
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ವಿಶಿಷ್ಟ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಪ್ರೇಕ್ಷಕರ ಮನಗೆದ್ದಿದೆ. ನವೆಂಬರ್ 28 ರಿಂದ ಅಂದ್ರೆ ಇಂದಿನಿಂದ ಸಂಜೆ 7 ಗಂಟೆಗೆ “ಕಥೆಯೊಂದು ಶುರುವಾಗಿದೆ” ಎಂಬ ಹೊಚ್ಚ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ವೀಕ್ಷಕರಿಗೆ ಬಹುಮಾನ ಗೆಲ್ಲುವಂತಹ ಸುವರ್ಣಾವಕಾಶವನ್ನು ಸ್ಟಾರ್ ಸುವರ್ಣ ಕಲ್ಪಿಸುತ್ತಿದೆ.
.
“ಕಥೆಯೊಂದು ಶುರುವಾಗಿದೆ” ಇದು ಮೂರು ಜೋಡಿಗಳು ಹಾಗೂ ಎರಡು ಮನೆತನಗಳ ಮಧ್ಯೆ ನಡೆಯುವ ಪ್ರೀತಿ ಸಂಘರ್ಷದ ಅದ್ದೂರಿ ಧಾರಾವಾಹಿ. ಒಬ್ಬಳು ಸ್ವಾಭಿಮಾನಿ, ಇನ್ನೊಬ್ಬ ಅಹಂಕಾರಿ. ಸ್ವಾಭಿಮಾನಿ ಹಾಗು ಅಹಂಕಾರಿಯ ನಡುವೆ ನಡೆಯುವ ಜಿದ್ದಾ ಜಿದ್ದಿಯೇ ಈ ಧಾರಾವಾಹಿಯ ಕಥಾಹಂದರ. ಈ ಭಿನ್ನ ಜಗತ್ತಿನ ವಿಭಿನ್ನ ಮನಸುಗಳು ಹೇಗೆ ಒಂದಾಗುತ್ತೆ ಅನ್ನೋದನ್ನು ಮುಂದೆ ಕಾದುನೋಡಬೇಕಿದೆ.
ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೊಂದು “ಸುವರ್ಣ Golden ನಂಬರ್” ಎಂಬ ಕಾಂಟೆಸ್ಟ್ ಅನ್ನು ನೀಡುತ್ತಿದೆ. ಇಂದಿನಿಂದ 6 ದಿನಗಳ ಕಾಲ “ಕಥೆಯೊಂದು ಶುರುವಾಗಿದೆ” ಧಾರಾವಾಹಿಯ ಸಂಚಿಕೆಯ ಕೊನೆಯಲ್ಲಿ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನವಾಗಿ “43 ಇಂಚಿನ LED TV” ಯನ್ನು ನಿಮ್ಮದಾಗಿಸಿಕೊಳ್ಳಿ
1 kandactar