ಜೀ ಪಿಚ್ಚರ್‌- 1 ವರ್ಷದ ಭರ್ಜರಿ ಪ್ರದರ್ಶನ

ಜಾಹೀರಾತುಗಳು
Zee Picchar 1 year completed
Zee Picchar 1 year completed

ಕನ್ನಡಿಗರ ನೆಚ್ಚಿನ ವಾಹಿನಿ ಜೀ-ಕನ್ನಡ, ಹೆಮ್ಮೆಯಿಂದ ಕನ್ನಡ ಸಿನಿರಸಿಕರಿಗಾಗಿ ನೀಡಿದ ಅಪ್ಪಟ ಪಿಚ್ಚರ್‌ಗಳ ವಾಹಿನಿ ʻಜೀ ಪಿಚ್ಚರ್‌ʼ ಕಳೆದ ವರ್ಷ ಮಾರ್ಚ್‌ 1ನೇ ತಾರೀಖು ಪ್ರಸಾರ ಆರಂಭಿಸಿತ್ತು. ಕನ್ನಡದ ನಂ.1 ಎಂಟರ್‌ಟೈನ್‌ಮೆಂಟ್‌ ಚಾನೆಲ್‌ ಜೀ ಕನ್ನಡದ ಕೊಡುಗೆಯಾಗಿದ್ದಿರಿಂದ, ನಿರೀಕ್ಷೆಗಳು ಅಗಾಧವಾಗಿದ್ವು, ಪ್ರೇಕ್ಷಕರ ನಿರೀಕ್ಷೆಯಂತೆ, ವಿಭಿನ್ನ ಹಾಗು ಅಪರೂಪದ ಪಿಚ್ಚರ್‌ಗಳ ಮೂಲಕ ಎಂಟರ್‌ಟೈನ್‌ ಮಾಡಲು ಶುರು ಮಾಡಿತು ಜೀ ಪಿಚ್ಚರ್‌. ಕನ್ನಡದ ಆಲ್‌ ಟೈಮ್‌ ಬ್ಲಾಕ್‌ ಬಸ್ಟರ್‌ ಸಿನಿಮಾ `ಬಂಗಾರದ ಮನುಷ್ಯ’ ಸಿನಿಮಾ ಪ್ರಸಾರದ ಮೂಲಕ ಆರಂಭವಾದ ವಾಹಿನಿಗೆ ಈಗ ಒಂದು ವರ್ಷ ಪೂರೈಸಿದ ಸಂಭ್ರಮ, ಪ್ರೇಕ್ಷಕರ ಮನ ಮುಟ್ಟಿದ ಸಾರ್ಥಕತೆ.

ಜೀ ಪಿಚ್ಚರ್‌ ಲಾಂಚ್‌ನ ಕೊಡುಗೆಯಾಗಿ, ಭಾರತೀಯ ಕಿರುತೆರೆಯಲ್ಲೇ ಮೊದಲ ಬಾರಿಗೆ ಭರ್ಜರಿ 12 ಸಿನಿಮಾಗಳನ್ನ ಒಂದೇ ಬಾರಿಗೆ ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ಮಾಡಿತ್ತು, ಜೊತೆಗೆ ಪ್ರತಿದಿನ ಮಧ್ಯಾಹ್ನ 1ಗಂಟೆಗೆ ಕೇವಲ ಒಂದೇ ಬ್ರೇಕ್‌ನಲ್ಲಿ ಸಿನಿಮಾಗಳನ್ನ ಟೆಲಿಕಾಸ್ಟ್‌ ಮಾಡಲು ಶುರು ಮಾಡಿತ್ತು, ಈ ಹೊಸ ಅಲೆ ಕನ್ನಡ ಚಿತ್ರಪ್ರೇಮಿಗಳನ್ನ ಬಹುಬೇಗ ತಲುಪಲು ಅನುವು ಮಾಡಿತು. ಚಾನೆಲ್‌ ಲಾಂಚ್‌ ಆಗಿ ತಿಂಗಳು ಕಳೆಯುವದರೊಳಗೆ ವಿಶ್ವಾದ್ಯಂತ ಕರೋನಾ ಪ್ಯಾನ್‌ಡೆಮಿಕ್‌ನಿಂದಾಗಿ ಲಾಕ್‌ಡೌನ್‌ ಜಾರಿಯಾಯಿತು. ಜೀವಮಾನದಲ್ಲೇ ನೋಡಿರದ ಲಾಕ್‌ಡೌನ್‌ ನಿಂದಾಗಿ ಎಲ್ಲರೂ ಮನೆಯಲ್ಲೇ ಉಳಿಯುವಂತಾಯ್ತು. ಹೊಸ ಸೀರಿಯಲ್‌ಗಳು, ರಿಯಾಲಿಟಿ ಶೋಗಳು ಚಿತ್ರೀಕರಣ ನಿಂತು, ಸಿನಿಮಾಗಳ ಥಿಯೇಟರ್‌ ಪ್ರದರ್ಶನ ಅಸಾಧ್ಯವಾದ ಹಿನ್ನಲೆಯಲ್ಲಿ, ಪ್ರೇಕ್ಷಕರು ಕುಟುಂಬ ಸಮೇತರಾಗಿ ಕೂತು ಸಿನಿಮಾಗಳನ್ನ ನೋಡಲು ಶುರು ಮಾಡಿದ್ರು, ಆಗ ಜೀ ಪಿಚ್ಚರ್‌ನ ವಿಶಿಷ್ಟ ಪಿಚ್ಚರ್‌ ಪ್ಲೇಲಿಸ್ಟ್‌ ಜನರನ್ನ ತನ್ನತ್ತ ಸೂಚಿಗಲ್ಲಿನಂತೆ ಸೆಳೆದಿತ್ತು.

ಆರಂಭದಲ್ಲೇ ಕನ್ನಡದ ಮೂವಿ ಚಾನೆಲ್‌ಗಳ ರ್ಯಾಂಕಿಂಗ್‌ನಲ್ಲಿ ನಂ.೨ ನೇ ಸ್ಥಾನಕ್ಕೇರಿದ ಜೀ ಪಿಚ್ಚರ್‌, ಅಲ್ಲೇ ಗಟ್ಟಿಯಾಗಿ ನೆಲೆಯೂರಿದೆ. ದಿನಂಪ್ರತಿ ಬರೀ ಸಿನಿಮಾಗಳನ್ನ ಪ್ರಸಾರ ಮಾಡದೇ, ಪ್ರತಿ ವಾರ ಹೊಸ ಹೊಸ ಕಾನ್ಸೆಪ್ಟ್‌ಗಳ ಮೂಲಕ ಎಂಟರ್‌ಟೈನ್‌ ಮಾಡ್ತಿದೆ. ಇದು ಪ್ರೇಕ್ಷಕರನ್ನ ಜೀ ಪಿಚ್ಚರ್‌ ಅನ್ನುಆಯ್ಕೆ ಮಾಡಲು ಪ್ರೇರೇಪಿಸಿತ್ತು. ಐಪಿಎಲ್‌ ಸಮಯದಲ್ಲಿ ಆಕ್ಷನ್‌ ಪಿಚ್ಚರ್‌ ಲೀಗ್‌, ಕ್ಲಾಸಿಕ್‌ ಪಿಚ್ಚರ್‌ ಲೀಗ್‌, ಫ್ಯಾಮಿಲಿ ಪಿಚ್ಚರ್‌ ಲೀಗ್‌ನಲ್ಲಿ ಈ ಜಾನರ್‌ಗಳ ಸಿನಿಮಾ ಪ್ರಸಾರ ಮಾಡಿ ಸೈ ಎನಿಸಿಕೊಳ್ತು.ದಸರಾ ಹಬ್ಬದ ಪ್ರಯುಕ್ತ ಸಂಭ್ರಮದ ಹತ್ತೂ ದಿನ 8 ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ಹಾಗೂ 2 ಜೀ ಪಿಚ್ಚರ್‌ ಚಾನೆಲ್‌ ಪ್ರೀಮಿಯರ್‌ ಮೂಲಕ ಮತ್ತೊಂದು ದಾಖಲೆ ಬರೆಯಿತು.

ಆಗಸ್ಟ್‌ 19ನೇ ತಾರೀಖು, ಜೋಗಿ ಸಿನಿಮಾ 15 ವರ್ಷಗಳನ್ನ ಪೂರೈಸಿದ ಸಂಭ್ರಮವನ್ನ ಡಾ.ಶಿವರಾಜ್‌ಕುಮಾರ್‌ ಹಾಗೂ ಅಭಿಮಾನಿಗಳ ಜೊತೆ ʻಜೋಗಿ ಜಾತ್ರೆʼಯಾಗಿ ಸಂಭ್ರಮಿಸಿತ್ತು, ಕಿಚ್ಚ ಸುದೀಪ್‌ ಬರ್ತ್‌ಡೇಗೆ ʻಕಿಚ್ಚನ ಪಿಚ್ಚರೋತ್ಸವʼ, ‘ವಿಷ್ಣು ಉಪ್ಪಿ ಫಿಲ್ಮ್‌ ಫೆಸ್ಟ್‌’, ದರ್ಶನ್‌ ಬರ್ತ್‌ಡೇ ಪ್ರಯುಕ್ತ ʼದರ್ಶನ್‌ ಪಿಚ್ಚರ್‌ ಪ್ರೈಂ ಟೈಮ್‌ʼ, ಜಗ್ಗೇಶ್‌ 40 ವರ್ಷದ ಸಿನಿಪಯಣದ ಖುಷಿಗೆ ʼನಲವತ್ತರ ನವರಸʼ, ಸುದೀಪ್‌ 25 ವರ್ಷದ ಸಿನಿ ಬದುಕಿಗೆ `ಸಕಲಕಲಾವಲ್ಲಭ ಸುದೀಪ್‌’ ಕಾರ್ಯಕ್ರಮಗಳನ್ನ ಉಡುಗೊರೆಯಾಗಿ ಮಾಡಿತ್ತು. ಕರೋನಾ ವಾರೀಯರ್ಸ್‌ಗೆ ಸಲಾಂ ಹೇಳಿದ ಡಾಕ್ಟರ್‌ ಹಾಗು ಪೊಲೀಸ್‌ ಪ್ರಧಾನ ಪಾತ್ರಗಳ ಸಿನಿಮಾದ ಹಬ್ಬವನ್ನ ಎರಡು ವಾರಗಳ ಕಾಲ ಪ್ರಸಾರ ಮಾಡಿತ್ತು. ಇದರ ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಕನ್ನಡ ಚಿತ್ರರಂಗದ ಡೇ ಟು ಡೇ ಅಪ್‌ಡೇಟ್‌ ನೀಡುವ ʻಪಿಚ್ಚರ್‌ ಸುದ್ದಿʼ, ಪಿಚ್ಚರ್‌ ಬಗ್ಗೆ ಹೆಚ್ಚು ತಿಳಿದುಕೊಂಡಿರೋ ಫಂಟರಿಗಾಗಿ ʻಪಿಚ್ಚರ್‌ ಫಂಟ್ರುʼ ಸ್ಪರ್ಧೆಗಳನ್ನ ನಡೆಸಿ, ಗಮನ ಸೆಳೆದಿತ್ತು.

ಜಾಹೀರಾತುಗಳು

ಹೊಸ ವರ್ಷಕ್ಕೆ ಥಿಯೇಟರ್‌ಗೆ ಬನ್ನಿ ಅಂತ ಸ್ಟಾರ್‌ಗಳ ಮೂಲಕ ಸಿನಿ ಅಭಿಮಾನಿಗಳಿಗೆ ಆಮಂತ್ರಣ ನೀಡಿ ವಿಭಿನ್ನತೆ ತೋರಿತು. ಈಗಾಗಲೇ ವಿಭಿನ್ನವಾಗಿದ್ದ ಜೀ ಪಿಚ್ಚರ್‌ ತನ್ನ ಸಿನಿಮಾ ಲೈಬ್ರರಿಗೆ ಹೊಸದಾಗಿ, ಕನ್ನಡಿಗರು ಈಗಾಗ್ಲೇ ಮೆಚ್ಚಿದ್ದ ಸಿನಿಮಾಗಳನ್ನ ಸೇರ್ಪಡೆ ಮಾಡಿಕೊಂಡು, ಸಂಕ್ರಾಂತಿಯಿಂದ ʻಪಿಚ್ಚರ್‌ ಸುಗ್ಗಿʼ ಟೈಟಲ್‌ನಲ್ಲಿ ವೀಕ್ಷಕರನ್ನ ರಂಜಿಸಿತ್ತು. ಪ್ರೇಮಿಗಳ ದಿನದಂದು ವ್ಯಾಲೆಂಟೈನ್ಸ್‌ ಡೇ ವಿತ್‌ ರವಿಚಂದ್ರನ್‌ ಪ್ರೋಗ್ರಾಂ ಮಾಡಿ, ರವಚಂದ್ರನ ಜೊತೆ ಕೂತು ಸಿನಿಮಾಗಳನ್ನ ನೋಡಲು ವೀಕ್ಷಕರಿಗೆ ಅವಕಾಶ ಮಾಡಿಕೊಟ್ಟಿತ್ತು. ಜೊತೆಗೆ ಕನ್ನಡ ಸಿನಿಮಾ ವಾಹಿನಿಗಳಲ್ಲೇ ಮೊದಲ ಬಾರಿಗೆ ವಾರವಿಡೀ ಡಾ.ರಾಜ್‌ಕುಮಾರ್‌ ಬ್ಲಾಕ್‌ & ವೈಟ್‌ ಸಿನಿಮಾ ಪ್ರಸಾರ ಮಾಡಿದೆ.

ವರ್ಷವಿಡೀ ನಿಮ್ಮನ್ನ ವೆರೈಟಿ ಸಿನಿಮಾಗಳ ಮೂಲಕ ರಂಜಿಸಿದ ಜೀ ಪಿಚ್ಚರ್‌ ಈ ವರ್ಷ ಕೂಡ ಸಾಕಷ್ಟು ಸರ್‌ಪ್ರೈಸ್‌ಗಳನ್ನ ನೀಡಲು ತಯಾರಿ ನಡೆಸಿದೆ. ಇನ್ನಷ್ಟು ಅದ್ಭುತ ಕನ್ನಡ ಸಿನಿಮಾಗಳು ಜೀ ಪಿಚ್ಚರ್‌- ಸಿನಿ ಆಗರವನ್ನ ಸೇರಲಿವೆ. ಕನ್ನಡಿಗರು ಪದೇ ಪದೇ ನೋಡಲು ಬಯಸುವ ಸಿನಿಮಾಗಳ ಮೂಲಕ, ಚಿತ್ರಪ್ರೇಮಿಗಳ ಇಷ್ಟವಾಗೋ ವಿಭಿನ್ನ ಕಾರ್ಯಕ್ರಮಗಳ ಮೂಲಕ ಭರ್ಜರಿ ಮನೋರಂಜನೆಯನ್ನ ಮುಂದುವರೆಸಲಿದೆ. ನಿಮ್ಮ ಪ್ರತಿದಿನ ಫೀಲಿಂಗ್‌ ಅನ್ನು ʻಹಿಟ್‌ ದಿನದ ಫೀಲಿಂಗ್‌ʼ ಆಗಿಸಲಿದೆ.

ಮೊದಲ ವರ್ಷದ ಸಂಭ್ರಮದಲ್ಲಿರುವ ಜೀ ಪಿಚ್ಚರ್‌ ವಾಹಿನಿಯ ಯಶಸ್ವಿ ಪ್ರದರ್ಶನಕ್ಕೆ ಕಾರಣರಾದ, ನಂ.2 ಸ್ಥಾನಕ್ಕೇರಲು ಜೊತೆಗಿದ್ದು, ನಂ.1 ದಾರಿಯಲ್ಲಿ ಜೊತೆಯಿರುವ ವೀಕ್ಷಕರಿಗೆ, ವಿತರಕರಿಗೆ, ಕೇಬಲ್‌ ಆಪರೇಟರ್‌ಗಳಿಗೆ, ಜಾಹೀರಾತುದಾರರಿಗೆ, ಕನ್ನಡ ಚಿತ್ರರಂಗಕ್ಕೆ, ಮಾಧ್ಯಮ ಮಿತ್ರರಿಗೆ, ಹಿತೈಶಿಗಳಿಗೆ ಮನಃಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದೆ.

Leave a Comment