ಸುವರ್ಣ ಸಂಕ್ರಾಂತಿ ಸಂಭ್ರಮ – ದಲ್ಲಿ ಸ್ಯಾಂಡಲ್ ವುಡ್ ತಾರೆಯರ ಸಮಾಗಮ…ಇದೇ ಭಾನುವಾರ ಮಧ್ಯಾಹ್ನ 3 ಗಂಟೆಗೆ…!

ಜಾಹೀರಾತುಗಳು
ಸುವರ್ಣ ಸಂಕ್ರಾಂತಿ ಸಂಭ್ರಮ
Suvarna Sankranti Celebration

ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಅದ್ದೂರಿಯಾಗಿ ಆಚರಿಸಿದ ಸ್ಟಾರ್ ಸುವರ್ಣ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ, ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ತಮ್ಮ ಆಪ್ತರೇಷ್ಟರಿಗೆ ಹಂಚಿ ಸಂತೋಷವನ್ನು ಪಡುತ್ತಾರೆ.

ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯು ಈ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತ “ಸುವರ್ಣ ಸಂಕ್ರಾಂತಿ ಸಂಭ್ರಮ” ಎಂಬ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದು. ಈ ಕಾರ್ಯಕ್ರಮದಲ್ಲಿ ಅನುಪಮಾ ಗೌಡ, ಅದಿತಿ ಪ್ರಭುದೇವ್ ,ಡಾಲಿ ಧನಂಜಯ್, ಲಾಸಿಯ, ಅಮೃತ ಐಯ್ಯಂಗಾರ್, ಅಮೂಲ್ಯ ಗೌಡ, ಪೃಥ್ವಿ ಅಂಬರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾದ ಪುಷ್ಪವತಿ ಖ್ಯಾತಿಯ ನಿಮಿಕಾ ಸೇರಿದಂತೆ ಇನ್ನು ಅನೇಕ ನಟ-ನಟಿಯರು ಭಾಗವಹಿಸಿದ್ದು, ಹಾಡು-ಹರಟೆ, ಮೋಜು ಮಸ್ತಿಯೊಂದಿಗೆ ಸಿಕ್ಕಾಪಟ್ಟೆ ಮನೋರಂಜನೆ ನೀಡಿದ್ದಾರೆ.

ಜಾಹೀರಾತುಗಳು

ಅಷ್ಟೇ ಅಲ್ಲದೆ ಬೊಂಬಾಟ್ ಭೋಜನದ ಸಾರಥಿ ಸಿಹಿ ಕಹಿ ಚಂದ್ರು ರವರು ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ ‘ಬೊಂಬಾಟ್ ಭೋಜನ’ದ ಹೊಸ ಆವೃತ್ತಿಯ ಅನಾವರಣ ಈ ಕಾರ್ಯಕ್ರಮದಲ್ಲಿ ಮಾಡಿದ್ದಾರೆ. ಜೊತೆಗೆ ನಟ ಡಾಲಿ ಧನಂಜಯ್ ತಮ್ಮ ನಿರ್ಮಾಣದ ಹೊಸ ಸಿನಿಮಾದ ಬಗ್ಗೆ ಮಾತುಗಳನ್ನಾಡಿದ್ದು. ನಟಿ ಅದಿತಿ ಪ್ರಭುದೇವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಸಂಕ್ರಾಂತಿಯನ್ನು ಸ್ಟಾರ್ ಸುವರ್ಣದ ಜೊತೆ ಆಚರಿಸಿದ್ದಾರೆ. ವಾಹಿನಿಯಲ್ಲಿ ಹೊಸದಾಗಿ ಪ್ರಾರಂಭವಾಗಲಿರುವ ‘ನಮ್ಮ ಲಚ್ಚಿ’ ಧಾರಾವಾಹಿಯ ನಟ ವಿಜಯ್ ಸೂರ್ಯ ತಂದೆಯೊಂದಿಗಿನ ಭಾಂದವ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ತನ್ನ ಪತ್ನಿಯ ಜೊತೆ ವೇದಿಕೆಯಲ್ಲಿ ಜೊತೆಯಾಗಿದ್ದು, ‘ಸುವರ್ಣ ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮಕ್ಕೆ ಹೊಸ ಲುಕ್ ನೀಡಿದ್ದಾರೆ.

ಜಾಹೀರಾತುಗಳು

ನಟ ಶಿವರಾಜ್ ಕೆ.ಆರ್.ಪೇಟೆ ನಿರೂಪಣೆಯಲ್ಲಿ ಮೂಡಿ ಬಂದಿರುವ “ಸುವರ್ಣ ಸಂಕ್ರಾಂತಿ ಸಂಭ್ರಮ” ಕಾರ್ಯಕ್ರಮವು ಇದೇ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ತಪ್ಪದೇ ವೀಕ್ಷಿಸಿ.

Leave a Comment