ಶ್ಯಾಡೊ – ಜೀ ಕನ್ನಡದಲ್ಲಿ ವಿನೋದ್ ಪ್ರಭಾಕರ್ ಅಭಿನಯದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

ಜಾಹೀರಾತುಗಳು
Shadow Movie WTP

Shadow Movie WTP

ಕನ್ನಡದ ನಂಬರ್ ಮನರಂಜನಾ ವಾಹಿನಿ ಜೀ ಕನ್ನಡ ಮೊದಲನೇ ಲಾಕ್ ಡೌನ್ ನಂತರ ಬಿಡುಗಡೆಯಾದ ಸ್ಯಾಂಡಲ್ ವುಡ್ ಅತ್ಯಂತ ಸೂಪರ್ ಹಿಟ್ ಚಿತ್ರ “ಶ್ಯಾಡೊ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಯೋಜಿಸಿದೆ. ಶ್ಯಾಡೊ ಕನ್ನಡದ ಜನಪ್ರಿಯ ಚಿತ್ರಗಳಲ್ಲಿ ಒಂದಾಗಿದ್ದು ಅದಕ್ಕೆ ಪೂರಕವಾಗಿ ವಿನೋದ್ ಪ್ರಭಾಕರ್ ಅವರ ಪವರ್ ಫುಲ್ ಪರ್ಫಾರ್ಮೆನ್ಸ್ ಪ್ರೇಕ್ಷಕರನ್ನು ಸೆಳೆದಿತ್ತು. ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾದ ಕೂಡಲೇ ಕನ್ನಡ ಸಿನಿ ಪ್ರೇಕ್ಷಕರು ಅಭೂತಪೂರ್ವವಾಗಿ ಈ ಚಿತ್ರವನ್ನು ಸ್ವಾಗತಿಸಿ ಬೆಂಬಲಿಸಿದರು.

ಜಾಹೀರಾತುಗಳು

ಮೇ 2ರಂದು ಭಾನುವಾರ ಸಂಜೆ 7.30 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ವಿನೋದ್ ಪ್ರಭಾಕರ್ ಅಭಿನಯದ ಈ ಕುತೂಹಲಕಾರಿ ಆಕ್ಷನ್ ಚಿತ್ರವಾಗಿದೆ. ಇದರಲ್ಲಿ ಶ್ರೀಸಾಮಾನ್ಯನೊಬ್ಬ ತನ್ನ ನೆರಳು ತಪ್ಪಿಹೋಗಿದೆ ಎಂದು ಪೊಲೀಸರಿಗೆ ದೂರು ನೀಡುತ್ತಾನೆ. ಎಲ್ಲರನ್ನೂ ಈ ದೂರು ಗೊಂದಲದಲ್ಲಿ ಮುಳುಗಿಸುತ್ತದೆ. ಆದರೂ ಪೊಲೀಸರು ಈ ಕುರಿತು ತನಿಖೆ ನಡೆಸಲು ಪ್ರಾರಂಭಿಸುತ್ತಾರೆ. ಅದು ಸಂಭವನೀಯ ಹತ್ಯಾ ಪ್ರಯತ್ನವಾಗಿರುತ್ತದೆ. ಇದೊಂದು ರಿವೆಂಜ್ ಆಕ್ಷನ್ ಚಿತ್ರವಾಗಿದ್ದು ಪ್ರೀತಿ, ಕೌಟುಂಬಿಕ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಹೊಂದಿದೆ.

ಈ ಚಿತ್ರದಲ್ಲಿ ಆಕ್ಷನ್ ಹೀರೋ ವಿನೋದ್ ಪ್ರಭಾಕರ್, ಹಿಂದಿ ಹಾಗೂ ಪಂಜಾಬಿ ಚಿತ್ರಗಳ ಖ್ಯಾತ ನಟಿ ಶೋಭಿತಾ ರಾಣಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಗೌಡ ನಿರ್ದೇಶನದ ಈ ಚಿತ್ರವನ್ನು ಚಕ್ರವರ್ತಿ ಸಿ.ಎಚ್. ನಿರ್ಮಿಸಿದ್ದಾರೆ.

You may also like...

Leave a Reply

Your email address will not be published. Required fields are marked *