
ದೇಶ-ವಿದೇಶಗಳಲ್ಲಿ ಸದ್ದು ಮಾಡಿದ ಕನ್ನಡದ ಹೆಮ್ಮೆಯ ಸಿನಿಮಾ “ಕಾಂತಾರ” ಇದೀಗ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದೆ. ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣದಲ್ಲಿ ಇಂದು ಸಂಜೆ 6 ಗಂಟೆಗೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ‘ಕಾಂತಾರ’ ಪ್ರಸಾರವಾಗಲಿದೆ. ಈಗಾಗಲೇ ಯಶಸ್ವಿ 100 ದಿನಗಳ ಪೂರೈಸಿರುವ ಕಾಂತಾರ ಇದೀಗ ಕಿರುತೆರೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಸ್ಯಾಂಡ್ ಹಾರ್ಟ್ ಕಲಾವಿದರಾದ ಹರೀಶ್ ಆಚಾರ್ಯ ರವರು ಅದ್ಭುತವಾದ ಮರಳುಶಿಲ್ಪ ಕೃತಿಯನ್ನು ರಚಿಸಿದ್ದಾರೆ.
ಮಂಗಳೂರಿನ ತಣ್ಣೀರುಬಾವಿ ಕಡಲ ತೀರದ ಮರಳುರಾಶಿಯಲ್ಲಿ ‘ಕಾಂತಾರ’ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವುದರ ಹಿನ್ನಲೆಯಲ್ಲಿ ಮೂಡಿದ ಕಲಾಕೃತಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಸ್ಯಾಂಡ್ ಹಾರ್ಟ್ ಕಲಾವಿದರಾದ ಹರೀಶ್ ಆಚಾರ್ಯ ರವರು ಹೃದಯ ತುಂಬಿ ಈ ಕಲಾಕೃತಿ ರಚಿಸಿದ್ದಾರೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಈ ರೀತಿಯ ಪ್ರಚಾರ ಸಿಕ್ಕಿರೋದಕ್ಕೆ ಸ್ಟಾರ್ ಸುವರ್ಣ ವಾಹಿನಿಯು ಅಭಿನಂದಿಸುತ್ತದೆ.

ದಿನವಿಡೀ ಪರಿಶ್ರಮ ಪಟ್ಟು ರಚಿಸಿದ ಈ ಕಲಾಕೃತಿಯಲ್ಲಿ ಪಂಜುರ್ಲಿ ದೈವದ ಮುಖವರ್ಣಿಕೆಯ ಕಲರ್ ಫುಲ್ ಚಿತ್ರಣ ಮೂಡಿಬಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಕಾಂತಾರ’ ಸಿನಿಮಾವು ಪ್ರಸಾರವಾಗುದರ ಕುರಿತು ವಾಹಿನಿಗೆ ಕಲಾವಿದರು ಬರಹದ ಮೂಲಕ ಶುಭ ಕೋರಿದ್ದಾರೆ. ದೇಶದಾದ್ಯಂತ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ’ ಸಿನಿಮಾವು ಕಿರುತೆರೆಯಲ್ಲೂ ಹೊಸ ಛಾಪು ಮೂಡಿಸಲಿ ಎಂದು ಆಶಿಸೋಣ.
ಕನ್ನಡ ಕಿರುತೆಯಲ್ಲಿ ಪ್ರಪ್ರಥಮ ಬಾರಿಗೆ ‘ಕಾಂತಾರ’ ಸಿನಿಮಾವು ಇಂದು ಸಂಜೆ 6 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ತಪ್ಪದೇ ವೀಕ್ಷಿಸಿ.