
ಕಳೆದ 15 ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಇನ್ನಷ್ಟು ವರ್ಣಮಯಗೊಂಡು ಹೊಸ ರೂಪದಲ್ಲಿ ನಿಮ್ಮ ಮುಂದೆ ಬರ್ತಿದೆ. 2007 ರಲ್ಲಿ ಕರ್ನಾಟಕದ ಆಶೀರ್ವಾದವೇ ರೂಪುತಳೆದಂತೆ ಅವತರಿಸಿದ ಮಹಾವಾಹಿನಿ ಚಿನ್ನವಾಗಿ ಹುಟ್ಟಿ, ಚಿನ್ನವಾಗಿಯೇ ಜಗಮಗಿಸುತ್ತಿರೋ ಕರ್ನಾಟಕದ ಮನರಂಜನೆಯ ಗೋಲ್ಡ್ ಫೀಲ್ಡ್ “ಸ್ಟಾರ್ ಸುವರ್ಣ”. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ರಿಯಾಲಿಟಿ ಷೋ ಗಳಿಗೆ ನಾಂದಿ ಹಾಡಿದ ಸುವರ್ಣ ಇಂದು “ಸ್ಟಾರ್ ಸುವರ್ಣ” ವಾಗಿ ತನ್ನ ವಿಜಯ ಯಾತ್ರೆಯನ್ನು ಮುಂದುವರೆಸುತ್ತಿದೆ. ವಿನೂತನ ಪರಿಕಲ್ಪನೆ, ಅಮೋಘ ಪ್ರಯತ್ನಗಳು ಹಾಗು ಆರೋಗ್ಯಕರ ಪೈಪೋಟಿಯ ಮೂಲಕ ಮನರಂಜನೆಯ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದಕ್ಕೆ ಸಾಕ್ಷಿ ಅಂದಿನ ಸೂಪರ್ ಹಿಟ್ ಧಾರಾವಾಹಿಗಳಾದ ಕೃಷ್ಣರುಕ್ಮಿಣಿ, ಪ್ರೀತಿಯಿಂದ, ಅಮೃತವರ್ಷಿಣಿ, ಅವನು ಮತ್ತೆ ಶ್ರಾವಣಿ ಕಥೆಗಳು ಪ್ರೇಕ್ಷಕರ ಮನಗೆದ್ದು ಮನೆ ಮನೆಯ ಮಾತಾಗಿತ್ತು.
2016 ರಲ್ಲಿ ಸುವರ್ಣ “ಸ್ಟಾರ್ ಸುವರ್ಣ”ವಾಗಿ ಮಾರ್ಪಾಡಾದಾಗ ವಾಹಿನಿಯು ಕನ್ನಡಿಗರಿಗೆ ನೀಡಿದ ಮೊದಲ ಕಾಣಿಕೆ ‘ಹರ ಹರ ಮಹಾದೇವ’ ಎಂಬ ಭಕ್ತಿ ಪ್ರಧಾನ ಕಥೆ. ಪ್ರಸ್ತುತ ವಾಹಿನಿಯಲ್ಲಿ ಬರುತ್ತಿರುವ ಸೂಪರ್ ಡೂಪರ್ ಹಿಟ್ ಕತೆಗಳಾದ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ನಮ್ಮ ಲಚ್ಚಿ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಕಥೆಯೊಂದು ಶುರುವಾಗಿದೆ, ಮುದ್ದುಮಣಿಗಳು, ಹೊಂಗನಸು, ಜೇನುಗೂಡು, ಸುವರ್ಣ ಸೂಪರ್ ಸ್ಟಾರ್, ಬೊಂಬಾಟ್ ಭೋಜನ, ಸುವರ್ಣ ಸಂಕಲ್ಪ ಕಾರ್ಯಕ್ರಮಗಳು ಪ್ರೇಕ್ಷಕರ ಮನಸಲ್ಲಿ ಹೊಸ ಛಾಪನ್ನು ಮೂಡಿಸುತ್ತಿದೆ.
ಮನರಂಜನೆಗೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ ‘ಸ್ಟಾರ್ ಸುವರ್ಣ’ ವಾಹಿನಿ ಇದೀಗ ತನ್ನ ಹೊಸ ಲೋಗೋದೊಂದಿಗೆ ಇನ್ನಷ್ಟು ಹೊಸತನದ ಮೂಲಕ ನಿಮ್ಮ ಮುಂದೆ ಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗು ನಟ ಡಾಲಿ ಧನಂಜಯ್ ಅವರ ಉಪಸ್ಥಿಯಲ್ಲಿ ಸುವರ್ಣ ವಾಹಿನಿಯ ಹೊಸ ಲೋಗೋವನ್ನು ಅನಾವರಣ ಮಾಡಲಾಗಿದೆ. ಕಿರುತೆರೆಯ ಆಗಸದಲ್ಲಿ ಇದೀಗ ಮತ್ತಷ್ಟು ಪ್ರಕಾಶಮಾನವಾಗಿ ಬೆಳಗಲು ಇಂದಿನಿಂದ ನಿಮ್ಮ ‘ಸ್ಟಾರ್ ಸುವರ್ಣ’ ಇನ್ನಷ್ಟು ವರ್ಣಮಯಗೊಂಡು ಹೊಸ ರೂಪದಲ್ಲಿ, ಹೊಸ ಪ್ಯಾಕೇಜಿಂಗ್ ನೊಂದಿಗೆ ಹೊಸ ರೀತಿಯ ಧಾರಾವಾಹಿಗಳ ಟೈಟಲ್ ಕಾರ್ಡ್ಸ್ ಜೊತೆಗೆ ಮತ್ತಷ್ಟು ಹೊಸತನದ ವಿಭಿನ್ನ ಕಾರ್ಯಕ್ರಮಗಳೊಂದಿಗೆ ನಿಮ್ಮನ್ನು ರಂಜಿಸಲು ಸರ್ವ ಸನ್ನದ್ಧವಾಗಿದೆ. ಇನ್ಮುಂದೆ ಹೊಸತನಕ್ಕೆ ಇನ್ನೊಂದು ಹೆಸರು “ಸ್ಟಾರ್ ಸುವರ್ಣ”.
