ಜೀ ಕನ್ನಡ ಕುಟುಂಬದ ರಥ ,ಬರುತ್ತಿದೆ ನಿಮ್ಮೂರಿನತ್ತ !

ಜಾಹೀರಾತುಗಳು

ಜೀ ಕನ್ನಡ ಚಾನೆಲ್ – ನಿಮ್ಮೂರಿನತ್ತ ಜೀ ಕನ್ನಡ ಕುಟುಂಬದ ರಥ, Zee5 ನಲ್ಲಿ ಮಾಡಿ ಮತ !

Karnataka Television Awards
Karnataka Television Awards

15 ವರ್ಷಗಳ ಯಶಸ್ಸಿನ ಸಂಭ್ರಮದಲ್ಲಿರುವ ಜೀ ಕನ್ನಡ ವಾಹಿನಿ ತನ್ನ ಕುಟುಂಬದ ಅತ್ಯಂತ ದೊಡ್ಡ ಹಬ್ಬವಾದ “ಜೀ ಕುಟುಂಬ ಅವಾರ್ಡ್ಸ್ 2021” ಕಾರ್ಯಕ್ರಮಕ್ಕೆ ಜಿ೫ ಆಪ್ ಆಪ್ ಮೂಲಕ ಡಿಜಿಟಲ್ ಮತದಾನ ಮಾಡಿಸಲು ಜೀ ಕುಟುಂಬ ರಥಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದೆ.

ಜೀ ಕನ್ನಡದ ಪ್ರಮುಖರು ಮತ್ತು ಅನೇಕ ಗಣ್ಯರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಾಗಿದ್ದು ಉದ್ಘಾಟನಾ ಬಾವುಟ ಹಾರಿಸಿ ಜೀ ಕುಟುಂಬದ ರಥಕ್ಕೆ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುವ ಈ ವಾಹನ ಜೀ ಕನ್ನಡದಲ್ಲಿ ಪ್ರಸಾರವಾಗುವ ಎಲ್ಲಾ ವರ್ಗವೂ ಮೆಚ್ಚಿರುವ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳು,ಕುಟುಂಬದ ಕಲಾವಿದರ ಬಗ್ಗೆ ವೀಕ್ಷಕರಿಂದಲೇ Zee5 App ಮೂಲಕ ಡಿಜಿಟಲ್ ವೋಟಿಂಗ್ ಪಡೆಯಲು ಉತ್ತೇಜಿಸುತ್ತದೆ. ಅತಿಶೀಘ್ರದಲ್ಲೇ ಜೀ ಕನ್ನಡ ಕುಟುಂಬ ಅವಾರ್ಡ್ಸ್ 2021 ಕಾರ್ಯಕ್ರಮ ಪ್ರಸಾರವಾಗಲಿದೆ.

ಜಾಹೀರಾತುಗಳು

“ಜೀ ಕುಟುಂಬ ಅವಾರ್ಡ್ಸ್” ವರ್ಷದಿಂದ ವರ್ಷಕ್ಕೆ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡು ಕನ್ನಡ ಕಿರುತೆರೆ ವೀಕ್ಷಕರು ಕಾತುರದಿಂದ ನಿರೀಕ್ಷಿಸುವ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ತಮ್ಮ ಪ್ರತಿಭೆಯಿಂದ ವೀಕ್ಷಕರನ್ನು ರಂಜಿಸುತ್ತಿರುವ ಕುಟುಂಬದ ತಾರೆಯರನ್ನು, ತಂತ್ರಜ್ಞರನ್ನು ಮತ್ತು ಹಲವು ವಿಭಾಗದ ಶ್ರಮಿಕರನ್ನು ಗೌರವಿಸುವುದು ಜೀ ಕನ್ನಡ ವಾಹಿನಿಗೆ ಹೆಮ್ಮೆಯ ವಿಷಯವಾಗಿದೆ. ಈ ವರ್ಷದ ವಿಶೇಷವೆಂದರೆ ಕುಟುಂಬ ಅವಾರ್ಡ್ಸ್ ಪುರಸ್ಕೃತರನ್ನು Zee5 App ನಲ್ಲಿ Vote ಮಾಡುವ ಮೂಲಕ ಆಯ್ಕೆ ಮಾಡಲು ಡಿಜಿಟಲ್ ಮತದಾನದ ವಾಹನಕ್ಕೆ ಚಾಲನೆ ನೀಡಿರುವುದು ನಮಗೆ ಬಹಳ ಸಂತೋಷವಾಗಿದೆ. ಜೀ ಕನ್ನಡದ ಎಲ್ಲಾ ಕಾರ್ಯಕ್ರಮಗಳಿಗೆ ಅಭೂತಪೂರ್ವ ಬೆಂಬಲ ನೀಡುತ್ತಾ ಕರ್ನಾಟಕದ ಜನತೆ ನಮ್ಮನ್ನು ನಂ 1 ಸ್ಥಾನದಲ್ಲಿ ಮೆರೆಸುತ್ತಿದ್ದಾರೆ. ಕನ್ನಡಿಗರು ಈ ವರ್ಷ ಅವರ ನೆಚ್ಚಿನ ಕಲಾವಿದರು,ತಂತ್ರಜ್ಞರನ್ನು ಡಿಜಿಟಲ್ ಮತದಾನದ ಮೂಲಕ ಆಯ್ಕೆ ಮಾಡಿ ನಮ್ಮೊಂದಿಗೆ ಸಂಭ್ರಮಗಳನ್ನು ಸಂಭ್ರಮಿಸಲಿ.

ರಾಘವೇಂದ್ರ ಹುಣಸೂರು ಮುಖ್ಯಸ್ಥರು ಜೀ ಕನ್ನಡ ಮತ್ತು ಜೀ ಪಿಚ್ಚರ್ ವಾಹಿನಿ

Leave a Comment