ಜೀ ಕನ್ನಡ, ಜೀ ತಮಿಳು, ಜೀ ತೆಲುಗು ಮತ್ತು ಜೀ ಕೇರಳಂನಿಂದ ಕೆಜಿಎಫ್ ಚಾಪ್ಟರ್ 2 ಚಲನಚಿತ್ರದ ಪ್ರಸಾರ ಹಕ್ಕುಗಳ ಸ್ವಾಧೀನ

ಜಾಹೀರಾತುಗಳು

ಕೆ.ಜಿ.ಎಫ್: ಚಾಪ್ಟರ್ 2

ಕೆ.ಜಿ.ಎಫ್: ಚಾಪ್ಟರ್ 2
ಕೆ.ಜಿ.ಎಫ್: ಚಾಪ್ಟರ್ 2

ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ವರ್ಷದ ಅತ್ಯಂತ ನಿರೀಕ್ಷೆಯ ಚಲನಚಿತ್ರ ಕೆಜಿಎಫ್ ಚಾಪ್ಟರ್ 2 ಸ್ಯಾಟಲೈಟ್‌ ಟೆಲಿವಿಷನ್‌ ರೈಟ್ಸ್‌ ಅನ್ನು ಚಾನೆಲ್ ಗಳ ಸೌಥ್ ಕ್ಲಸ್ಟರ್ ಪಡೆದುಕೊಂಡಿದೆ

ಕೆಜಿಎಫ್ ಚಾಪ್ಟರ್ 1 ಸುಮಾರು 1000ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಮತ್ತು 50 ಅಂತಾರಾಷ್ಟ್ರೀಯ ತಾಣಗಳಲ್ಲಿ ಪ್ರದರ್ಶನಗೊಂಡಿದ್ದು ಬಿಡುಗಡೆಯಾದ ಒಂದೇ ವಾರದಲ್ಲಿ ವಿಶ್ವವ್ಯಾಪಿ 100 ಕೋಟಿ ಕಲೆಕ್ಷನ್‌ ಮಾಡಿತ್ತು. ಈ ಆಕ್ಷನ್ ಬ್ಲಾಕ್ ಬಸ್ಟರ್ ಅತ್ಯಂತ ಹೆಚ್ಚು ಹಣ ಸಂಗ್ರಹಿಸಿದ ಕನ್ನಡ ಚಲನಚಿತ್ರವೆನಿಸಿ ದಾಖಲೆ ನಿರ್ಮಿಸಿದೆ. ಇದೀಗ ಕೆಜಿಎಫ್ ಚಾಪ್ಟರ್ 2 ಅತ್ಯಂತ ಉನ್ನತ ಮನರಂಜನೆ ನೀಡಲು ಸಜ್ಜಾಗಿದ್ದು ಈಗಾಗಲೇ ಈ ಚಿತ್ರದ ಟೀಸರ್ 208 ಮಿಲಿಯನ್ ಮೀರಿ ವೀಕ್ಷಣೆ ಕಂಡಿದ್ದು ಟ್ವಿಟ್ಟರ್ ಮತ್ತು ಯೂಟ್ಯೂಬ್ ನಲ್ಲಿ ನಂ.1 ಟ್ರೆಂಡಿಂಗ್ ಆಗಿದೆ. ಜೀ ನೆಟ್ ವರ್ಕ್ ನ 4 ದಕ್ಷಿಣದ ಚಾನೆಲ್ ಗಳು ಈ ಚಲನಚಿತ್ರದ ಥಿಯೇಟರ್ ಬಿಡುಗಡೆಯ ನಂತರ ಆಯಾ ಭಾಷೆಗಳಲ್ಲಿ ಈ ಚಲನಚಿತ್ರವನ್ನು ಟಿ.ವಿ.ಯಲ್ಲಿ ಪ್ರದರ್ಶಿಸಲಿವೆ.

ಜೀ ಸೌಥ್ ಕ್ಲಸ್ಟರ್ ವರ್ಷದ ಅತ್ಯಂತ ದೊಡ್ಡ ಬ್ಲಾಕ್ ಬಸ್ಟರ್ ಜೊತೆಯಲ್ಲಿ ಸಹಯೋಗಕ್ಕೆ ಹೆಮ್ಮೆ ಪಡುತ್ತದೆ. ಈ ಕುರಿತು ಜೀ ಎಂಟರ್ ಪ್ರೈಸಸ್ ಲಿಮಿಟೆಡ್(ಜೀಲ್)ನ ಇ.ವಿ.ಪಿ ಅಂಡ್ ಕ್ಲಸ್ಟರ್ ಹೆಡ್ ಸೌಥ್ ಬ್ಯುಸಿನೆಸ್ ಸಿಜು ಪ್ರಭಾಕರನ್, “ಕೆಜಿಎಫ್ ಚಾಪ್ಟರ್ 2 ಟಿ.ವಿ. ಪ್ರಸಾರ ಹಕ್ಕುಗಳನ್ನು ದಕ್ಷಿಣದ ಎಲ್ಲ 4 ಭಾಷೆಗಳಲ್ಲೂ ಪಡೆದುಕೊಳ್ಳುವ ಮೂಲಕ ದೇಶದ ಅತ್ಯಂತ ನಿರೀಕ್ಷೆಯ ಚಲನಚಿತ್ರವನ್ನು ದಕ್ಷಿಣದ ಪ್ರತಿ ಸ್ಕ್ರೀನ್ ಗೆ ತರುವುದಕ್ಕೆ ನಾವು ಬಹಳ ಥ್ರಿಲ್ ಆಗಿದ್ದೇವೆ. ನಮ್ಮ ವೀಕ್ಷಕರಿಗೆ ಅವರ ಮನೆಗಳ ಅನುಕೂಲ ಮತ್ತು ಸುರಕ್ಷತೆಯಲ್ಲಿ ಮನರಂಜನೆ ಒದಗಿಸುವ ನಮ್ಮ ಭರವಸೆಯನ್ನು ಈಡೇರಿಸಲು ನಾವು ಕೈಗೊಂಡ ಮತ್ತೊಂದು ಕ್ರಮ ಇದಾಗಿದೆ. ನಮ್ಮ ವೀಕ್ಷಕರಿಗೆ ಅತ್ಯಂತ ಬೃಹತ್ತಾದ ಗುಣಮಟ್ಟದ ಮನರಂಜನೆ ನೀಡುವ ಮೂಲಕ ಗುಣಮಟ್ಟದ ಕಂಟೆಂಟ್ ನೀಡಲು ಮತ್ತು ಈ ಸಹಯೋಗದ ಮೂಲಕ ವಿಶ್ವದಾದ್ಯಂತ ವೈವಿಧ್ಯಮಯ ಪ್ರೇಕ್ಷಕರನ್ನು ರಂಜಿಸುವುದು ನಮ್ಮನ್ನು ನಮ್ಮ ವೀಕ್ಷಕರಿಗೆ ಮತ್ತಷ್ಟು ಹತ್ತಿರ ತರಲಿದೆ” ಎಂದರು.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ರಾಕಿಂಗ್ ಸ್ಟಾರ್ ಯಶ್ ನಟನೆಯು ಈ ಚಲನಚಿತ್ರವು ಸಂಜಯ್ ದತ್, ಶ್ರೀನಿಧಿ ಶೆಟ್ಟಿ ಮತ್ತು ರವೀನಾ ಟಂಡನ್ ಅವರನ್ನು ಮುಖ್ಯ ಪಾತ್ರಗಳಲ್ಲಿ ಹೊಂದಿದೆ.

ಜಾಹೀರಾತುಗಳು

ಕನ್ನಡ ಟಿವಿ ಶೋಗಳು

Leave a Reply

Your email address will not be published. Required fields are marked *