ಜೀ ಕನ್ನಡದಲ್ಲಿ ಮಧ್ಯಾಹ್ನದ ಭರಪೂರ ಮನರಂಜನೆ – ಮಾರ್ಚ್ 1, ರಿಂದ ಮೂರು ಮಹೋನ್ನತ ಕಾರ್ಯಕ್ರಮಗಳು ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಪ್ರಾರಂಭ
ಸದಾ ವಿನೂತನ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಕನ್ನಡದ ಅತ್ಯಂತ ಜನಪ್ರಿಯ ವಾಹಿನಿ ಜೀ ಕನ್ನಡ ಇದೀಗ ಮಧ್ಯಾಹ್ನದ ಮನರಂಜನೆಗೆ ಮೂರು ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ. “ಮನೆ ಮನೆ ಮಹಾಲಕ್ಷ್ಮಿ” ಎಂಬ ವಿನೂತನ ರಿಯಾಲಿಟಿ ಗೇಮ್ ಶೋ ಕರ್ನಾಟಕದ 31 ಜಿಲ್ಲೆಗಳ 175 ತಾಲೂಕುಗಳನ್ನೂ ತಲುಪಲಿದೆ. ಮಾರ್ಚ್ 1, ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮಕ್ಕೆ ಖ್ಯಾತ ನಿರೂಪಕಿ ಸುಷ್ಮಾ ನಿರೂಪಣೆ ಮಾಡಲಿದ್ದಾರೆ. ರಾಜ್ಯದ ಮೂಲೆ ಮೂಲೆಯ ಮಹಿಳೆಯರು ಇದರಲ್ಲಿ ಭಾಗವಹಿಸುತ್ತಾರೆ. … Read more