ತುಳುವರ ಹೊಸ ವರ್ಷದ ಪ್ರಯುಕ್ತ ‘ತುಳು’ ಭಾಷೆಯಲ್ಲಿ ಪ್ರಸಾರವಾಗಲಿದೆ “ಕಾಂತಾರ” ಏಪ್ರಿಲ್ 15 ರಂದು ಮಧ್ಯಾಹ್ನ 1 ಗಂಟೆಗೆ..!

ಜಾಹೀರಾತುಗಳು
Kantara On TV in Tulu
Kantara On TV in Tulu

2022ರಲ್ಲಿ ಇಡೀ ದೇಶವೇ ಸ್ಯಾಂಡಲ್ ವುಡ್ ನತ್ತ ತಿರುಗಿನೋಡುವಂತೆ ಮಾಡಿ ಇತಿಹಾಸ ಸೃಷ್ಟಿಸಿದ “ಕಾಂತಾರ” ಸಿನಿಮಾವು ಇದೀಗ ‘ತುಳು’ ಭಾಷೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಹೊಸತನದೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಹೊಸದೊಂದು ದಾಖಲೆಯನ್ನು ಮಾಡಲು ಮುಂದಾಗಿದೆ. 2010 ರಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ “ಗೊತ್ತಾನಗ ಪೊರ್ತಾಂಡ್” ಎಂಬ ‘ತುಳು’ ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಮನೆ ಮನೆಯ ಮಾತಾಗಿತ್ತು. ಇದೀಗ ಸುಮಾರು 13 ವರ್ಷಗಳ ಬಳಿಕ ದೇಶದಾದ್ಯಂತ ಹೊಸ ಇತಿಹಾಸ ಸೃಷ್ಟಿಸಿದ “ಕಾಂತಾರ” ಸಿನಿಮಾವನ್ನು ‘ತುಳು’ ಭಾಷೆಯಲ್ಲಿ ಪ್ರಸಾರಮಾಡಲು ಸಜ್ಜಾಗಿದೆ ಕನ್ನಡದ ಜನಪ್ರಿಯ ವಾಹಿನಿ ‘ಸ್ಟಾರ್ ಸುವರ್ಣ’.

ಇದು ಕರ್ನಾಟಕದ ತುಳುನಾಡಿನ ಪ್ರಾಂತ್ಯದಲ್ಲಿ ನಡೆಯುವ ದೈವಾರಾಧನೆ, ಭೂತಕೋಲ, ಕಂಬಳ, ಕೋಳಿ ಅಂಕ, ಇತ್ಯಾದಿ ಸಂಭ್ರಮಗಳ ಹಿನ್ನೆಲೆಯಲ್ಲಿ ನಡೆಯುವ ಕಥೆ. ಆದರೆ ಕೊನೆಯಲ್ಲಿ ಜರುಗುವ ಅನೂಹ್ಯ ಘಟನೆಯಿಂದ ಸಾಮಾನ್ಯ ಕಥೆಯಾಗಿದ್ದ ಇದಕ್ಕೆ ದೈವತ್ವ ಪ್ರಾಪ್ತವಾಗುತ್ತದೆ. ನೋಡು ನೋಡುತ್ತಿದ್ದಂತೆ ವೀಕ್ಷಕರನ್ನು ಮಂತ್ರ ಮುಗ್ಧಗೊಳಿಸುವಂತೆ ಮಾಡುತ್ತದೆ.

ಜಾಹೀರಾತುಗಳು
Kantara Movie in Tulu
Kantara Movie in Tulu

ತುಳುನಾಡಿನ ಹೊಸ ವರ್ಷ ‘ಬಿಸು’ ಹಬ್ಬದ ಪ್ರಯುಕ್ತ ಪ್ರೇಕ್ಷಕರು ಹೊತ್ತು ಕೊಂಡಾಡಿದ ಹೆಮ್ಮೆಯ ಕಥೆ “ಕಾಂತಾರ” ತುಳು ಭಾಷೆಯಲ್ಲಿ ಏಪ್ರಿಲ್ 15 ರಂದು ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗಲಿದೆ.

ತುಳು ಭಾಷೆಯಲ್ಲಿ ದೈವ ದರ್ಶನವನ್ನು ಕಣ್ತುಂಬಿಕೊಳ್ಳಲು ತಯಾರಾಗಿ.

Leave a Comment