ನಿಮ್ಮ ನೆಚ್ಚಿನ “ಸ್ಟಾರ್ ಸುವರ್ಣ” ಇದೀಗ ಹೊಸ ರೂಪದಲ್ಲಿ ನಿಮ್ಮ ಮುಂದೆ..!
ಕಳೆದ 15 ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಇನ್ನಷ್ಟು ವರ್ಣಮಯಗೊಂಡು ಹೊಸ ರೂಪದಲ್ಲಿ ನಿಮ್ಮ ಮುಂದೆ ಬರ್ತಿದೆ. 2007 ರಲ್ಲಿ ಕರ್ನಾಟಕದ ಆಶೀರ್ವಾದವೇ ರೂಪುತಳೆದಂತೆ ಅವತರಿಸಿದ ಮಹಾವಾಹಿನಿ ಚಿನ್ನವಾಗಿ ಹುಟ್ಟಿ, ಚಿನ್ನವಾಗಿಯೇ ಜಗಮಗಿಸುತ್ತಿರೋ ಕರ್ನಾಟಕದ ಮನರಂಜನೆಯ ಗೋಲ್ಡ್ ಫೀಲ್ಡ್ “ಸ್ಟಾರ್ ಸುವರ್ಣ”. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ರಿಯಾಲಿಟಿ ಷೋ ಗಳಿಗೆ ನಾಂದಿ ಹಾಡಿದ ಸುವರ್ಣ ಇಂದು “ಸ್ಟಾರ್ ಸುವರ್ಣ” ವಾಗಿ ತನ್ನ ವಿಜಯ ಯಾತ್ರೆಯನ್ನು ಮುಂದುವರೆಸುತ್ತಿದೆ. ವಿನೂತನ ಪರಿಕಲ್ಪನೆ, ಅಮೋಘ ಪ್ರಯತ್ನಗಳು … Read more