ಹುಟ್ಟು ಹಬ್ಬದ ಶುಭಾಶಯಗಳು ಜೀ಼ ಕನ್ನಡ

ಜಾಹೀರಾತುಗಳು
Zee Kannada 16 Years
Zee Kannada 16 Years

ಜೀ಼ ಕನ್ನಡ, ಕನ್ನಡಿಗರ ಕಣ್ಮಣಿಯಾಗಿ ವೀಕ್ಷಕರ ಅಭಿರುಚಿಗೆ ತಕ್ಕಂತೆ ಅವರು ಬಯಸಿದ ಮನರಂಜನೆಯ ಬಾಗಿಲು ತೆಗೆಯುತ್ತಲೇ ಇರುವ ವಸುದೈವ ಕುಟುಂಬ .2006 ರಲ್ಲಿ ಬಲಗಾಲಿಟ್ಟು ಕರ್ನಾಟಕಕ್ಕೆ ಬಂದು ಮನರಂಜನೆಯ ಸೇವೆ ಆರಂಭಿಸಿ ಒಂದೊಂದೇ ಹೆಜ್ಜೆ ಮೇಲೇರುತ್ತ ಕನ್ನಡ ಕಿರುತೆರೆಯ ಕಲಾ ಸಾರ್ವಭೌಮನಾಗಿ ತನ್ನ 16 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದೆ. ಜೀ಼ ವೀಕ್ಷಕರ ಅತ್ಯುತ್ತಮ ಮನರಂಜನಾ ತಾಣವಾಗಿ ಗುರುತಿಸಲ್ಪಟ್ಟಿರುವ ವಾಹಿನಿ, 2006 ರಲ್ಲಿ ಪ್ರಾರಂಭವಾದಾಗಿನಿಂದ ಸತತವಾಗಿ ಆಕರ್ಷಕವಾದ ವಿನೂತನವಾದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಲಕ್ಷಾಂತರ ಕನ್ನಡಿಗರ ಹೃದಯದಲ್ಲಿ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಜೀ಼ ಕನ್ನಡ ಸತತ ನಾಲ್ಕು ವರ್ಷಗಳಿಂದ ನಂ.1 ವಾಹಿನಿಯಾಗಿ ಕನ್ನಡ ಟಿವಿ ಮಾರುಕಟ್ಟೆ ಯಲ್ಲಿ ರಾರಾಜಿಸುತ್ತಿದೆ. ಕರ್ನಾಟಕ GEC ಮಾರುಕಟ್ಟೆಯಲ್ಲಿ ಶೇಕಡಾ 40% ಪಾಲನ್ನು ಹೊಂದಿರುವ ವಾಹಿನಿಯಾಗಿದೆ.

ಫಿಕ್ಷನ್ & ನಾನ್ ಫಿಕ್ಷನ್ ಎರಡೂ ವಿಭಾಗದಲ್ಲೂ ತನ್ನದೇ ಆದ ವಿಶೇಷತೆ , ವಿಭಿನ್ನತೆಗಳನ್ನು ಕಾಯ್ದಿರಿಸಿಕೊಂಡಿರುವ ವಾಹಿನಿ ಜನರನ್ನು ತಮ್ಮದೇ ಶೈಲಿಯಲ್ಲಿ ರಂಜಿಸುತ್ತಿದೆ. ಕೇವಲ ಕಲೆಯನ್ನಷ್ಟೇ ಸಂಭ್ರಮಿಸದೇ ಸಂಬಂಧಗಳನ್ನೂ ಸಹ ಸಂಭ್ರಮಿಸುತ್ತಿರುವ ವಾಹಿನಿ ಅಸಂಖ್ಯಾತ ಕಲಾವಿದರು , ತಂತ್ರಜ್ಞರು ಬಹುಮುಖ್ಯವಾಗಿ ಅದೆಷ್ಟೋ ಜನರ ಕನಸುಗಳನ್ನು ಕೈ ಬೀಸಿ ಕರೆದು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಪೋಷಿಸುತ್ತಲೇ ಬರುತ್ತಿದೆ . ಮನರಂಜನೆಗಷ್ಟೇ ಆದ್ಯತೆ ನೀಡಿ ಕರ್ನಾಟಕದ ಮೂಲೆ ಮೂಲೆಗೂ ಸಂಚರಿಸಿ ಎಲ್ಲೋ ಅವಿತಿರುವ ಪ್ರತಿಭೆಗಳನ್ನು ಹುಡುಕಿ ವೇದಿಕೆಗೆ ಕರೆತಂದು ಇಡೀ ವಿಶ್ವಕ್ಕೆ ಪರಿಚಯಿಸುತ್ತಿರುವ ಜೀ಼ ವಾಹಿನಿಯ ಕಾರ್ಯ ಶ್ಲಾಘನೀಯವಾಗಿದೆ. ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯಕ್ರಮಗಳ ಗುಣಮಟ್ಟ , ಸಿರಿತನ , ಕಥಾ ವಿನ್ಯಾಸದಲ್ಲಿ ಎಲ್ಲರಿಗಿಂತ ಭಿನ್ನ ಎಂದು ನಿರೂಪಿಸುತ್ತಲೇ ಇರುವುದು ಜನಮೆಚ್ಚಿದ ವಾಹಿನಿಯಾಗಿರುವುದಕ್ಕೆ ಸಾಕ್ಷಿ.

ಮಹರ್ಷಿವಾಣಿ , ಡ್ರಾಮಾ ಜೂನಿಯರ್ಸ್ , ಸರಿಗಮಪ , ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಕಾಮಿಡಿ ಕಿಲಾಡಿಗಳು , ಗೋಲ್ಡನ್ ಗ್ಯಾಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ತನ್ನ ಇರುವಿಕೆಯನ್ನು ಸಾಬೀತು ಮಾಡುತ್ತಿರುವ ವಾಹಿನಿ ವಿನೂತನ ಕಾನ್ಸೆಪ್ಟ್ ಗಳ ಮೂಲಕ ನೋಡುಗರಿಗೆ ಹತ್ತಿರವಾಗುತ್ತಿದೆ. ಕನ್ನಡಿಗರ ಪ್ರತಿಸಂಜೆಗಳನ್ನು ಸಂಪೂರ್ಣವಾಗಿಸುತ್ತಿರುವ ಜೀ಼ ಕನ್ನಡದ ಧಾರಾವಾಹಿಗಳು ವೀಕ್ಷಕರ ಬದುಕಿನ ಭಾಗವೇ ಆಗಿರುವುದು ವಿಶೇಷ. ಇದಕ್ಕೆ ಸಾಕ್ಷಿ ಎಂಬಂತೆ ಅನೇಕ ಧಾರಾವಾಹಿಗಳು ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರ್ಣಗೊಳಿಸಿವೆ. ಇನ್ನು ಸಿನಿಮಾ ಶೈಲಿಯಲ್ಲಿ ಧಾರಾವಾಹಿಗಳನ್ನು ನಿರ್ಮಿಸಿ ಶ್ರೀಮಂತಗೊಳಿಸುತ್ತಿರುವುದು ಹಾಗು ಅತ್ಯುತ್ತಮ ಗುಣಮಟ್ಟವನ್ನು ಕಾಯ್ದಿರಿಸಿಕೊಂಡಿರುವುದು ರೇಟಿಂಗ್ ನಲ್ಲಿ ದಾಖಲೆ ಬರೆಯುತ್ತಿರುವುದಕ್ಕೆ ಸಹಕಾರಿಯಾಗಿದೆ ಎನ್ನುತ್ತದೆ ವಾಹಿನಿ. ಬಹುಮುಖ್ಯವಾಗಿ ಈ ವರ್ಷ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಎರಡೂ ವಿಭಾಗದಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದು ಪುಟ್ಟಕ್ಕನ ಮಕ್ಕಳು 13.5 , ಹಿಟ್ಲರ್ ಕಲ್ಯಾಣ 9.3 , ಡ್ರಾಮಾ ಜೂನಿಯರ್ಸ್ ಸೀಸನ್ ನಾಲ್ಕು 8.4 ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ ಆರು 7.0 ಟಿವಿಆರ್ ಗಳಿಸುವುದರೊಂದಿಗೆ ಭರ್ಜರಿ ಆರಂಭ ಪಡೆದುಕೊಂಡಿರುವುದು ಈಗ ಇತಿಹಾಸ.

ಉತ್ತಮ ಗುಣಮಟ್ಟದ ಡಬ್ಬಿಂಗ್ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುತ್ತಿರುವ ವಾಹಿನಿ ಕಥೆಗಳ ಆಯ್ಕೆಯಲ್ಲೇ ಗೆದ್ದಿದ್ದೆ ಎನ್ನಬಹುದು. ಅದರಲ್ಲೂ ಮುಖ್ಯವಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀ಼ವನ ಕುರಿತಾದ ಮಹಾನಾಯಕ ಸೇರಿದಂತೆ ಇನ್ನು ಅನೇಕ ಧಾರಾವಾಹಿಗಳನ್ನು ವೀಕ್ಷಕರು ಸ್ವೀಕರಿಸುತ್ತಿರುವ ರೀತಿ ಒಂದು ಅಚ್ಚರಿ ಎನ್ನುತ್ತದೆ ವಾಹಿನಿಯ ಮೂಲಗಳು. ಕುಟುಂಬದ ಕಲಾವಿದರ, ತಂತ್ರಜ್ಞರ , ಕಥೆಗಾರರ ಸಾಧನೆಯನ್ನು ಸಂಭ್ರಮಿಸಿ ಗೌರವಿಸಲು ಪ್ರತಿವರ್ಷ ಜೀ಼ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮವನ್ನು ಆಯೋಜಿಸುವ ವಾಹಿನಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೇ ಕೋವಿಡ್ , ಲಾಕ್ ಡೌನ್ ಎಂಬ ಜಂಜಾಟಗಳಲ್ಲಿ ಕಳೆದುಹೋಗಿದ್ದ ಜನರ ಬಳಿಯೇ ಹೋಗಿ ಹಿಟ್ಲರ್ ಕಲ್ಯಾಣ ಜಾತ್ರೆ , ಪುಟ್ಟಕ್ಕನ ಮಕ್ಕಳು ಯುಗಾದಿ ಜಾತ್ರೆ ಮಾಡಿ ಕುಣಿದು , ಕುಪ್ಪಳಿಸಿ ಮನರಂಜಿಸಿ ಅವರೊಟ್ಟಿಗೆ ಬೆರೆತು ನಮ್ಮ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಅರ್ಪಿಸಿದವರಲ್ಲಿ ಮೊದಲಿಗರಾಗಿದ್ದಾರೆ ಜೀ಼ ಕನ್ನಡ ವಾಹಿನಿ.

ಯಶಸ್ಸಿನ ವ್ಯಾಪ್ತಿಯನ್ನು ಕೇವಲ ಕಿರುತೆರೆಗಷ್ಟೇ ಸೀಮಿತಗೊಳಿಸದ ವಾಹಿನಿ ಸೋಷಿಯಲ್ ಮೀಡಿಯಾದಲ್ಲೂ ತನ್ನ ಪಾರುಪತ್ಯ ಸಾಧಿಸಿ ಇಲ್ಲೂ ಇತರೆ ವಾಹಿನಿಗಳನ್ನು ಹಿಂದಿಕ್ಕುತ್ತಿರುವುದು ವೀಕ್ಷಕರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿ. ಸ್ಯಾಂಡಲ್ ವುಡ್ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಜೀ಼ ಕನ್ನಡ ವಾಹಿನಿ ಸ್ಟಾರ್ ನಟರ ಸಿನಿಮಾಗಳೊಟ್ಟಿಗೆ ಉದಯೋನ್ಮುಖ ಕಲಾವಿದರ ಸಿನಿಮಾಗಳಿಗೂ ಆದ್ಯತೆ ನೀಡುತ್ತಿರುವುದು ವಿಶೇಷ. ನೋಡುಗರಿಗೆ ಒಳ್ಳೆಯ ಮನರಂಜನೆ ನೀಡಬೇಕೆಂಬ ಸದುದ್ದೇಶದಿಂದ ಚಂದನವಾದ ಗತಿಯನ್ನೇ ಬದಲಿಸಿದ , ಬದಲಿಸುತ್ತಿರುವ ಕನ್ನಡ ಸಿನಿಮಾಗಳಾದ KGF 2 , ವಿಕ್ರಾಂತ್ ರೋಣ , ಭಜರಂಗಿ 2 , ಏಕ್ ಲವ್ ಯಾ , ಗರುಡ ಗಮನ ವೃಷಭ ವಾಹನ , ರತ್ನನ್ ಪ್ರಪಂಚ , ಗಾಳಿಪಟ 2 , ಗಂಧದ ಗುಡಿ , ರೈಡರ್ , ದೃಶ್ಯ 2 ಸೇರಿದಂತೆ ಇನ್ನು ಅನೇಕ ಸಿನಿಮಾಗಳನ್ನು ಖರೀದಿಸಿ ಪ್ರಸಾರ ಮಾಡುತ್ತಿದ್ದಾರೆ.ಬಯಸಿದ ಬಾಗಿಲು ತೆಗೆಯೋಣ ಎಂಬ ವಾಹಿನಿಯ ಘೋಷವಾಕ್ಯದಂತೆ ಇನ್ನು ಮುಂದೆಯೂ ವೀಕ್ಷಕರನ್ನು ರಂಜಿಸುತ್ತಿರಲಿ, ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎನ್ನುವುದೇ ಕನ್ನಡಿಗರ ಆಶಯ.

ಜೀ ಕನ್ನಡ ಚಾನೆಲ್
ಜೀ ಕನ್ನಡ ಚಾನೆಲ್
ಜಾಹೀರಾತುಗಳು

Leave a Comment