ಕಿರುತೆರೆ ಇತಿಹಾಸದಲ್ಲಿ ಮೊದಲ ಬಾರಿಗೆ ಸನ್ನೆ ಭಾಷೆಯಲ್ಲಿ ಮೂಡಿ ಬರಲಿದೆ ಹೊಸ ಧಾರಾವಾಹಿ “ರಾಣಿ” || ಇಂದಿನಿಂದ ಸಂಜೆ 6.30 ಕ್ಕೆ

ಜಾಹೀರಾತುಗಳು
Raani Serial Suvarna TV
Raani Serial Suvarna TV

ಅನೇಕ ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ‘ರಾಣಿ’ ಎಂಬ ಹೊಸ ಧಾರಾವಾಹಿಯೊಂದು ಪ್ರಸಾರವಾಗುತ್ತಿದೆ. ಕಿರುತೆರೆಯಲ್ಲಿ ಸತತ 15 ವರ್ಷಗಳಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯು ‘ರಾಣಿ’ ಧಾರಾವಾಹಿಗಾಗಿ ಹೊಸ ಪ್ರಯೋಗವನ್ನು ಮಾಡುತ್ತಿದೆ.

ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಸ್ಟಾರ್ ಸುವರ್ಣ’ ವಾಹಿನಿಯು ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದು, ‘ರಾಣಿ’ ಧಾರಾವಾಹಿಯು ಸನ್ನೆ ಭಾಷೆಯಲ್ಲಿಯೂ ಮೂಡಿಬರಲಿದೆ. ಸಾಮಾನ್ಯವಾಗಿ ಧಾರಾವಾಹಿಗಳು ಪ್ರಸಾರವಾಗುವುದು ಸರ್ವೇ ಸಾಮಾನ್ಯ ಆದರೆ ಶ್ರವಣ ನ್ಯೂನ್ಯತೆ ಹೊಂದಿರುವವರು ಧಾರಾವಾಹಿಗಳನ್ನು ನೋಡೋದು ಸ್ವಲ್ಪ ಕಷ್ಟ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯು ‘ರಾಣಿ’ ಧಾರಾವಾಹಿಯ ಸಂಚಿಕೆಯಲ್ಲಿ ಸನ್ನೆ ಭಾಷೆಯಲ್ಲಿಯೂ ವಿವರಿಸಲಾಗುತ್ತದೆ. ಹೀಗಾಗಿ ಶ್ರವಣ ನ್ಯೂನ್ಯತೆ ಹೊಂದಿರುವವರು ಕೂಡ ‘ರಾಣಿ’ ಧಾರಾವಾಹಿಯನ್ನು ನೋಡಬಹುದು.

ಜಾಹೀರಾತುಗಳು

ಸದಾಕಾಲ ಹೊಸತನಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ “ರಾಣಿ” ಇಂದಿನಿಂದ ಸಂಜೆ 6.30 ಕ್ಕೆ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Leave a Comment