ಹಿಟ್ಲರ್ ಕಲ್ಯಾಣ – ಜೀ ಕನ್ನಡ ಆಗಸ್ಟ್ 9 ರಂದು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸರವಾಗಲಿದ್ದು ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ
ಸೊಸೆಯಂದಿರೇ ಮಾವನಿಗೆ ಅತ್ತೆ ಹುಡುಕುವ ಪರಿಕಲ್ಪನೆಯನ್ನು ಎಲ್ಲಾದರೂ ಕೇಳಿದ್ದೀರಾ? – ಹಿಟ್ಲರ್ ಕಲ್ಯಾಣ

ಇವನು ಪರ್ಫೆಕ್ಟು, ಅವಳು ಎಡವಟ್ಟು – ಜೀ ಕನ್ನಡ ಹೊಸದಾಗಿ ಪ್ರಾರಂಭಿಸುತ್ತಿರುವ ವಿನೂತನ ಧಾರಾವಾಹಿ “ಹಿಟ್ಲರ್ ಕಲ್ಯಾಣ”ದ ಸಾರಾಂಶ ಇದು. ಹೊಸತರದ ಪ್ರೇಮಕಥೆಗಳನ್ನು ಮೆಚ್ಚಿ ಪುರಸ್ಕರಿಸುತ್ತಿರುವ ಕನ್ನಡ ಕಿರುತೆರೆ ವೀಕ್ಷಕರಿಗೆ “ಹಿಟ್ಲರ್ ಕಲ್ಯಾಣ” ವಿನೂತನ ಅನುಭವ ನೀಡಲಿದೆ. ಇಲ್ಲಿಯವರೆಗೆ ಅತ್ತೆ ಸೊಸೆಯಂದಿರು ಹುಡುವುದು ಲೋಕಾರೂಢಿ . ಆದರೆ ಸೊಸೆಯಂದಿರೇ ಅತ್ತೆಯನ್ನು ಹುಡುಕುವ ವಿಶಿಷ್ಟ ಕಥೆಯನ್ನು ಇದು ಹೊಂದಿದೆ.
ಮಾವ ಎ.ಜೆ. ಅಲಿಯಾಸ್ ಅಭಿರಾಮ್ ಜೈಶಂಕರ್ ಕಿಂಚಿತ್ತೂ ಅಶಿಸ್ತನ್ನು ಸಹಿಸದ ಅತ್ಯಂತ ಕಠಿಣ ಶಿಸ್ತುಬದ್ಧ ವ್ಯಕ್ತಿ. ಹಿಟ್ಲರ್ ಎಂದೇ ಎಲ್ಲರಿಂದ ಕರೆಸಿಕೊಳ್ಳುತ್ತಾನೆ. ಇಂಥಾ ಮಾವನಿಗೆ ತಕ್ಕ ಜೋಡಿಯನ್ನು ತರಬೇಕೆನ್ನುವುದು ಸೊಸೆಯಂದಿರ ಆಶಯ.ಎ.ಜೆ. ಎಷ್ಟು ಪರ್ಫೆಕ್ಟೋ ಅಷ್ಟೇ ಎಡವಟ್ಟಿನ ಹುಡುಗಿ ಲೀಲಾ. ಅವಳು ಯಾವ ಕೆಲಸ ಮಾಡಿದರೂ ಅದಕ್ಕೆ ಹತ್ತಾರು ಸಮಸ್ಯೆಗಳನ್ನು ಸೃಷ್ಟಿಸುತ್ತಿರುತ್ತಾರೆ. ಅಂಥಾ ಪರ್ಫೆಕ್ಟ್ ವ್ಯಕ್ತಿಗೆ ಈ ಎಡವಟ್ಟಿನ ಹುಡುಗಿ ಜೋಡಿಯಾಗುತ್ತಾಳಾ ಎನ್ನುವುದು ಕುತೂಹಲ.
ಎ.ಜೆ.ಯ ಗಂಭೀರ ಸ್ವಭಾವಕ್ಕೆ ತದ್ವಿರುದ್ಧವಾದ ಲೀಲಾ ಬಹಳ ಸರಳ, ಚಟುವಟಿಕೆಯ ಉತ್ಸಾಹಿ ಹುಡುಗಿ. ಆಕೆ ತನ್ನ ಕಿರಿಯ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರೂ ತಂದೆಯ ಪ್ರೀತಿಯಲ್ಲಿ ಬೆಳೆದಿರುತ್ತಾಳೆ. ಆದರೆ ಆಕೆಯ ಮಲತಾಯಿಗೆ ಲೀಲಾ ಮೇಲೆ ಪ್ರೀತಿ ಇದ್ದರೂ ಎನೋ ಹೇಳಿಕೊಳ್ಳಲಾಗದ ಆತಂಕವಿದೆ. ಎ.ಜೆ.ಯನ್ನು ಮದುವೆಯಾಗಿ ಸೊಸೆಯಂದಿರು ಮತ್ತು ಮನೆಯನ್ನು ನಿಭಾಯಿಸುತ್ತಾಳಾ ಲೀಲಾ ಎಂಬ ಎಡವಟ್ಟು ಅನಿಶ್ಚಿತತೆಗಳಿಗೆ ತನ್ನನ್ನು ತಾನು ಒಗ್ಗಿಸಿಕೊಂಡು `ಪರಿಪೂರ್ಣ’ತೆಯ ಪರಿಕಲ್ಪನೆಯನ್ನೇ ಪ್ರಶ್ನಿಸುತ್ತಾಳಾ ಎನ್ನುವುದು ಹಿಟ್ಲರ್ ಕಲ್ಯಾಣ್ ಧಾರಾವಾಹಿಯ ಬೆಚ್ಚನೆಯ ಪ್ರೇಮಕಥೆಯಾಗಿದೆ.
