ಗೀತಾ – ಜೀ ಕನ್ನಡ ವಾಹಿನಿಯು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾವನ್ನು ಇದೇ ಜುಲೈ 4ರಂದು ಭಾನುವಾರ ಸಂಜೆ 4.30ಕ್ಕೆ

ಜಾಹೀರಾತುಗಳು

ಪ್ರೀಮಿಯರ್ ಸಿನೆಮಾ – ಗೀತಾ

Geetha Movie Premier
Geetha Movie Premier

ಜೀ ಕನ್ನಡ ಮತ್ತು ಜೀ ಕನ್ನಡ ಎಚ್.ಡಿ.ಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮಾಡ್ತಿದೆ. ಮ್ಯೂಸಿಕಲ್‌ ಹಿಟ್‌ “ಗೀತಾ” ಸುಮಧುರ ಹಾಡುಗಳು ಹಾಗೂ ಗಣೇಶ್‌ ಸಿನಿಮಾಗಳ ಶೈಲಿಯ, ವಿಭಿನ್ನ ನಿರೂಪಣೆಯ ರೊಮ್ಯಾಂಟಿಕ್‌ ಸಿನಿಮಾವಾಗಿದೆ. ಚಿತ್ರಕ್ಕೆ ವಿಜಯ ನಾಗೇಂದ್ರ ಡೈರೆಕ್ಷನ್‌, ಅನೂಪ್‌ ರೂಬೆನ್ಸ್‌ ಮ್ಯೂಸಿಕ್‌ ಡೈರೆಕ್ಷನ್‌ ಇದೆ. “ಗೀತಾ” ಪಿಚ್ಚರ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಗೆ ಶಾನ್ವಿ ಶ್ರೀವಾಸ್ತವ, ಪ್ರಯಾಗ ಮಾರ್ಟಿನ್‌ ಹಾಗೂ ಪಾರ್ವತಿ ಅರುಣ್‌ ನಾಯಕಿಯರು. ಗಣೇಶ್‌ ತಂದೆ-ತಾಯಿ ಪಾತ್ರದಲ್ಲಿ ಡೈನಾಮಿಕ್‌ ಹೀರೋ ದೇವರಾಜ್‌, ಸುಧಾರಾಣಿ ನಟಿಸಿದ್ದಾರೆ. ಚಿತ್ರದಲ್ಲಿ ಬಹುತಾರಾಗಣವಿದ್ದು, ಮನೆಮಂದಿಯೆಲ್ಲಾ ಕೂತು ನೋಡಬಹುದಾದ ಮನೊರಂಜನಾತ್ಮಕ ಸಿನಿಮಾವಾಗಿದೆ.

ಕನ್ನಡ ಉಳಿಸುವ ಗೋಕಾಕ್ ಚಳವಳಿಯ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ನವಿರಾದ ಪ್ರೇಮಕಥೆಯುಳ್ಳ ಗೀತಾ ಚಿತ್ರದಲ್ಲಿ, ಗಣೇಶ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ತಾರೆ. ಎರಡು ಕಾಲಘಟದಲ್ಲಿ ನಡೆಯುವ ಕಥೆಯನ್ನು, ವಿಶಿಷ್ಟವಾಗಿ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕರು. ಕೊಲ್ಕತ್ತಾ, ಮೈಸೂರು, ಬೆಂಗಳೂರು, ಮನಾಲಿ ಸೇರಿದಂತೆ, ಕಣ್ಮನ ಸೆಳೆವ ಹಲವಾರು ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಗಣೇಶ್‌ ಹೋಮ್‌ ಬ್ಯಾನರ್‌ನಲ್ಲಿ ತಯಾರಾಗಿರೋ “ಗೀತಾ” ಸಿನಿಮಾವನ್ನು ಅವ್ರ ಹುಟ್ಟುಹಬ್ಬದ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರ ಮಾಡಲಾಗ್ತಿದ್ದು, ಭಾನುವಾರ ಸಂಜೆ ಮನೆಮಂದಿಯೆಲ್ಲಾ ಕೂತು ನೋಡಬಹುದಾಗಿದೆ. ಸಿನಿಮಾ ಕೊಲ್ಕತಾದಲ್ಲಿ ಪ್ರಾರಂಭಗೊಳ್ಳುತ್ತದೆ. ಆಕಾಶ್(ಗಣೇಶ್‌) ತನ್ನ ಪ್ರೀತಿಯನ್ನು ಗೀತಾ(ಪ್ರಯಾಗಾ ಮಾರ್ಟಿನ್‌)ಗೆ ವ್ಯಕ್ತಪಡಿಸಲು ಕಾಯುತ್ತಿರುತ್ತಾನೆ. ಆದರೆ ಗೀತಾಗೆ ಪ್ರೇಮ್ ಜೊತೆಯಲ್ಲಿ ನಿಶ್ಚಿತಾರ್ಥವಾಗಿರುತ್ತದೆ. ಗೀತಾ ನಿಶ್ಚಿತಾರ್ಥದಲ್ಲಿ ಆಕಾಶ್ ಪ್ರಿಯಾ(ಶಾನ್ವಿ ಶ್ರೀವಾಸ್ತವ)ಳನ್ನು ಭೇಟಿಯಾಗುತ್ತಾನೆ. ಕಾಲ ಕಳೆದಂತೆ ಅವರ ಬಾಂಧವ್ಯ ದೃಢವಾಗುತ್ತದೆ. ಈ ಮಧ್ಯದಲ್ಲಿ ಆಕಾಶ್ ತಂದೆ ತನ್ನ ಪ್ರೇಮಕಥೆಯನ್ನು ಬಿಚ್ಚಿಡುತ್ತಾನೆ. ಪ್ರಿಯಾ ಮಾಸ್ಟರ್ಸ್ ಕಲಿಯಲು ಯು.ಎಸ್.ಎ.ಗೆ ತೆರಳುತ್ತಾಳೆ.

ಆಕಾಶ್ ಕೊಲ್ಕತಾಗೆ ಕೆಲಸದ ಮೇಲೆ ಹೋಗುತ್ತಾನೆ. ಅಲ್ಲಿ ಗೀತಾಳನ್ನು ಭೇಟಿಯಾಗುತ್ತಾನೆ. ಅಲ್ಲಿ ಗೀತಾ ತನ್ನ ನಿಶ್ಚಿತಾರ್ಥ ರದ್ದುಪಡಿಸಿದ್ದನ್ನು ತಿಳಿಯುತ್ತಾಳೆ. ಸಮಯ ಕಳೆದಂತೆ ಆಕಾಶ್ ಮತ್ತು ಗೀತಾ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಬೆಂಗಳೂರಿನಲ್ಲಿ ಪ್ರಿಯಾಳೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವಾಗ ಆಕಾಶ್ ಗೆ ತಾನು ಪ್ರೇಮಿಸಿದ್ದು ಗೀತಾಳನ್ನು ಎಂದು ಅರಿವಾಗುತ್ತದೆ. ಆಗ ನಿಶ್ಚಿತಾರ್ಥ ರದ್ದುಪಡಿಸಿ ಗೀತಾಗೆ ತನ್ನ ಪ್ರೇಮ ನಿವೇದಿಸುತ್ತಾನೆ.

ಜಾಹೀರಾತುಗಳು

ಕನ್ನಡ ಟಿವಿ ಶೋಗಳು

Leave a Reply

Your email address will not be published.