ಕಸ್ತೂರಿ ನಿವಾಸ ಚಿಕ್ಕಮಗಳೂರು ವಿಶೇಷ ಸೋಮವಾರದಿಂದ ಶನಿವಾರ ಸಂಜೆ ೭ಕ್ಕೆ

ಜಾಹೀರಾತುಗಳು
ಕಸ್ತೂರಿ ನಿವಾಸ ಚಿಕ್ಕಮಗಳೂರು ವಿಶೇಷ ಸೋಮವಾರದಿಂದ ಶನಿವಾರ ಸಂಜೆ ೭ಕ್ಕೆ
Kasthuri Nivasa Happy Days in Chickmagalur

ಮನರಂಜನೆಗೆ ಮತ್ತೊಂದು ಹೆಸರು ಉದಯ ಟಿವಿ. ಬೆಳಗಿನ ಕಾರ್ಯಕ್ರಮಗಳಿಂದ ಶುರುವಾಗಿ ಸೂಪರ್ ಹಿಟ್ ಚಲನಚಿತ್ರಗಳ ಧಮಾಕಾದೊಂದಿಗೆ ಮುದ ನೀಡುವ ಧಾರಾವಾಹಿಗಳು ಒಳಗೊಂಡು ಪ್ರೇಕ್ಷಕನ ಮನಸ್ಸಿನಲ್ಲಿ ಮನೆ ಮಾಡಿದೆ. ಜನಮೆಚ್ಚಿದ ಧಾರಾವಾಹಿಗಳಲ್ಲಿ ಒಂದಾದ ಕಸ್ತೂರಿ ನಿವಾಸ 350 ಸಂಚಿಕೆಗಳನ್ನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಒಟ್ಟು ಕುಟುಂಬದ ಆನಂದವನ್ನ ಅತ್ತೆ ಸೊಸೆ ಬಾಂಧವ್ಯವನ್ನ ಈ ಧಾರಾವಾಹಿಯ ಪ್ರಮುಖ ಅಂಶ. ಕಥಾ ಹಂದರದಲ್ಲಿ ಹೊಸತನ ಅಳವಡಿಸುತ್ತಾ ,ಹಂತ ಹಂತಕ್ಕೂ ತಿರುವುಗಳನ್ನ ನೀಡುತ್ತಾ ಪ್ರೇಕ್ಷಕ ವರ್ಗವನ್ನ ಸೆಳೆಯುತ್ತಿದೆ.

ಇದೀಗ ನಾಯಕ ರಾಘವ್ , ನಾಯಕಿ ಮೃದುಲಾಳ ಹ್ಯಾಪಿ ಡೇಸ್ ಗೆ ಈಡಿ ತಂಡ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ. ಉದಯ ಟಿವಿಯ ಜೋಡಿ ಎಂದೆ ಪ್ರಖ್ಯಾತಗೊಂಡಿರೊ ಈ ಜೋಡಿಯ ಬದುಕಿನಲ್ಲಿ ಹೊಸದೊಂದು ತಿರುವು ಮುಂಬರಲಿದ್ದು ಅದು ಪ್ರಕೃತಿಯ ತಪ್ಪಲಲ್ಲಿ ನಡೆಯಲಿದೆ. ಚಿಕ್ಕಮಗಳೂರಿನ ಪ್ರಸಿಧ್ದ ತಾಣಗಳಾದ ಮುಳೈನಗಿರಿ , ಕಾಪು ಲೈಟ್‌ ಹೌಸ್‌,ಬಾಬಾ ಬುಡನಗಿರಿ ,ಸುಂದರ ಕಾಫಿ ತೋಟಗಳು ಹೀಗೆ ಹತ್ತು ಹಲಾವಾರು ಜನಪ್ರೀಯ ತಾಣಗಳಲ್ಲಿ ಚಿತ್ರಿಕರಣಮಾಡಲಾಗಿದೆ. ಅಷ್ಟೆ ಅಲ್ಲದೆ ಮಂಗಳೂರಿನ ಸುತ್ತ ಮುತ್ತಲೂ ತಂಡ ರಾಘವ್ ಮೃದುಲಾ ರೊಂಮಾಟಿಕ್ ಜರ್ನಿಯಲ್ಲಿ ಕರೆದೊಯುತ್ತಿದೆ. ಸೇಯಂಟ್ ಮೇರಿಸ್ ಐಲಾಂಡ್ನಲ್ಲೂ ಸುಂದರ ದೃಶ್ಯಗಳು ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಕಾಣಬಹುದು.

ಜಾಹೀರಾತುಗಳು

ಕಸ್ತೂರಿ ನಿವಾಸ ಧಾರಾವಾಹಿ ಈ ವಿಶೇಷ ಸಂಚಿಕೆಗಳು ಸೋಮವಾರದಿಂದ ಶನಿವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಕನ್ನಡ ಟೆಲಿವಿಷನ್ ಚಾನೆಲ್‌ಗಳು
ಕನ್ನಡ ಟೆಲಿವಿಷನ್ ಚಾನೆಲ್‌ಗಳು

Leave a Comment