ಪುಟ್ಟಕ್ಕನ ಮಕ್ಕಳು ಮದುವೆ ಮುರಿದು ಬಿತ್ತು ಮುಂದೇನು? ಕಂಠಿ ಮಾಡಿದ ಶಪಥದ ಕಥೆ ಏನು?
ಕನ್ನಡ ಕಿರುತೆರೆ ಮಾರುಕಟ್ಟೆಯನ್ನು ನಂಬರ್ 1 ಸ್ಥಾನದಲ್ಲಿ ನಿಂತು ಮುನ್ನಡೆಸುತ್ತಿರುವ ಮನರಂಜನಾ ವಾಹಿನಿ ಜೀ ಕನ್ನಡ . ತಮ್ಮ ವಿಶೇಷ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಬದುಕಿಗೆ ಹತ್ತಿರವಾಗಿರುವ ವಾಹಿನಿ ಹಲವಾರು ಮೈಲಿಗಲ್ಲುಗಳನ್ನು ದಾಟಿ ದಾಖಲೆಗಳನ್ನು ನಿರ್ಮಿಸುತ್ತಲೇ ಇರುವುದು ಈಗ ಇತಿಹಾಸ . ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಚಂದನವನದ ಪುಟ್ಮಲ್ಲಿ ಹಿರಿಯ ನಟಿ ಉಮಾಶ್ರೀ ಅವರನ್ನು ಕಿರುತೆರೆಗೆ ಕರೆತಂದ ಹೆಗ್ಗಳಿಕೆ ಹೊಂದಿರುವ ವಾಹಿನಿ ಈ ಧಾರಾವಾಹಿಯ ಮೊದಲ ಸಂಚಿಕೆಯಿಂದ ಈವರೆಗೂ ಕಥಾ ನಿರೂಪಣಾ ಶೈಲಿಯಲ್ಲಿ ಹಿಡಿತ ಸಾಧಿಸಿ…