ಸತ್ಯ ಧಾರಾವಾಹಿ ಪಾತ್ರವು ನಿಜ ಜೀವನದ ಸತ್ಯ ಪಾತ್ರಗಳ ಭೇಟಿ ಮಾಡಿದ ವಿನೂತನ ಕಾರ್ಯಕ್ರಮ – ಜೀ ಕನ್ನಡದ

Gouthami Jadav With Real Life Satya's

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ವಿನೂತನ ಧಾರಾವಾಹಿಗಳ ಮೂಲಕ ಮುಂಚೂಣಿಯಲ್ಲಿರುವ ಜೀ ಕನ್ನಡ ಈ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಿಸುತ್ತಿದೆ. ಜೀ ಕನ್ನಡದಲ್ಲಿ ದಿಟ್ಟ ಹೆಣ್ಣುಮಗಳ ಪ್ರತಿನಿಧಿಯಾಗಿರುವ “ಸತ್ಯ” ನಿಜ ಜೀವನದ “ಸತ್ಯ”ರ ಪಾತ್ರಗಳೊಂದಿಗೆ ವಿನೂತನ ರೀತಿಯಲ್ಲಿ ಆಚರಿಸಲಿದ್ದಾರೆ. ಸಂಜೆ 5.30ಕ್ಕೆ ಧಾರಾವಾಹಿಯ ಸತ್ಯ ನಿಜ ಜೀವನದ ಸತ್ಯರನ್ನು ಸಂದರ್ಶಿಸುವ ಅಪರೂಪದ ಕಾರ್ಯಕ್ರಮ ನಡೆಯಲಿದೆ. “ಸತ್ಯ” ಧಾರಾವಾಹಿ ಪ್ರಾರಂಭವಾದ ದಿನದಿಂದಲೂ ಮಹಿಳೆಯರನ್ನು ಅಪಾರವಾಗಿ ಸೆಳೆದಿದೆ. ಸತ್ಯ ಪಾತ್ರವು ಎಲ್ಲ ಮಹಿಳೆಯರಿಗೂ ಸ್ಫೂರ್ತಿ ತುಂಬಿದೆ. ಈಗ ನಿಜ ಜೀವನದ … Read more

ಪುನೀತ್ ರಾಜ್ ಕುಮಾರ್ – ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

Puneeth Rajkumar on DKD

ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಯುವರತ್ನ ಪುನೀತ್ ರಾಜ್ ಕುಮಾರ್ ಜೀ ಕನ್ನಡದ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ನಲ್ಲಿ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಭಾಗವಹಿಸಿದ್ದಾರೆ. ಸ್ವತಃ ಅದ್ಭುತ ನೃತ್ಯಕ್ಕೆ ಹೆಸರಾದ ಅ‍ಪ್ಪು ಉಪಸ್ಥಿತಿ ಎಲ್ಲ ನೃತ್ಯಪಟುಗಳ ಉತ್ಸಾಹ ಹೆಚ್ಚಿಸಿದೆ. ಪುನೀತ್ ಕೂಡಾ ಸ್ಪರ್ಧಿಗಳೊಂದಿಗೆ ಸ್ವತಃ ಕುಣಿದು ಅವರೊಂದಿಗೆ ತಾವೂ ಒಬ್ಬರಾದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಗಳೆಲ್ಲರಲ್ಲೂ ಪುನೀತ್ ಉಪಸ್ಥಿತಿ ಸಂಚಲನ ಉಂಟು ಮಾಡಿತು. ಈಗಾಗಲೇ … Read more

ನಿಮ್ಮ ಮನರಂಜನೆಯ ಮಹಾಹಬ್ಬ ಶನಿವಾರ ರಾತ್ರಿ 7.30ಕ್ಕೆ ಮತ್ತು ಭಾನುವಾರ ಸಂಜೆ 6ಕ್ಕೆ. ಮಿಸ್ ಮಾಡ್ಕೊಳ್ಳೇಬೇಡಿ ಈ ಚಾನ್ಸ್!

DKD and Comedy Khiladigalu Championship Season 2 Mahasangama

ಈ ವೀಕೆಂಡ್ ಎರಡು ಭರ್ಜರಿ ಶೋಗಳ ಮಹಾಸಂಗಮಕ್ಕೆ ಸಾಕ್ಷಿಯಾಗ್ತಾ ಇದೆ. ಜಡ್ಜಸ್ ಎದೆ ಝಲ್ಲೆನಿಸಿ ನೋಡೋರ ಕಣ್ಣಿಗೆ Wonderful ಲೋಕ ಕಟ್ಟಿಕೊಡುವ Dance ಕರ್ನಾಟಕ Dance ಮತ್ತು ಕಾಮಿಡಿಯಲ್ಲೇ ಎಲ್ಲರ ಹೃದಯಕ್ಕೆ ಕಚಗುಳಿ ಇಟ್ಟು ನಗುವಿನಲ್ಲಿ ತೇಲಾಡ್ಸೋ ಕಾಮಿಡಿ ಕಿಲಾಡಿಗಳು ಸೇರಿ ಹೊಸದೊಂದು Entertainment ಪ್ರಪಂಚವನ್ನೇ ಪ್ರೇಕ್ಷಕರಿಗೆ ತೋರಿಸಲಿವೆ. ತಮ್ಮ ಹಾಸ್ಯಭರಿತ Commentsಗಳಿಂದ ಕಿಲಾಡಿಗಳಿಗೆ ಜೋಶ್ ತುಂಬುವ Judgeಗಳು ಮತ್ತು ಡ್ಯಾನ್ಸ್ ಪ್ರತಿಭೆಗಳ Performanceಗಳಿಗೆ Encourage ಮಾಡೋ DKD ಜಡ್ಜಸ್ ಇಲ್ಲಿ ಒಂದಾಗ್ತಿರೋದು ಮನರಂಜನೆಯ ಮತ್ತೊಂದು ಮಜಲು. … Read more

ಜೀ ಕನ್ನಡದಲ್ಲಿ ಮಧ್ಯಾಹ್ನದ ಭರಪೂರ ಮನರಂಜನೆ – ಮಾರ್ಚ್ 1, ರಿಂದ ಮೂರು ಮಹೋನ್ನತ ಕಾರ್ಯಕ್ರಮಗಳು ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಪ್ರಾರಂಭ

Trinayani Zee Kannada

ಸದಾ ವಿನೂತನ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಕನ್ನಡದ ಅತ್ಯಂತ ಜನಪ್ರಿಯ ವಾಹಿನಿ ಜೀ ಕನ್ನಡ ಇದೀಗ ಮಧ್ಯಾಹ್ನದ ಮನರಂಜನೆಗೆ ಮೂರು ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ. “ಮನೆ ಮನೆ ಮಹಾಲಕ್ಷ್ಮಿ” ಎಂಬ ವಿನೂತನ ರಿಯಾಲಿಟಿ ಗೇಮ್ ಶೋ ಕರ್ನಾಟಕದ 31 ಜಿಲ್ಲೆಗಳ 175 ತಾಲೂಕುಗಳನ್ನೂ ತಲುಪಲಿದೆ. ಮಾರ್ಚ್ 1, ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮಕ್ಕೆ ಖ್ಯಾತ ನಿರೂಪಕಿ ಸುಷ್ಮಾ ನಿರೂಪಣೆ ಮಾಡಲಿದ್ದಾರೆ. ರಾಜ್ಯದ ಮೂಲೆ ಮೂಲೆಯ ಮಹಿಳೆಯರು ಇದರಲ್ಲಿ ಭಾಗವಹಿಸುತ್ತಾರೆ. … Read more

ಜೀ ಕನ್ನಡದಲ್ಲಿ ಸಂಕ್ರಾಂತಿ ಸಂಭ್ರಮ – ಈ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ

Kamali and Paru Sankranthi Special

ಈ ಸಂಕ್ರಾಂತಿಗೆ ಜೀ ಕನ್ನಡದಲ್ಲಿ ಸಂಜೆ 7 ಹಾಗೂ 7.30ಕ್ಕೆ ಪ್ರಸಾರ ಮಾಡುವ “ಕಮಲಿ ಮತ್ತು “ಪಾರು” ಧಾರಾವಾಹಿಗಳ ಮಹಾ ಸಂಗಮ ನಡೆಯಲಿದೆ. “ಸಂಕ್ರಾಂತಿ ಸಂಗಮ” ಎಂಬ ಕಾರ್ಯಕ್ರಮದಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಹಾಗೂ ಅನ್ನಪೂರ್ಣ ಮಹಾಜನ್ ಇಬ್ಬರೂ ಪರಸ್ಪರ ಭೇಟಿಯಾಗಿ ಮಾತನಾಡಿಕೊಂಡು ಸಂಕ್ರಾಂತಿ ಕಾರ್ಯಕ್ರಮವನ್ನು ಒಟ್ಟಾಗಿ ಆಚರಿಸಲಿದ್ದಾರೆ. ಈ ಇಬ್ಬರೂ ಎರಡೂ ಧಾರಾವಾಹಿಗಳ ಜನಪ್ರಿಯ ಐಕಾನ್ ಪಾತ್ರಗಳಾಗಿದ್ದು ಅರಸನಕೋಟೆ ಅಖಿಲಾಂಡೇಶ್ವರಿಯಾಗಿ ವಿನಯಾ ಪ್ರಸಾದ್ ಹಾಗೂ ಅನ್ನಪೂರ್ಣ ಮಹಾಜನ್ ಆಗಿ ಪದ್ಮಾ ವಾಸಂತಿ ತಮ್ಮ ಛಾಪು ಮೂಡಿಸಿದ್ದಾರೆ. ಇಬ್ಬರೂ … Read more