ಜೀ಼ಕನ್ನಡದಲ್ಲಿ ಕನ್ನಡದ ಎರಡು ಸೂಪರ್ ಹಿಟ್ ಚಿತ್ರಗಳಾದ “ರಾಮಾರ್ಜುನ” ಹಾಗೂ “ಕಥಾಸಂಗಮ”ಗಳ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಯೋಜಿಸಿದೆ

ಕಥಾಸಂಗಮ – ಕಿರಣ್ ರಾಜ್ ಕೆ., ಚಂದ್ರಜಿತ್ ಬೆಳ್ಳಿಯಪ್ಪ, ಶಶಿ ಕುಮಾರ್ ಪಿ., ರಾಹುಲ್ ಪಿ.ಕೆ., ಜಮದಗ್ನಿ ಮನೋಜ್, ಕರಣ್ ಅನಂತ್, ಜಯಶಂಕರ್ ನಿರ್ದೇಶನದ ಈ ವಿವಿಧ ಕಥೆಗಳ ಗುಚ್ಛ “ಕಥಾಸಂಗಮ” ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಹರಿಪ್ರಿಯ, ರಿಷಭ್ ಶೆಟ್ಟಿ, ಕಿಶೋರ್, ರಾಜ್ ಬಿ. ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಅವಿನಾಶ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಹರಿ ಸಮಸ್ತಿ ಮುಂತಾದವರು ನಟಿಸಿದ್ದಾರೆ. ದಿ.ಪುಟ್ಟಣ್ಣ ಕಣಗಾಲ್ 1976ರಲ್ಲಿ ಹಲವು ಕಥೆಗಳ ಗುಚ್ಛವನ್ನು ಇದೇ ಹೆಸರಿನಲ್ಲಿ ನಿರ್ದೇಶಿಸಿದ್ದರು. ಅದೇ ಪರಿಕಲ್ಪನೆಯಲ್ಲಿ ರಿಷಭ್ ಶೆಟ್ಟಿ ಈ ಚಿತ್ರವನ್ನು ರೂಪಿಸಿದ್ದಾರೆ. ಈ ಚಲನಚಿತ್ರವನ್ನು ಶ್ರೀದೇವಿ ಪ್ರೊಡಕ್ಷನ್ಸ್, ಪ್ರದೀಪ್ ಎನ್.ಆರ್. ಮತ್ತು ರಿಷಭ್ ಶೆಟ್ಟಿ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿದ್ದಾರೆ. ಇದೇ ಶನಿವಾರ ರಾತ್ರಿ 7 ಕ್ಕೆ ಜೀ಼ ಕನ್ನಡ ಹಾಗೂ ಜೀ಼ ಕನ್ನಡ ಹೆಚ್‍ಡಿ ವಾಹಿನಿಯಲ್ಲಿ ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.
ರಾಮಾರ್ಜುನ – ಅನೀಶ್ ತೇಜೇಶ್ವರ್ ನಟನೆ ಹಾಗೂ ನಿರ್ದೇಶನದ “ರಾಮಾರ್ಜುನ” ಸೂಪರ್ ಹಿಟ್ ಆಕ್ಷನ್ ಎಂಟರ್ ಟೈನರ್ ಚಿತ್ರವಾಗಿದೆ. ವಿಮೆ, ವೈದ್ಯಕೀಯ ಹಾಗೂ ರಾಜಕೀಯ ಮಾಫಿಯಾದ ಕಥೆ ಹೇಳುತ್ತದೆ. ನಾಯಕ ಒಬ್ಬ ವಿಮಾ ಏಜೆಂಟ್ ಆಗಿರುತ್ತಾನೆ. ಪ್ರತಿಯೊಬ್ಬರೂ ವಿಮೆ ಪಡೆಯಬೇಕೆನ್ನುವುದು ಅವನ ಬಯಕೆ. ಜನರ ಸಮಸ್ಯೆಗಳಿಗೆ ಒಂದೇ ಫೋನ್ ಕರೆಗೆ ಸ್ಪಂದಿಸುತ್ತಿರುತ್ತಾನೆ. ಆದರೆ ಆ ಪ್ರದೇಶದಲ್ಲಿ ಮರಣಿಸಿದ 20 ಮಂದಿಯ ಹಿಂದೆ ಬಹುದೊಡ್ಡ ಇನ್ಷೂರೆನ್ಸ್ ಹಗರಣವಿರುತ್ತದೆ. ಈ ಹಗರಣದ ಹಿಂದಿನ ರೂವಾರಿಗಳನ್ನು ಪತ್ತೆ ಮಾಡುವಲ್ಲಿ ನಾಯಕ ಯಶಸ್ವಿಯಾಗುತ್ತಾನೆ.
ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ರವಿ ಕಾಳೆ, ಶರತ್ ಲೋಹಿತಾಶ್ವ ನಟಿಸಿದ್ದಾರೆ. ಇದೇ ಭಾನುವಾರ ರಾತ್ರಿ 7 ಕ್ಕೆ ಜೀ಼ ಕನ್ನಡ ಹಾಗೂ ಜೀ಼ ಕನ್ನಡ ಹೆಚ್‍ಡಿ ವಾಹಿನಿಯಲ್ಲಿ ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.