ಸವದತ್ತಿಯಲ್ಲಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿ ವಾಹನಕ್ಕೆ ಚಾಲನೆ..

ಜಾಹೀರಾತುಗಳು
Renuka Yellamma Serial Promotions
Renuka Yellamma Serial Promotions

ಕನ್ನಡ ಕಿರುತೆರೆಗೆ ಹಲವಾರು ಮಹತ್ವದ ಪೌರಾಣಿಕ ಧಾರಾವಾಹಿಗಳನ್ನು ನೀಡಿ ವೀಕ್ಷಕರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಮತ್ತೊಮ್ಮೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ, ರಾಷ್ಟ್ರದ ಹಲವಾರು ಭಾಗಳಲ್ಲಿ ಭಕ್ತರನ್ನು ಹೊಂದಿರುವ ಶ್ರೀರೇಣುಕಾ ಯಲ್ಲಮ್ಮ ಮಹ್ಮಾತೆಯ ಕುರಿತಾದ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಯನ್ನು ಇದೇ ಜನವರಿ 23 ರಿಂದ ಪ್ರಸಾರ ಮಾಡಲಿದೆ.

ಈ ಧಾರಾವಾಹಿಯ ಪ್ರಸಾರಕ್ಕೂ ಮುನ್ನ ಈ ದೇವಿಯ ದರ್ಶನವನ್ನು ರಾಜ್ಯಾದ್ಯಂತ ಭಕ್ತರಿಗೆ ಮಾಡಿಸುವ ಉದ್ದೇಶದಿಂದ ವಾಹಿನಿ ಹಮ್ಮಿಕೊಂಡಿದ್ದ “ಟೆಂಪಲ್ ಆನ್ ವೀಲ್ಸ್” ಎಂಬ ಕಾರ್ಯಕ್ರಮಕ್ಕೆ ಸವದತ್ತಿಯಲ್ಲಿ ದೇವಿ ದರ್ಶನದ ವಾಹನಕ್ಕೆ ಚಾಲನೆ ನೀಡಲಾಯಿತು. ಸುವರ್ಣ ಸಂಕಲ್ಪ ಖ್ಯಾತಿಯ ಡಾ. ಗೋಪಾಲ ಶರ್ಮಾ ಗುರೂಜೀ ಈ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಯಲ್ಲಮ್ಮ ದೇವಾಲಯದ ಹಿರಿಯ ಸ್ವಾಮೀಜಿಗಳಾದ ಯಡಿಯೂರಯ್ಯ ಮತ್ತಿತರರು ಹಾಜರಿದ್ದು ಈ ಮಹತ್ವದ ಕಾರ್ಯಕ್ರಮಕ್ಕೆ ಶುಭಕೋರಿದರು.

ಜಾಹೀರಾತುಗಳು

ಮನೆಯಲ್ಲೇ ದೇವಿ ದರ್ಶನ: ಇದೇ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಗೋಪಾಲಶರ್ಮಾ ಗುರೂಜೀ ಅವರು ಸ್ಟಾರ್ ಸುವರ್ಣ ವಾಹಿನಿಯವರು ಉತ್ತರ ಕರ್ನಾಟಕದ ಶಕ್ತಿದೇವತೆಯಾದ ಯಲ್ಲಮ್ಮದೇವಿಯ ಕತೆಯನ್ನು ಎಲ್ಲ ಭಕ್ತರ ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಲೋಕ ಕಲ್ಯಾಣದ ಈ ಕಾರ್ಯಕ್ಕೆ ಎಲ್ಲರೂ ಸಹಕರಿಸುವಂತಾಗಲಿ, ಈ ಧಾರಾವಾಹಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
.
ಉಧೋ ಉಧೋ ವಿಶೇಷ : ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರವಾಹಿಯು ಜನವರಿ 23 ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30 ಕ್ಕೆ ಪ್ರಸಾರವಾಗಲಿದೆ.
ಈ ಧಾರವಾಹಿಯಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್ ಬಳಸಿಕೊಳ್ಳಲಾಗಿದೆ. ವೀಕ್ಷಕರು ಇದೇ ಮೊದಲಬಾರಿಗೆ ಹಲವಾರು ಹೊಸ ತಂತ್ರಜ್ಞಾನದ ಅನುಭವ ಕಾಣಲಿದ್ದರೆ.

ಬೃಹತ್‌ ನಿರ್ಮಾಣ ಸಂಸ್ಥೆಯಾದ ನಂದಿ ಪ್ರೋಡಕ್ಷನ್ ಈ ಧಾರಾವಾಹಿ ನಿರ್ಮಾಣ ಮಾಡಿದೆ. ಇದಕ್ಕಾಗಿ ಬೆಂಗಳೂರು ಹೊರ ವಲಯದಲ್ಲಿ ಭಾರಿ ಸೆಟ್ ಗಳನ್ನು ಹಾಕಲಾಗಿದ್ದು ಧಾರವಾಹಿಯಲ್ಲಿ ದೊಡ್ಡ ತಾರಾಬಳಗ ಕಾಣಬಹುದು.

Leave a Comment