
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ವಿನೂತನ ಧಾರಾವಾಹಿಗಳ ಮೂಲಕ ಮುಂಚೂಣಿಯಲ್ಲಿರುವ ಜೀ ಕನ್ನಡ ಈ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಿಸುತ್ತಿದೆ. ಜೀ ಕನ್ನಡದಲ್ಲಿ ದಿಟ್ಟ ಹೆಣ್ಣುಮಗಳ ಪ್ರತಿನಿಧಿಯಾಗಿರುವ “ಸತ್ಯ” ನಿಜ ಜೀವನದ “ಸತ್ಯ”ರ ಪಾತ್ರಗಳೊಂದಿಗೆ ವಿನೂತನ ರೀತಿಯಲ್ಲಿ ಆಚರಿಸಲಿದ್ದಾರೆ. ಸಂಜೆ 5.30ಕ್ಕೆ ಧಾರಾವಾಹಿಯ ಸತ್ಯ ನಿಜ ಜೀವನದ ಸತ್ಯರನ್ನು ಸಂದರ್ಶಿಸುವ ಅಪರೂಪದ ಕಾರ್ಯಕ್ರಮ ನಡೆಯಲಿದೆ.
“ಸತ್ಯ” ಧಾರಾವಾಹಿ ಪ್ರಾರಂಭವಾದ ದಿನದಿಂದಲೂ ಮಹಿಳೆಯರನ್ನು ಅಪಾರವಾಗಿ ಸೆಳೆದಿದೆ. ಸತ್ಯ ಪಾತ್ರವು ಎಲ್ಲ ಮಹಿಳೆಯರಿಗೂ ಸ್ಫೂರ್ತಿ ತುಂಬಿದೆ. ಈಗ ನಿಜ ಜೀವನದ ಸತ್ಯ ಪಾತ್ರಧಾರಿಗಳಾದ ಮೈಸೂರಿನ ಆಟೊ ಚಾಲಕಿ ಸೌಮ್ಯಾ ರಾಣಿ, ಮಂಡ್ಯದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯ ನಿರ್ವಹಿಸುವ ಸುಮಲತಾ, ಬೆಂಗಳೂರಿನ ಗೋ ಪಿಂಕ್ ಕ್ಲಬ್ ನ ರೂಪಾ ಆಲಿಸಾ, ಬೆಂಗಳೂರಿನ ಸ್ವಿಗ್ಗಿ ಡೆಲಿವರಿ ಮಾಡುವ ಮೂಲಕ ಬದುಕು ಕಟ್ಟಿಕೊಂಡ ಉಮಾ ರೆಡ್ಡಿ ಅವರುಗಳು ಸತ್ಯ ಧಾರಾವಾಹಿಯ ಪಾತ್ರಗಳಂತೆಯೇ ಬದುಕಿದವರು. ಬದುಕಿನ ಸಂಕಷ್ಟಗಳನ್ನು ಎದುರಿಸಿ ದಿಟ್ಟವಾಗಿ ನಿಂತವರು.
ಈ ಎಲ್ಲರೂ ಧಾರಾವಾಹಿ ಪಾತ್ರಕ್ಕೆ ಸ್ಫೂರ್ತಿಯಾದವರು, ಒಟ್ಟಿಗೆ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಿದ್ದಾರೆ. ಸತ್ಯ ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದು.