ಜಾಹೀರಾತು
ಜೀ ಕನ್ನಡ ಚಾನೆಲ್

ಕೆಜಿಎಫ್ ಚಾಪ್ಟರ್ 2 – ಆಗಸ್ಟ್ 20ಕ್ಕೆ ಜೀ ಕನ್ನಡದಲ್ಲಿ ರಂದು ಶನಿವಾರ ಸಂಜೆ 7

ಜಾಹೀರಾತುಗಳು

ಕೆಜಿಎಫ್ ಚಾಪ್ಟರ್ 2 – ಆಗಸ್ಟ್ 20ಕ್ಕೆ ಜೀ ಕನ್ನಡದಲ್ಲಿ ಬ್ಲಾಕ್ ಬಸ್ಟರ್

 ಕೆಜಿಎಫ್ ಚಾಪ್ಟರ್ 2 - ಆಗಸ್ಟ್ 20ಕ್ಕೆ ಜೀ ಕನ್ನಡದಲ್ಲಿ ರಂದು ಶನಿವಾರ ಸಂಜೆ 7
KGF Chapter 2 On Zee Kannada

ಕೆಜಿಎಫ್ ಚಾಪ್ಟರ್ 2, ಇಡೀ ಜಗತ್ತು ಒಮ್ಮೆಲೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಹೆಮ್ಮೆಯ ಇಂಡಿಯಾದ ಬ್ಲಾಕ್ ಬಸ್ಟರ್ ಸಿನಿಮಾ. ಕಥೆ, ತಾಂತ್ರಿಕತೆ ,ಶ್ರೀಮಂತಿಕೆ ಮತ್ತು ಕಲಾವಿದರ ಆಯ್ಕೆಯಲ್ಲಿ ಚಾಪ್ಟರ್ 1ನ್ನೇ ಮೀರಿಸುವಂತೆ ತೆರೆಗೆ ಅಪ್ಪಳಿಸಿದ ಈ ಚಿತ್ರ ಬಿಡುಗಡೆಗೊಂಡ ಎಲ್ಲಾ ಭಾಷೆಗಳಲ್ಲೂ ಯಶಸ್ವಿಯಾಗಿದ್ದು ಈಗ ಇತಿಹಾಸ . ಇದೀಗ ಈ ಸಿನಿಮಾ ಕನ್ನಡ ಕಿರುತೆರೆಗೆ ಸಿರಿತನವನ್ನು ಪರಿಚಯಿಸಿದ ಕನ್ನಡಿಗರ ನೆಚ್ಚಿನ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ .

ಸ್ಯಾಂಡಲ್ ವುಡ್ ಜೊತೆಗೆ ಅತ್ಯುತ್ತಮ ನಂಟು ಹೊಂದಿರುವ ಜೀ ಕನ್ನಡ ವಾಹಿನಿ ತಮ್ಮ ವಿವಿಧ ಕಾರ್ಯಕ್ರಮಗಳ ಮೂಲಕ ಉದ್ಯಮಕ್ಕೆ ಶ್ರೇಷ್ಟ ಕಲಾವಿದರನ್ನು ಕೊಡುಗೆಯಾಗಿ ನೀಡಿರುವ ಹೆಗ್ಗಳಿಕೆ ಹೊಂದಿದೆ. ಕೆಜಿಎಫ್ 2 ಚಿತ್ರದಲ್ಲೂ ಹಲವಾರು ಜೀ ಕುಟುಂಬದ ಕಲಾವಿದರು ನಟಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಗೆಲುವಿನ ಸರದಾರ ರಾಕಿಂಗ್ ಸ್ಟಾರ್ ಯಶ್ , ಶ್ರೀನಿಧಿ ಶೆಟ್ಟಿ , ಸಂಜಯ್ ದತ್ ,ರವೀನಾ ಟಂಡನ್ , ಮಾಳವಿಕಾ ,ವಸಿಷ್ಠ ಸಿಂಹ ,ಪ್ರಕಾಶ್ ರಾಜ್ ಹೀಗೆ ದೇಶ ಕಂಡ ಅದ್ಭುತ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು ಪ್ರಶಾಂತ್ ನೀಲ್ ಅವರ ಅತ್ಯದ್ಭುತ ನಿರ್ದೇಶನವಿದೆ. ಚಂದನವನದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಇದಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣದ ಜವಾಬ್ಧಾರಿ ಹೊತ್ತಿದ್ದರೇ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ .

ಜಾಹೀರಾತುಗಳು

ಚಾಪ್ಟರ್ 1 ನಿಂದಲೇ ಕನ್ನಡ ಚಿತ್ರರಂಗದ ದಿಕ್ಕು ಬದಲಿಸುವ ಸೂಚನೆ ನೀಡಿದ್ದ ಕೆಜಿಎಫ್ ಇದೀಗ ಚಾಪ್ಟರ್ 2 ನಿಂದ ಅದನ್ನು ನಿಜವಾಗಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಯಶಸ್ಸಿನ ಸವಾರಿ ಮಾಡಲು ಶುರುಮಾಡಿ 1000 ಕೋಟಿಗೂ ಹೆಚ್ಚು ಆದಾಯ ಗಳಿಸಿ ದಾಖಲೆ ಸೃಷ್ಟಿಸಿದ್ದಷ್ಟೇ ಅಲ್ಲದೇ ಶತದಿನೋತ್ಸವವನ್ನು ಆಚರಿಸಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ.

ಹಬ್ಬಗಳ ಮಾಸ ಶ್ರಾವಣದಲ್ಲಿ ಕಿರು ಪರದೆಯ ಮೇಲೆ ಕೆಜಿಎಫ್ 2 ಅಬ್ಬರ ಆರಂಭವಾಗುತ್ತಿದ್ದು ಈಗಾಗಲೇ ಬಿಡುಗಡೆಯಾಗಿರುವ ವಿಶಿಷ್ಟ ಶೈಲಿಯ ಪ್ರೋಮೋಗಳು ವೀಕ್ಷಕರು ಈ ಸಿನಿಮಾ ಹಬ್ಬವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ. ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಕೆಜಿಎಫ್ ಚಾಪ್ಟರ್ 2 ಅನ್ನು ಮನೆಮಂದಿಯೆಲ್ಲಾ ಕೂತು ನೋಡಿ ಈ ಸಿನಿಮೋತ್ಸವವನ್ನು ಆಚರಿಸಿ , ಆನಂದಿಸಿ. ಜೀ ಕನ್ನಡದ ಇತರೆ ಕಾರ್ಯಕ್ರಮಗಳಿಗೆ ನೀಡುವ ಪ್ರೋತ್ಸಾಹವನ್ನು ಮುಂದುವರೆಸಿ.

Recent Posts

ಗಂಗೆ ಗೌರಿ – ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಡಿಸೆಂಬರ್ 11 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30 ಕ್ಕೆ

ಇದೇ ಡಿಸೆಂಬರ್‌ 11 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ - ಗಂಗೆ ಗೌರಿ ಹೊಸ…

1 day ago

ಆಸೆ , ರಮೇಶ್ ಅರವಿಂದ್ ನಿರ್ಮಾಣದಲ್ಲಿ ಶುರುವಾಗ್ತಿದೆ ಹೊಚ್ಚ ಹೊಸ ಧಾರಾವಾಹಿ , ಇದೇ ಸೋಮವಾರದಿಂದ ರಾತ್ರಿ 7.30ಕ್ಕೆ!

ಸ್ಟಾರ್ ಸುವರ್ಣ - ಆಸೆ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ನೂತನವಾದ ಮನಮುಟ್ಟುವ ಮನರಂಜನೆಯ ಧಾರಾವಾಹಿಗಳನ್ನು ನೀಡುತ್ತಲೇ ಬರುತ್ತಿದೆ,…

3 days ago

ಸುವರ್ಣ ಜಾಕ್ ಪಾಟ್ ಕಾಂಟೆಸ್ಟ್ ನಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಹುಮಾನ ಗೆದ್ದ ಹಾಸನದ ಮಹಿಳೆ.. ನಿಮಗಿದೆ ಮತ್ತೊಂದು ಸುವರ್ಣಾವಕಾಶ ?

ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಹೀಗಾಗಿ ನೋಡುಗರಿಗೆ ಇನ್ನಷ್ಟು ಮನೋರಂಜನೆ ನೀಡಲು ಶುರುಮಾಡಿದ ವಿಭಿನ್ನ…

7 days ago

ಅವನು ಮತ್ತೆ ಶ್ರಾವಣಿ”ಯಲ್ಲಿ ವಿವಾಹ ಅಧ್ಯಾಯ.. ಮಹಾ ತಿರುವುಗಳುಳ್ಳ ಸಂಚಿಕೆಗಳು ಸೋಮ-ಶನಿ ರಾತ್ರಿ 10 ಗಂಟೆಗೆ..!

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಅವನು ಮತ್ತೆ ಶ್ರಾವಣಿ' ಎಂಬ…

1 week ago

ಸುವರ್ಣ ಜಾಕ್ ಪಾಟ್ – ಇದೇ ನವೆಂಬರ್ 26 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ – ಸ್ಟಾರ್ ಸುವರ್ಣ

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ, ಪ್ರೇಕ್ಷಕರಿಗೆ…

2 weeks ago

ಡ್ರಾಮಾ ಜ್ಯೂನಿಯರ್ಸ್ ಸೀಸನ್ 5 , ಶುರುವಾಗ್ತಿದೆ ಪ್ರೇಕ್ಷಕರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಇದೇ ನವೆಂಬರ್ 18 ರಿಂದ ಶನಿವಾರ – ಭಾನುವಾರ ರಾತ್ರಿ 9 ಗಂಟೆಗೆ..!

ರಿಯಾಲಿಟಿ ಶೋಗಳಲ್ಲಿ ನಿರೀಕ್ಷೆಗೂ ಮೀರಿ ತನ್ನದೇ ಸಂಚಲನ ಮೂಡಿಸಿದ ವಾಹಿನಿ ಜ಼ೀ ಕನ್ನಡ. ಪ್ರೇಕ್ಷಕರ ಬೇಕು, ಬೇಡಗಳನ್ನು ಅರ್ಥೈಸಿಕೊಂಡು ಇಲ್ಲಿಯವರೆಗೂ…

3 weeks ago
ಜಾಹೀರಾತು