ಸ್ಟಾರ್ ಸುವರ್ಣದಲ್ಲಿ ಶುರುವಾಗುತ್ತಿರುವ “ಗಾನಬಜಾನ ಸೀಸನ್ 3” ಗ್ರಾಂಡ್ ಓಪನಿಂಗ್ ನಲ್ಲಿ ದೇಶವೇ ಮೆಚ್ಚಿದ “ಕಾಂತಾರ” ಚಿತ್ರತಂಡ..!

ಜಾಹೀರಾತುಗಳು

ಗಾನಬಜಾನ ಸೀಸನ್ 3 -ಸ್ಟಾರ್ ಸುವರ್ಣ

ಗಾನಬಜಾನ ಸೀಸನ್ 3
Gana Bajana Season 3

ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋಗಳ ಪೈಕಿ “ಗಾನಬಜಾನ” ಕೂಡ ಒಂದು. ಈ ಹಿಂದೆ ಯಶಸ್ವೀ ಎರಡು ಸೀಸನ್ ಗಳನ್ನು ಮುಗಿಸಿರುವ ‘ಗಾನಬಜಾನ’ ಇದೀಗ ತನ್ನ ಮೂರನೇ ಸೀಸನ್ ನೊಂದಿಗೆ ಮತ್ತೆ ಬರಲು ಸಜ್ಜಾಗಿದೆ. ಈಗಾಗಲೇ ಶೋ ಲಾಂಚ್ ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಪ್ರೊಮೋ ಕೂಡ ರಿಲೀಸ್ ಆಗಿದೆ. ಈ ಬಾರಿ ‘ಗಾನಬಜಾನ’ ದ ನಿರೂಪಣೆಯ ಜವಾಬ್ದಾರಿ ಹೊತ್ತಿರೋದು ಸ್ಟಾರ್ ಆ್ಯಂಕರ್ ‘ಅಕುಲ್ ಬಾಲಾಜಿ’. ಈ ಹಿಂದೆ ಸುವರ್ಣ ವಾಹಿನಿಯ ಅನೇಕ ಸೂಪರ್ ಡೂಪರ್ ಹಿಟ್ ಶೋಸ್ ಗಳನ್ನು ನಿರೂಪಣೆ ಮಾಡಿ ಪ್ರೇಕ್ಷಕರ ಮನಗೆದ್ದ ಅಕುಲ್ ಈಗ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಲಿದ್ದಾರೆ.

ಇನ್ನು ಈ ಶೋ ಬಗ್ಗೆ ಮಾತಾಡೋದಾದ್ರೆ ಈ ಕಾರ್ಯಕ್ರಮವು ಸಂಗೀತದ ಜೊತೆಗೆ ತಮಾಷೆ, ಕುಣಿತ, ಆಟ ಎಲ್ಲವನ್ನು ಒಳಗೊಂಡ ಸಂಪೂರ್ಣ ಮನೋರಂಜನೆಯ ಮಿಶ್ರಣವಾಗಿದ್ದು, ಖ್ಯಾತ ಸೆಲೆಬ್ರಿಟಿಗಳನ್ನು ಶೋ ಗೆ ಕರೆತಂದು ಎರಡು ತಂಡಗಳಾಗಿ ವಿಂಗಡಿಸಲಾಗುತ್ತದೆ. ಗಾಯನದ ಜೊತೆಗೆ ಹಲವಾರು ಗೇಮ್ ಗಳನ್ನೂ ನೀಡಲಾಗುತ್ತದೆ. ಯಾರು ಹೆಚ್ಚು ಸ್ಕೋರ್ ಮಾಡ್ತಾರೋ ಅವರನ್ನು ವಿನ್ನರ್ ಎಂದು ಘೋಷಿಸಲಾಗುತ್ತದೆ. ಇದೇ ಕಾರ್ಯಕ್ರಮದ ಮೂಲ ಉದ್ದೇಶ.

ಜಾಹೀರಾತುಗಳು

ಇನ್ನು ಕಾರ್ಯಕ್ರಮದ ಗ್ರಾಂಡ್ ಓಪನಿಂಗ್ ದಿನ ದೇಶವೇ ಮೆಚ್ಚಿಕೊಂಡ “ಕಾಂತಾರ” ಸಿನಿಮಾ ತಂಡದವರು ಭಾಗವಹಿಸಿದ್ದು, ರಿಷಬ್ ಶೆಟ್ಟಿ , ಸಪ್ತಮಿ ಗೌಡ, ಸ್ವರಾಜ್ ಶೆಟ್ಟಿ, ರಂಜನ್ ಸೇರಿದಂತೆ ಇನ್ನು ಅನೇಕರು ‘ಗಾನಬಜಾನ ಸೀಸನ್ 3’ ಸೆಟ್ ನಲ್ಲಿ ಮಸ್ತ್ ಮಜಾ ಮಾಡಿ ಬೊಂಬಾಟ್ ಆಗಿ ಮನೋರಂಜನೆ ನೀಡಿದ್ದಾರೆ. “ಗಾನಬಜಾನ ಸೀಸನ್ 3” ಯ ಮಜಭರಿತ ಸಂಚಿಕೆಗಳು ಇದೇ ನವೆಂಬರ್ 13 ರಿಂದ ಪ್ರತೀ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Similar Posts

Leave a Reply

Your email address will not be published. Required fields are marked *