ಮದುಮಗಳು – ಉದಯ ಟಿವಿಯ ಹೊಸ ಧಾರಾವಾಹಿ ಮಾರ್ಚ ೦೭ ರಿಂದ ಸೋಮವಾರದಿಂದ ಶನಿವಾರ ಸಂಜೆ ೬.೦೦ಕ್ಕೆ

ಜಾಹೀರಾತುಗಳು
Madhu Magalu Serial Udaya TV
Madhu Magalu Serial Udaya TV

ಉದಯ ಟಿವಿ ಇಪ್ಪತ್ತೆಂಟನೇ ವಸಂತಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲೋ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಕೌತುಕಗಳ ಜೊತೆ ಸೃಜನಾತ್ಮಕ ವಿಷಯಗಳಿಂದ ವೀಕ್ಷಕರಿಗೆ ರಸದೌತಣ ನೀಡಲು ತಯಾರಾಗಿದೆ. ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಕನ್ಯಾದಾನ, ಕಾವ್ಯಾಂಜಲಿಯಂತಹ ಕೌಟುಂಬಿಕ ಧಾರವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಉದಯ ಟಿವಿ ಈಗ ಮದುಮಗಳು ಎಂಬ ಹೊಸ ಕಥೆಯನ್ನು ನಿಮ್ಮ ಮುಂದೆ ತರಲು ಸಜ್ಜಾಗುತ್ತಿದೆ. ಈಗಾಗಲೇ ಕಾವ್ಯಾಂಜಲಿ ಧಾರಾವಾಹಿಯನ್ನು ಕೊಟ್ಟು ಕನ್ನಡಿಗರ ಮನೆ ಮಾತಾಗಿರುವ ತಂಡ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಹೊಸದಾಗಿ ಮೂಡಿಬರುತ್ತಿರುವ. ಕುಟುಂಬ ಸಮೇತ ನೋಡುವಂತಹ ಈ ಮದುಮಗಳು ಧಾರಾವಾಹಿಯು ಊಹೆಗೂ ಮೀರಿ ತಮ್ಮ ಮನೆಮಗಳಾಗುವುದರಲ್ಲಿ ಸಂಶಯವಿಲ್ಲ. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿಯು ತನ್ನ ಮನೆಗೆ ಮಗಳಾಗುವ ಬದಲು ಸೊಸೆಯಾಗಿ ಮನೆ ಸೇರುವಂತಹ ಕಥೆಯೇ ಈ ಮದುಮಗಳು.

ದೊಡ್ಡ ಮನೆತನದ, ಜವಾಬ್ದಾರಿಯುತ, ದಿಟ್ಟ, ಪರಿಪೂರ್ಣ ಸೊಸೆ ಈ ಕಥೆಯ ಮದುವಂತಿ. ಇವಳು ಹೆಣ್ಣು ಮಗುವಿಗೆ ಜನ್ಮ ಕೊಟ್ಟು, ಆ ಮಗುವಿನ ಬದಲಿಗೆ, ಕಾರಣಾಂತರಗಳಿಂದ ಬೇರೆಯವರ ಗಂಡು ಮಗುವನ್ನು ತನ್ನ ಮಡಿಲಿನಲ್ಲಿ ಬೆಳೆಸುತ್ತಾಳೆ. ತಾನು ಜನ್ಮ ಕೊಟ್ಟ ಹೆಣ್ಣು ಮಗು 24 ವರ್ಷಗಳ ನಂತರ ಎದುರಾದಾಗ, ತನ್ನ ಎಲ್ಲಾ ಗುಣಗಳನ್ನು ಅವಳಲ್ಲಿ ಕಂಡು ಆಶ್ಚರ್ಯಚಕಿತಳಾಗುವುದಂತು ಸುಳ್ಳಲ್ಲ. ತಪ್ಪನ್ನು ಎತ್ತಿ ತೋರಿಸುವ ನಮ್ಮ ಕಥಾನಾಯಕಿ ಗ್ರೀಷ್ಮಾ, ತನ್ನ ತಾಯಿ ಎಂಬ ಅರಿವಿಲ್ಲದೆ ಮದುವಂತಿಯನ್ನು ತರಾಟೆ ತೆಗೆದುಕೊಳ್ಳುವ ಸನ್ನಿವೇಶ ಎದುರಾಗುತ್ತದೆ. ಮದುವಂತಿಯ ಮಡಿಲ್ಲಿ ಬೆಳೆದ ಕಥೆಯ ನಾಯಕ ಶಿಶಿರ್, ತನಗೆ ಆಡಂಬರದ ಜೀವನ ಇಷ್ಟವಿಲ್ಲದಿದ್ದರೂ ತನ್ನಮ್ಮನ ಘನತೆಗೆ ತಕ್ಕಂತೆ ಬೆಳೆದಿರುತ್ತಾನೆ. ಹಾಗೆಯೇ ಮದುವಂತಿ ಕೂಡ ತನ್ನ ಮಗನ ಆಸೆಗೆ ಭಂಗ ಬರದಂತೆ ಪೋಷಿಸಿರುತ್ತಾಳೆ. ಈ ಕಥೆಯಲ್ಲಿ ಅಮ್ಮ ಮಗನ ಬಾಂಧವ್ಯ ಅನಾವರಣಗೊಳ್ಳಲಿದೆ. ಕ್ರಮೇಣ ನಮ್ಮ ನಾಯಕಿ ಹಾಗು ನಾಯಕ ಪ್ರೇಮ ಬಂಧಕ್ಕೆ ಸಿಲುಕುತ್ತಾರೆ. ನಾಯಕಿಯನ್ನು ದ್ವೇಷಿಸೊ ನಮ್ಮ ಮದುವಂತಿಯನ್ನು ಎದುರಿಸಿ ತನ್ನ ಮನೆಗೆ ಹೇಗೆ ಸೊಸೆಯಾಗಿ ನೆಲೆವೂರುತ್ತಾಳೆ ಎಂಬುದು ಈ ಧಾರಾವಾಹಿಯ ಕಥಾಹಂದರ.

ಈ ಧಾರಾವಾಹಿ ಬಳಗದಲ್ಲಿ ಕಿರುತೆರೆಯ ಖ್ಯಾತ ನಟಿ ಸಿರಿಜಾ ಅವರು ಜವಾಬ್ದಾರಿಯುತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಳ್ಳಿತೆರೆಯಲ್ಲಿ ತನ್ನ ವಿಶಿಷ್ಟ ಪಾತ್ರಗಳಿಂದ ಛಾಪು ಮೂಡಿಸಿದ ಸುಂದರ್‌ ವೀಣಾ ಅವರು ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೆ ಧಾರಾವಾಹಿಯ ನಾಯಕಿಯಾಗಿ ಹೊಸ ಪ್ರತಿಭೆ ರಕ್ಷಿತಾ ಅವರು ಕಾಣಿಸಿಕೊಳ್ಳಲಿದ್ದಾರೆ. ಹೊಸ ಪರಿಚಯ ಭವೀಶ್‌ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಈ ಧಾರಾವಾಹಿಯಲ್ಲಿ ಚಿರಪರಿಚಿತ ತಾರಾ ಬಳಗವಿದೆ.

ಮನೆಮಾತಾಗಿರುವ ಕಾವ್ಯಾಂಜಲಿಯ ನಿಪುಣ ತಂತ್ರಜ್ಞರು ಈ ಧಾರಾವಾಹಿಗೂ ಕಾರ್ಯ ನಿರ್ವಹಿಸಲಿದ್ದಾರೆ. ನಿರ್ದೇಶಕರಾಗಿ ಆದರ್ಶ್‌ ಹೆಗ್ಡೆ, ಛಾಯಾಗ್ರಾಹಕರಾಗಿ ರುದ್ರಮುನಿ ಬೆಳೆಗೆರೆ, ಸಹ-ಛಾಯಗ್ರಾಹಕ ಬಾಲಾಜಿ ರಾವ್ ಈ ತಂಡವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ. ಹಿಟ್‌ ಸೀರಿಯಲ್‌ ಕಾವ್ಯಾಂಜಲಿಯ ಜವಾಬ್ದಾರಿಯನ್ನು ನಿರ್ವಹಿಸಿದ ಶಾಕ್‌ ಸ್ಟುಡಿಯೋಸ್‌ ಮುಖ್ಯಸ್ಥ ಶಂಕರ್‌ ವೆಂಕಟರಮಣ್‌ ರವರೇ ಈ ಧಾರಾವಾಹಿ ನಿರ್ಮಾಣದ ಜವಬ್ದಾರಿಯನ್ನು ಹೊತ್ತಿದ್ದಾರೆ.

“ಮದುಮಗಳು ನನ್ನ ಜೀವನದಲ್ಲಿ ಬಹಳ ಮುಖ್ಯವಾದ ಧಾರಾವಾಹಿಯಾಗಿದ್ದು, ನಿರ್ಮಾಪಕನಾಗಿ ಇದು ನನ್ನ 15 ನೇ ಕಾರ್ಯಕ್ರಮವಾಗಿದೆ. ರೇಖಾ ರಾವ್ ಮೇಡಂ, ಸಿರಿಜಾ ಮೇಡಂ ಮತ್ತು ಶ್ರೀ ಸುಂದರ್ ವೀಣಾ ಅವರಂತಹ ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಾವು ಎರಡು ಪ್ರತಿಭಾವಂತ ಹೊಸ ಮುಖಗಳನ್ನು ಮುಖ್ಯಭೂಮಿಕೆಯಲ್ಲಿ ಪರಿಚಯಿಸುತ್ತಿದ್ದೇವೆ. ಕಾವ್ಯಾಂಜಲಿಯಲ್ಲಿ ನಮ್ಮ ಜೊತೆ ಕೆಲಸ ಮಾಡಿದ ತಂತ್ರಜ್ಞರೇ ಈ ಧಾರಾವಾಹಿಗೂ ಇದ್ದಾರೆ. ಈ ಧಾರಾವಾಹಿ ಸಾಕಷ್ಟು ರೋಚಕ ತಿರುವುಗಳನ್ನು ಹೊಂದಿರುವುದಂತೂ ಖಚಿತ. ಈ ನಮ್ಮ ಮದುಮಗಳು ಧಾರಾವಾಹಿ ಮೂಲಕ ಉದಯ ವಾಹಿನಿಯೊಂದಿಗೆ ಮತ್ತೊಂದು ಯಶಸ್ವಿ ಪ್ರಯಾಣಕ್ಕಾಗಿ ಎದುರುನೋಡುತ್ತಿದ್ದೇನೆ” ಎಂದು ನಿರ್ಪಾಕರಾದ ಶಂಕರ ವೆಂಕಟರಮಣ್‌ ತಮ್ಮ ಅಭಿಪ್ರಾಯ ಪಟ್ಟಿದ್ದಾರೆ.

ಜಾಹೀರಾತುಗಳು

Leave a Comment