ಜ್ಯೋತಿ – ಜುಲೈ ೧೦ ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ ೯.೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ

ಜಾಹೀರಾತುಗಳು
Jyothi Serial Kannada Star Cast
Jyothi Serial Kannada Star Cast

ಜ್ಯೋತಿ ಒಂದು ಕಾಲ್ಪನಿಕ ಹಾಗೂ ರೋಚಕವಾದ ಕಥೆಯುಳ್ಳ ಧಾರಾವಾಹಿ. ಉದಯ ಟಿವಿಯಲ್ಲಿ ಜುಲೈ ೧೦ ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ೯.೩೦ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ಚಲನಚಿತ್ರದ ನಾಯಕಿ ಮೇಘಶ್ರೀ ಈ ಧಾರಾವಾಹಿಯ ನಾಯಕಿಯ ಪಾತ್ರವನ್ನು ವಹಿಸಿದ್ದಾರೆ. ಇದರ ಜೊತೆಗೆ ಸೀಮಾ, ಸುಜಾತ, ನೀಲಾ ಮೇನನ್ ಹಾಗೂ ರಮೇಶ್ ಪಂಡಿತ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಧಾರಾವಾಹಿಯಲ್ಲಿ ಬಳಸಿದ ಗ್ರಾಫಿಕ್ಸ್ ಅದ್ಭುತವಾಗಿ ಮೂಡಿ ಬಂದಿದೆ.

ತನ್ನ ರೂಪ ಬದಲಿಸುವ ನಾಗಕನ್ಯೆಯ ಶಕ್ತಿಯ ಅರಿವಿಲ್ಲದೆ ಹಾಗೂ ನಾಗಲೋಕದ ಒಬ್ಬಳೆ ವಾರಸದಾರಳು ಎಂಬ ಸತ್ಯ ಗೊತ್ತಿಲ್ಲದೆ ಜ್ಯೋತಿ ನಾಗಲೋಕದ ಅರಮನೆಯಲ್ಲಿ ಕೆಲಸದವಳಾಗಿ ಕಾರ್ಯ ನಿರ್ವಹಿಸುತ್ತಾಳೆ. ತನ್ನ ಕುಟುಂಬದಿAದ ಹಾಗೂ ಬೇರೆ ಕ್ಷುದ್ರ ಶಕ್ತಿಗಳಿಂದ ಕಷ್ಟಗಳನ್ನ ಅನುಭವಿಸುತ್ತಾಳೆ. ಅವಳು ಹೇಗೆ ಈ ಎಲ್ಲ ಶಕ್ತಿಗಳನ್ನ ಸೋಲಿಸಿ ತಾನು ಪ್ರೀತಿಸಿದ ಹುಡುಗನನ್ನು ಹಾಗೂ ನಾಗಲೋಕದ ‘ನಾಗಮಾಣಿಕ್ಯ’ವನ್ನು ಪಡೆಯುತ್ತಾಳೆ ಎಂಬುದೆ ಜ್ಯೋತಿ ಧಾರಾವಾಹಿಯ ಕಥೆ.

ಜ್ಯೋತಿ ಜುಲೈ ೧೦ ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ ೯.೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಜಾಹೀರಾತುಗಳು

ಕನ್ನಡ ಟಿವಿ ಶೋಗಳು

Leave a Reply

Your email address will not be published. Required fields are marked *