ವಿಕ್ರಾಂತ್ ಸ್ಪಂದನಾಳನ್ನು ವಿಹಾರಕ್ಕೆ ಕರೆದುಕೊಂಡು ಹೋಗಿ ಅವಳ ಮೇಲಿರುವ ಪ್ರೀತಿಯನ್ನು ನಿವೇದಿಸಿಕೊಳ್ಳಲು ನಿರ್ಧರಿಸುತ್ತಾನೆ. ಸ್ಪಂದನಾಳನ್ನು ಮನವೊಲಿಸಿ, ಇದು ತೀರ್ಥಹಳ್ಳಿಯಲ್ಲಿ ನಡೆಯುವ ಅಧಿಕೃತ ಕಾರ್ಯಕ್ರಮ ಕಡ್ಡಾಯವಾಗಿ ಹಾಜರಾಗಬೇಕು ಎಂದು ಹೇಳಿ ವಿಕ್ರಾಂತ್ ಅವಳನ್ನು ಯಾಮಾರಿಸಿ ಕರೆದುಕೊಂಡು ಹೋಗುತ್ತಾನೆ. ನಂತರ ವಿಕ್ರಾಂತ್ ಹೇಳಿರೋದೆಲ್ಲಾ ಸುಳ್ಳು ಎಂದು ಅರಿವಾಗಿ ಕೋಪಗೊಂಡ ಸ್ಪಂದನ ಹೊಗಬೇಕಾಗಿದ್ದ ದಾರಿಯನ್ನು ಮರೆತು ಅಕ್ರಮ ಚಟುವಟಿಕೆಯ ಕೇಂದ್ರವಾಗಿರುವ ಅಪರಿಚಿತ ಸ್ಥಳಕ್ಕೆ ಬಂದು ತಲುಪುತ್ತಾಳೆ. ಅಲ್ಲಿ ಸ್ಪಂದನಾಳನ್ನು ಗೂಂಡಾಗಳು ಬೆನ್ನಟ್ಟುತ್ತಾರೆ ಆದರೆ ಒಬ್ಬ ವ್ಯಕ್ತಿ ಆಕೆಯನ್ನು ರಕ್ಷಿಸುತ್ತಾನೆ. ತದನಂತರ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಶಮಂತ್ ಇರಬಹುದು ಎಂಬ ಅನುಮಾನ ಸ್ಪಂದನಾಳಿಗೆ ಕಾಡುತ್ತದೆ.
ಅನುಮಾನ ಬಗೆಹರಿಸಲು ಸ್ಪಂದನಾ ಅವ್ಯಕ್ತಿಯನ್ನು ಶಮಂತ್ ಎಂದು ಕರೆಯುತ್ತಾಳೆ. ಆದರೆ ಶಮಂತ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಅದಲ್ಲದೆ ಆತನೇ ಆಕೆಯನ್ನು ಅಪಹರಿಸಿ ಒಂದು ಕೋಣೆಯಲ್ಲಿ ಕೂಡಿಹಾಕುತ್ತಾನೆ. ಅಚಾನಕ್ ಆಗಿ ಶಮಂತ್ ಬಾಯಿ ತಪ್ಪಿ ಸ್ಪಂದನಾ ಹೆಸರನ್ನು ಉಚ್ಚರಿಸುತ್ತಾನೆ ಆಗ ಸ್ಪಂದನಾಳಿಗೆ ಶಮಂತ್ ಗೊತ್ತಿದ್ದು ಗೊತ್ತಿಲ್ಲದಂತೆ ನಟಿಸುತ್ತಿರುವುದು ಎಂದು ತಿಳಿಯುತ್ತದೆ. ಸ್ಪಂದನಾಳನ್ನು ಹುಡುಕುತ್ತಾ ವಿಕ್ರಾಂತ್ ಅವರಿದ್ದ ಕೋಣೆಗೆ ದಾಳಿ ಮಾಡುತ್ತಾನೆ ಜೊತೆಗೆ ತಾನೇ ದಾಳಿಗೊಳಗಾದವನಂತೆ ನಟಿಸುತ್ತಾನೆ ಆಗ ಶಮಂತ್ ವಿಕ್ರಾಂತ್ ನನ್ನು ರಕ್ಷಿಸಲು ಮುಂದಾಗುತ್ತಾನೆ. ನಂತರ ಶಮಂತ್ ಒಂದು ರಹಸ್ಯ ಕಾರ್ಯಾಚರಣೆಯಲ್ಲಿದ್ದರು ಎಂದು ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಡುತ್ತಾನೆ. ಶಮಂತ್ ನನ್ನು ನಾಯಕ್ ಮನೆಗೆ ಮರಳಿ ಬರುವಂತೆ ವಿಕ್ರಂತ್ ಮತ್ತು ಸ್ಪಂದನ ಮನವೊಲಿಸಲು ಯತ್ನಿಸುತ್ತಾರೆ. ಮುಂದೆ ಶಮಂತ್ ಮರಳಿ ಬಂದಾಗ ಶಮಂತ್ ನನ್ನು ನೋಡಿ ವೈಷ್ಣವಿ ಆಶ್ಚರ್ಯ ಚಕಿತಳಾಗುತ್ತಾಳೆ. ಮತ್ತೊಂದೆಡೆ ನಾಯಕ್ ಮನೆತನದ ಎಲ್ಲರೂ ಶಮಂತ್ ಹಿಂದಿರುಗಿ ಬಂದಿರುವುದನ್ನು ನೋಡಿ ಸಂಭ್ರಮ ಪಡುತ್ತಾರೆ.
ಹೀಗೆ ಮುಂದೆ ಸಾಗುತ್ತಾ, ನಾಯಕ್ ಮನೆಗೆ ತನ್ನ ಪ್ರವೇಶದ ಬಳಿಕ ವಿಕ್ರಾಂತ್ ತನಗೆ ಮಾಡಿದ ದ್ರೋಹಕ್ಕೆ ಆತನ ಜೊತೆಗಿನ ಸ್ನೇಹವನ್ನು ಶಮಂತ್ ನಿರಾಕರಿಸಲು ಮುಂದಾಗುತ್ತಾನೆ. ನಂತರ ವೈಷ್ಣವಿಗೆ ಎಲ್ಲಾ ಅನಗತ್ಯ ಬಂಧಗಳಿಂದ ಮುಕ್ತಗೊಳಿಸಲು ವಿಚ್ಛೇದನವನ್ನು ನೀಡುವುದಾಗಿ ಹೇಳುತ್ತಾನೆ.ಈ ಕಾರಣದಿಂದಾಗಿ ಮುಂದೆ ವಿಕ್ರಾಂತ್ ಮತ್ತು ಸ್ಪಂದನಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅವರಿಬ್ಬರು ಪರಸ್ಪರ ದೂರವಾಗುವ ಪರಿಸ್ಥಿತಿ ಎದುರಾಗುತ್ತದೆ.
ತಪ್ಪದೇ ವೀಕ್ಷಿಸಿ “ಮರಳಿ ಮನಸಾಗಿದೆ” ಸೋಮ-ಶನಿವಾರ ರಾತ್ರಿ 8.30ಕ್ಕೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ
ಇದೇ ಡಿಸೆಂಬರ್ 11 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ - ಗಂಗೆ ಗೌರಿ ಹೊಸ…
ಸ್ಟಾರ್ ಸುವರ್ಣ - ಆಸೆ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ನೂತನವಾದ ಮನಮುಟ್ಟುವ ಮನರಂಜನೆಯ ಧಾರಾವಾಹಿಗಳನ್ನು ನೀಡುತ್ತಲೇ ಬರುತ್ತಿದೆ,…
ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಹೀಗಾಗಿ ನೋಡುಗರಿಗೆ ಇನ್ನಷ್ಟು ಮನೋರಂಜನೆ ನೀಡಲು ಶುರುಮಾಡಿದ ವಿಭಿನ್ನ…
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಅವನು ಮತ್ತೆ ಶ್ರಾವಣಿ' ಎಂಬ…
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ, ಪ್ರೇಕ್ಷಕರಿಗೆ…
ರಿಯಾಲಿಟಿ ಶೋಗಳಲ್ಲಿ ನಿರೀಕ್ಷೆಗೂ ಮೀರಿ ತನ್ನದೇ ಸಂಚಲನ ಮೂಡಿಸಿದ ವಾಹಿನಿ ಜ಼ೀ ಕನ್ನಡ. ಪ್ರೇಕ್ಷಕರ ಬೇಕು, ಬೇಡಗಳನ್ನು ಅರ್ಥೈಸಿಕೊಂಡು ಇಲ್ಲಿಯವರೆಗೂ…