಲಿದೆ.
ಕರ್ನಾಟಕದ 31 ಜಿಲ್ಲೆಗಳಲ್ಲಿ ಲಕ್ಷಾಂತರ ಪ್ರತಿಭೆಗಳನ್ನು ಆಡಿಷನ್ ಮಾಡಿ ಅವರಲ್ಲಿ ದಿ ಬೆಸ್ಟ್ ಟ್ಯಾಲೆಂಟ್ ಗಳನ್ನ ಈ ಶೋ ಮೂಲಕ ಕರುನಾಡಿಗೆ ಪರಿಚಯಿಸಲು ಸಜ್ಜಾಗಿದೆ. ಈ ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಮಹಾಗುರು ಸ್ಥಾನವನ್ನ ಅಲಂಕರಿಸಿದರೆ. ತೀರ್ಪುಗಾರರಾಗಿ ಕ್ರೇಜ಼ಿಕ್ವೀನ್ ರಕ್ಷಿತಾ, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹಾಗು ನೃತ್ಯ ಸಂಯೋಜಕ ಚಿನ್ನಿ ಪ್ರಕಾಶ್‌ರವರು ಇರಲಿದ್ದಾರೆ. ಇನ್ನು ಅನುಶ್ರೀಯವರು ಈ ಶೋನ ನಿರೂಪಕಿಯಾಗಿ ಸ್ಪರ್ಧಿಗಳಿಗೆ ಜೋಷ್ ತುಂಬಲಿದ್ದಾರೆ.
ಈ ವೀಕೆಂಡ್‌ನಿಂದ ಸಂಜೆ 6ರಿಂದ 10:30 ರವರೆಗೆ ಮಕ್ಕಳ ಮುಗ್ಧತೆಯನ್ನು ಮುದ್ದಿಸುವ ʼಛೋಟಾ ಚಾಂಪಿಯನ್ʼ ಕುಳಿತಲ್ಲೇ ನಿಮ್ಮನ್ನು ಕುಣಿಸುವ ʼDKD ಸೀಸನ್ 7ʼ ಹಾಗು ಸಾಧಕರ ಜೀವನವನ್ನ ಸಂಭ್ರಮಿಸುವ ʼವೀಕೆಂಡ್ ವಿಥ್ ರಮೇಶ್ ಸೀಸನ್ 5ʼ ನಿಮಗೆ ಅನ್‌ಲಿಮಿಟೆಡ್ ಮನರಂಜನೆ ನೀಡಲಿವೆ.