ಲವ್ ಬರ್ಡ್ಸ್ – ಕಿರುತೆರೆಯಲ್ಲಿ ಬರ್ತಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ಇದೇ ಏಪ್ರಿಲ್ 23 ರಂದು ರಾತ್ರಿ 7 ಗಂಟೆಗೆ…!

ಜಾಹೀರಾತುಗಳು

ಕಿರುತೆರೆಯಲ್ಲಿ ಬರ್ತಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ಇದೇ ಏಪ್ರಿಲ್ 23 ರಂದು ರಾತ್ರಿ 7 ಗಂಟೆಗೆ – ಲವ್ ಬರ್ಡ್ಸ್

Love Birds Movie On TV
Love Birds Movie On TV

ಕಿರುತೆರೆ ವೀಕ್ಷಕರಿಗಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಕನ್ನಡದ ಜನಪ್ರಿಯ ವಾಹಿನಿ ‘ಸ್ಟಾರ್ ಸುವರ್ಣ’ ಇದೀಗ “ಲವ್ ಬರ್ಡ್ಸ್” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಪ್ರೇಕ್ಷಕರ ಮನಗೆದ್ದ ಈ ವರ್ಷದ ಸೂಪರ್‌ ಹಿಟ್‌ ಸಿನಿಮಾ “ಲವ್ ಬರ್ಡ್ಸ್” ಇದೀಗ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. “ಲವ್ ಬರ್ಡ್ಸ್” ಇದು ಮದುವೆಯ ನಂತರ ಯಶಸ್ವಿ ಜೀವನವನ್ನು ನಡೆಸುತ್ತಿರುವ ಆಧುನಿಕ ದಂಪತಿಗಳ ಕಥೆ.

“ಲವ್ ಬರ್ಡ್ಸ್” ಸಿನಿಮಾದ “ಪಳ ಪಳ”‌ ಸಾಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ಅತೀ ಹೆಚ್ಚು ವೈರಲ್‌ ಆಗಿ ಜನಪ್ರಿಯಗೊಂಡಿತ್ತು. ಇನ್ನು ಈ ಸಿನಿಮಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಡಾರ್ಲಿಂಗ್ ಕೃಷ್ಣ ಮತ್ತು ಫ್ಯಾಶನ್ ಡಿಸೈನರ್ ಆಗಿ ಮಿಲನಾ ನಾಗರಾಜ್ ಅದ್ಭುತವಾಗಿ ಅಭಿನಯಿಸಿದ್ದಾರೆ.

ಜಾಹೀರಾತುಗಳು

ರಿಯಲ್ ಜೋಡಿಯ ಸಿನಿಮ್ಯಾಟಿಕ್ ಕಥೆಯನ್ನು ಕಡ್ಡಿಪುಡಿ ಚಂದ್ರು ನಿರ್ಮಿಸಿದ್ದು, ಈ ಸಿನಿಮಾದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್ ಮತ್ತು ಯೂಟ್ಯೂಬರ್ ಗೌರವ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಲವ್ ಬರ್ಡ್ಸ್’ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಮತ್ತು ಶಕ್ತಿ ಶೇಖರ್ ಛಾಯಾಗ್ರಹಣ ನೀಡಿದ್ದಾರೆ.

ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ “ಲವ್ ಬರ್ಡ್ಸ್” ಇದೇ ಏಪ್ರಿಲ್ 23 ರಂದು ರಾತ್ರಿ 7 ಗಂಟೆಗೆ. ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Leave a Comment