
ಲವ್ ಯೂ ರಚ್ಚು ಶಂಕರ್ ರಾಜ್ ನಿರ್ದೇಶನದ ರೊಮ್ಯಾಂಟಿಕ್ ಎಂಟರ್‌ಟೈನರ್ ಚಿತ್ರವಾಗಿದೆ. ಚಿತ್ರದಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗುರು ದೇಶಪಾಂಡೆ ನಿರ್ಮಿಸಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ದಂಪತಿಗಳು ಪರಿಪೂರ್ಣ ವೈವಾಹಿಕ ಜೀವನವನ್ನು ನಡೆಸುತ್ತಿರುತ್ತಾರೆ.ಅವರ ಜಿವನದಲ್ಲಿ, ಹೆಂಡತಿಯು ಚಾಲಕನನ್ನು ಕೊಲ್ಲಲು ಕಾರಣವಾಗುವ ಕಠಿಣ ಪರಿಸ್ಥಿತಿಗೆ ಒಳಗಾಗುತ್ತಾಳೆ ಆಗ ಅವರು ಈ ಅವ್ಯವಸ್ಥೆಯಿಂದ ಹೇಗೆ ಹೊರಬರುತ್ತಾರೆ ಎಂಬುದೇ ಕಥಾ ವಸ್ತು. ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ “ಲವ್ ಯು ರಚ್ಚು” ವನ್ನು ಇದೇ ಭಾನುವಾರ (13 ಫೆಬ್ರವರಿ) ಸಂಜೆ 6.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.