
ಇನ್ಸ್‌ಪೆಕ್ಟರ್ ವಿಕ್ರಮ್ 2021 ರ ಕನ್ನಡ ಭಾಷೆಯ ಆಕ್ಷನ್ ಚಿತ್ರವಾಗಿದ್ದು, ನರಸಿಂಹ ನಿರ್ದೇಶಿಸಿದ್ದು, ವಿಜ್ಞಾನಾ ಎ.ಆರ್ ನಿರ್ಮಿಸಿದ್ದಾರೆ. ಪ್ರಜ್ವಲ್ ದೇವರಾಜ್, ರಘು ಮುಖರ್ಜಿ, ಭಾವನಾ ಮೆನನ್, ಅವಿನಾಶ್, ಶೋಭರಾಜ್ ಮತ್ತು ಧರ್ಮ ವಿವಿಧ ಪಾತ್ರಗಳ್ಲಿ ಮಿಂಚಿದ್ದಾರೆ.ಕಥೆಯು ವಿಶೇಷವಾಗಿ ಒಬ್ಬ ಉತ್ತಮ ಪೋಲೀಸ್ ಅಧಿಕಾರಿಯ ಸುತ್ತ ಸುತ್ತುತ್ತದೆ. ವಿಕ್ರಮ್ ಒಬ್ಬ ದಕ್ಷ ಪೋಲೀಸ್ ಅಧಿಕಾರಿ ಅಂತೆಯೇ ಇತನನ್ನು ಪೋಲೀಸ್ ೨ನೇ ಕೋಹಿನೂರ್ ವಜ್ರ ಎಂದು ಹೆಸರವಾಸಿಯಾಗಿರುತ್ತಾನೆ ಅಲ್ಲದೇ ಇತ ಯಾವುದೇ ಸಮಸ್ಯೆ ಇದ್ದರೂ ಸರಳವಾಗಿ ಬಗೆಹರಿಸುತ್ತಾನೆ. ಮಾದಕವಸ್ತು ದಂಧೆಯ ಮೂಖ್ಯಸ್ಥನನ್ನು ಹೇಗೆ ತನ್ನ ಸಾಮರ್ಥ್ಯದಿಂದ ಬಂಧಿಸುತ್ತಾನೆ ಎಂಬುದೇ ಈ ಚಲನಚಿತ್ರದ ಸಾರಾಂಶ. ಚಾಲೇಂಜಿಂಗ್‌ಸ್ಟಾರ್ ದರ್ಶನ್ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷವಾಗಿದೆ.
ಉದಯ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ “ಇನ್‌ಸ್ಪೆಕ್ಟರ್ ವಿಕ್ರಮ್” ಭಾನುವಾರ 18 ಏಪ್ರಿಲ್ 6.30 ಕ್ಕೆ ಪ್ರಸಾರವಾಗಲಿದೆ.