ಪುಟ್ಟಕ್ಕನ ಮಕ್ಕಳು – ಡಿಸೆಂಬರ್ 13ರಿಂದ ಜೀ ಕನ್ನಡದಲ್ಲಿ ವಿನೂತನ ಧಾರಾವಾಹಿ

ಜಾಹೀರಾತುಗಳು
ಪುಟ್ಟಕ್ಕನ ಮಕ್ಕಳು

Puttakkana Makkalu Serial

ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಕರ್ನಾಟಕದ ನಂಬರ್ 1 ವಾಹಿನಿ ಜೀ ಕನ್ನಡ ಈಗ “ಪುಟ್ಟಕ್ಕನ ಮಕ್ಕಳು” ಎಂಬ ವಿನೂತನ ಮೆಗಾ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಡಿಸೆಂಬರ್ 13 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ‘ಪುಟ್ಟಕ್ಕನ ಮಕ್ಕಳು’ ಪ್ರಸಾರವಾಗಲಿದೆ. ಮಾಜಿ ಸಚಿವೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ. ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಕಲಾವಿದೆ ಉಮಾಶ್ರೀ ಅಭಿನಯ ವೀಕ್ಷಕರಿಗೆ ಥ್ರಿಲ್ ನೀಡಲಿದೆ. ಪುಟ್ಟಕ್ಕನ ಪಾತ್ರದಲ್ಲಿ ಅವರು ಮೂರು ಹೆಣ್ಣು ಮಕ್ಕಳ ತಾಯಿಯಾಗಿ ನಟಿಸಿದ್ದಾರೆ.

ಮಂಡ್ಯ ಜಿಲ್ಲೆ ದೇವಿಪುರ ಎನ್ನುವ ಊರಿನಲ್ಲಿ ನಡೆಯುವ ಕತೆ ಇದು. ಪುಟ್ಟಕ್ಕನಿಗೆ ಜೀವನಾಧಾರ ಆಕೆ ನಡೆಸುವ ಮೆಸ್. ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಆಕೆಯ ಗಂಡ ಪುಟ್ಟಕ್ಕನನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗಿರುತ್ತಾನೆ. ಸಹನ, ಸ್ನೇಹ ಮತ್ತು ಸುಮ ಎಂಬ ಮೂವರು ಜಾಣ ಹೆಣ್ಣುಮಕ್ಕಳು ಪುಟ್ಟಕ್ಕನಿಗೆ. ಅವರೇ ಆಕೆಯ ಬದುಕು. ಎರಡನೇ ಮಗಳು ಸ್ನೇಹ ಐ.ಎ.ಎಸ್. ಅಧಿಕಾರಿಯಾಗಿ ತನ್ನ ಅಮ್ಮ ಪುಟ್ಟಕ್ಕನ ಘನತೆಯನ್ನು ಹೆಚ್ಚಿಸಬೇಕು ಅನ್ನೋ ಮಹತ್ವಾಕಾಂಕ್ಷೆ ಹೊಂದಿರುತ್ತಾಳೆ. ಪುಟ್ಟಕ್ಕನ ಗಂಡ ತನ್ನ ಎರಡನೇ ಹೆಂಡತಿ ರಾಜೇಶ್ವರಿ ಕೈಗೊಂಬೆ. ಪಕ್ಕದೂರಿನಲ್ಲಿ ಬಡ್ಡಿ ವಸೂಲಿ ಮಾಡುವ ನಾಯಕ ಕಂಠಿ, ಅವನ ಅಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದರೆ ಸುತ್ತಲಿನ ಹತ್ತೂರಿನ ಜನ ಹೆದರುತ್ತಾರೆ. ಪುಟ್ಟಕ್ಕನ ಮಗಳು ಸ್ನೇಹ ಬದುಕಿನಲ್ಲಿ ಕಂಠಿ ಪ್ರವೇಶಿಸುವುದು ಈ ಕತೆಯ ಇನ್ನೊಂದು ಪ್ರಮುಖ ತಿರುವು.

ಜಾಹೀರಾತುಗಳು

ಉಮಾಶ್ರೀ ಅವರಲ್ಲದೆ, ಹೆಸರಾಂತ ಕಲಾವಿದರಾದ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ, ಗುರು ಹೆಗಡೆ, ಸುನಂದ ಹೊಸಪೇಟೆ, ಹೊಸ ಕಲಾವಿದರಾದ ಸಂಜನಾ, ಅಕ್ಷರ, ಶಿಲ್ಪಾ, ನಿಶಾ, ಧನುಷ್, ಹಾಗೇ ವಿಶೇಷ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಂಜೇದ್ರ ಅಭಿನಯಿಸಿದ್ದಾರೆ. ‘ ಜೊತೆ ಜೊತೆಯಲಿ’ ಖ್ಯಾತಿಯ ಆರೂರು ಜಗದೀಶ್ ಈ ಧಾರಾವಾಹಿಯನ್ನು ನಿರ್ದೇಶಿಸಿದ್ದು, ಜೆಎಸ್ ಪ್ರೊಡಕ್ಷನ್ಸ್ ನಿರ್ಮಾಣದ ಹೊಣೆ ಹೊತ್ತಿದೆ. ಸಹನಿರ್ಮಾಪಕರಾಗಿ ಪ್ರದೀಪ್ ಆಜ್ರಿ ಮತ್ತು ಪರೀಕ್ಷಿತ್ ಎಂ.ಎಸ್ ಕೈಜೋಡಿಸಿದ್ದಾರೆ.

ಜೀ ಕನ್ನಡ ತಂಡದ ಕತೆಗೆ ಸತ್ಯಕಿ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆ ಈಗಾಗಲೇ ಜನಪ್ರಿಯವಾಗಿದೆ. ಹರ್ಷಪ್ರಿಯ ಅವರ ಸಾಹಿತ್ಯಕ್ಕೆ, ಖ್ಯಾತ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ರಾಗಸಂಯೋಜನೆ ಮಾಡಿದ್ದು, ಪಂಚಮ ಜೀವ ಹಾಡಿದ್ದಾರೆ.

You may also like...

Leave a Reply

Your email address will not be published. Required fields are marked *