ನಂಬರ್ 1 ಸೊಸೆ – ಮಧ್ಯಾಹ್ನ ಊಟದ ಜೊತೆಗೆ ಮನರಂಜನೆಯ ಸವಿಯನ್ನು ಬಡಿಸಲು ಬರ್ತಿದೆ

ಜಾಹೀರಾತುಗಳು
Number 1 Sose Serial
No.1 Sose Serial

ಮಧ್ಯಾಹ್ನ ಮನೆ ಮಂದಿಗೆಲ್ಲಾ ಮನರಂಜನೆ ನೀಡೋದಕ್ಕೆ ಎಲ್ಲದರಲ್ಲೂ ನಂಬರ್ 1 ಆಗಿರ್ಬೇಕು ಅನ್ನೋ ಶ್ರೀಮಂತ ಮನೆತನದ ಯಜಮಾನಿ ವಾಗ್ದೇವಿಯ ಮನೆಗೆ ಅನಕ್ಷರಸ್ಥ ಹುಡುಗಿ ಸೊಸೆಯಾಗಿ ಬರುವ ರೋಚಕ ತಿರುವುಗಳಿರುವ ಹೊಚ್ಚ ಹೊಸ ಧಾರಾವಾಹಿ “ನಂಬರ್ 1 ಸೊಸೆ” ಇದೇ ಸೋಮವಾರದಿಂದ ಅಂದ್ರೆ ಮೇ 10 ರಿಂದ ನಿಮ್ಮ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ವಿಭಿನ್ನ-ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನ ಮನರಂಜಿಸುತ್ತಾ ಬಂದಿರುವ ಜೀ಼ ಕನ್ನಡ ವಾಹಿನಿಯು ಕನ್ನಡ ಕಿರುತೆರೆ ಲೋಕದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಸಾಮಾಜಿಕ ಕಳಕಳಿಯನ್ನು ಉಳಿಸಿಕೊಂಡು ಕನ್ನಡಿಗರನ್ನು ಮನರಂಜಿಸುವುದರಲ್ಲಿ ಜೀ಼ ಕನ್ನಡ ವಾಹಿನಿಯು ಸದಾ ಮುಂದಿರುತ್ತದೆ.

ಕೊರೋನಾ ಮಹಾಮಾರಿಯ ಹಾವಳಿಯಿಂದ ಲಾಕ್‍ಡೌನ್ ಹೆಸರಲ್ಲಿ ಇಡೀ ರಾಜ್ಯವೇ ಸ್ಥಬ್ಧವಾಗಿದೆ, ಎಲ್ಲರ ಮನಸಲ್ಲು ಭಯದ ವಾತಾವರಣ ಸೃಷ್ಠಿಯಾಗಿದೆ, ಇಡೀ ದಿನ ನಾಲ್ಕು ಗೋಡೆಗಳ ಮಧ್ಯೆ ಜೀವನ ಕಳೆಯುವಂತಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಜೀ಼ ಕನ್ನಡ ನಿಮ್ಮ ಜೊತೆ ಇದ್ದೇ ಇರುತ್ತೆ. ನೊಂದಿರೊ ನಿಮ್ಮ ಮನಸುಗಳನ್ನ ರಿಫ್ರೆಷ್ ಮಾಡಿ. ಸ್ವಲ್ಪ ಮಟ್ಟಿಗಾದರು ನಿಮ್ಮಲ್ಲಿರುವ ಆತಂಕವನ್ನ ದೂರ ಮಾಡೋದಕ್ಕೆ ಜೀ಼ ಕನ್ನಡ ವಾಹಿನಿ ಒಂದು ಪುಟ್ಟ ಪ್ರಯತ್ನ ಮಾಡ್ತಿದೆ. ಅನ್‍ಲಿಮಿಟೆಡ್ ಮನರಂಜನೆ ಎನ್ನುವ ಪರಿಕಲ್ಪನೆಯ ಮೂಲಕ ನಿಮಗೆ ಭರಪೂರ ಮನರಂಜನೆ ನೀಡೋಕೆ ಜೀ಼ ಕನ್ನಡ ವಾಹಿನಿ ಸಿದ್ಧವಾಗಿದೆ. ಇದೇ ಸೋಮವಾರದಿಂದ – ಶನಿವಾರದವರೆ ನಿಮ್ಮ ನೆಚ್ಚಿನ ಎಲ್ಲಾ ಧಾರಾವಾಹಿಗಳು ನಿಮ್ಮನ್ನು ರಂಜಿಸಲಿವೆ.

ಜಾಹೀರಾತುಗಳು

Leave a Comment