ಸ್ಟಾರ್ ಸುವರ್ಣದಲ್ಲಿ “ಕಥೆಯೊಂದು ಶುರುವಾಗಿದೆ” ಇದೇ ನವೆಂಬರ್ 28ರಂದು, ಸೋಮವಾರದಿಂದ ಸಂಜೆ 7 ಗಂಟೆಗೆ

ಜಾಹೀರಾತುಗಳು
ಕಥೆಯೊಂದು ಶುರುವಾಗಿದೆ
Katheyondu Shuruvagide Serial on Star Suvarna

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಪ್ರೇಕ್ಷಕರಿಗೆ ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮುದ್ದುಮಣಿಗಳು, ಮನಸೆಲ್ಲಾನೀನೇ, ಮರಳಿಮನಸಾಗಿದೆ, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯು ಹೊಸದೊಂದು ಧಾರವಾಹಿಯನ್ನು ಶುರುಮಾಡಲು ಸಜ್ಜಾಗಿದೆ ಅದೇ “ಕಥೆಯೊಂದು ಶುರುವಾಗಿದೆ”.
.
“ಕಥೆಯೊಂದು ಶುರುವಾಗಿದೆ” ಇದು ಮೂರು ಜೋಡಿಗಳು ಹಾಗೂ ಎರಡು ಮನೆತನಗಳ ಮಧ್ಯೆ ನಡೆಯುವ ಪ್ರೀತಿ ಸಂಘರ್ಷದ ಅದ್ದೂರಿ ಧಾರಾವಾಹಿ.

ಈ ಧಾರವಾಹಿಯ ಕಥಾ ನಾಯಕಿ ಕೃತಿ, ಈಕೆ ಮಧ್ಯಮ ಕುಟುಂಬದ ಹುಡುಗಿಯಾಗಿರುತ್ತಾಳೆ. ತುಂಬಾ ಸ್ವಾಭಿಮಾನಿ, ಇಡೀ ಮನೆಯ ಜವಾಬ್ದಾರಿ ಹೊತ್ತು ಮನೆ ನಡೆಸುವ ರಾಯಭಾರಿ. ಇವಳು ತುಂಬಾ ಸಿಂಪಲ್. ಹಾಗಂತಾ ಪಾಪದ ಹುಡ್ಗಿ ಅನ್ಕೋಬೇಡಿ, ಇವಳ ಮಾತು-ನಡುವಳಿಕೆ ಅಷ್ಟೇ ಖಡಕ್, ಸದಾ ಮನೆಯ ಒಳಿತನ್ನೇ ಬಯಸೋ ಈಕೆ ಎಷ್ಟೇ ಕಷ್ಟ ಬಂದ್ರು ನಗುತ್ತಾ ಮನೆ ನಿಭಾಯಿಸೋ ಛಲಗಾರ್ತಿ. ಚಿತ್ರಕಲೆಯೇ ಇವಳ ವೃತ್ತಿ, ಫ್ಯಾಮಿಲಿ ಅಂದ್ರೆ ಈಕೆಗೆ ಪಂಚಪ್ರಾಣ, ನಂಬಿಕೆಯನ್ನೇ ಶಕ್ತಿಯನ್ನಾಗಿಸಿರೋ ಈಕೆ ಕುಟುಂಬದ ಗೌರವವನ್ನು ಉಳಿಸಲು ಯಾವ ಸವಾಲನ್ನು ಬೇಕಿದ್ರೂ ಎದುರಿಸೋಕೂ ರೆಡಿಯಾಗಿರುತ್ತಾಳೆ. ಸಮಾಜದಲ್ಲಿ ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ, ಗಂಡಿಗೆ ಸರಿ ಸಮಾನಾಗಿ ನಿಲ್ಲೋ ಸಾಮರ್ಥ್ಯ ಹೆಣ್ಣಿಗಿದೆ ಎಂದು ತೋರಿಸೋಕೆ ‘ಹೆಣ್ಮಕ್ಳೆ ಸ್ಟ್ರಾಂಗು ಗುರು’ ಎಂಬ ನಾಮಪದದಡಿ ಸಮಾಜದಲ್ಲಿರೋ ಹೆಣ್ಣುಕುಲಕ್ಕೆ ಸ್ಫೂರ್ತಿಯಾಗಿ ನಿಲ್ತಿದ್ದಾಳೆ ನಮ್ ಕೃತಿ.

ಇನ್ನು ಈ ಕಥೆಯ ನಾಯಕ ಯುವರಾಜ್ ಬಹದ್ದೂರ್. ಬಹದ್ದೂರ್ ಫ್ಯಾಮಿಲಿಗೆ ಇವನೇ ಹಿರಿಮಗ. ಆದರೆ ಸ್ವಲ್ಪ ಅಹಂಕಾರಿ, ಇವನ ನಿರ್ಧಾರ ತುಂಬಾ ಅಚ್ಚುಕಟ್ಟು ಇವನು ತುಂಬಾ ಕಟ್ಟುನಿಟ್ಟು. ಮಾತಲ್ಲಿ ಮನೆಕಟ್ದೇ ಕೆಲಸ ಮಾಡಿ ತೋರಿಸೋ ಇವನು ಕೆಲಸಕ್ಕೆ ತುಂಬಾ ಪ್ರಾಮುಖ್ಯತೆ ಕೊಡ್ತಾನೆ. ಈತ ಬಹದ್ದೂರ್ ವಂಶದ ಮರ್ಯಾದೆಯನ್ನು ಎತ್ತಿ ಹಿಡಿಯುವ ರಾಜಸಿಂಹ. ಇವನಿಗೆ ಇಬ್ಬರು ಸಹೋದರರು. ಖ್ಯಾತ ವಜ್ರದ ಬ್ಯುಸಿನೆಸ್ ಮ್ಯಾನ್ ಆಗಿರುವ ಈತ ವಜ್ರದಷ್ಟೆ ಪರ್ಫೆಕ್ಟ್. ಅಷ್ಟೇ ಅಲ್ಲದೆ ಈತನಿಗೆ ಸುತ್ತಮುತ್ತ ಇರೋರು ಕೂಡ ಪರ್ಫೆಕ್ಟ್ ಆಗಿಯೇ ಇರಬೇಕು.

ಜಾಹೀರಾತುಗಳು

ಒಬ್ಬಳು ಸ್ವಾಭಿಮಾನಿ, ಇನ್ನೊಬ್ಬ ಅಹಂಕಾರಿ. ಸ್ವಾಭಿಮಾನಿ ಹಾಗು ಅಹಂಕಾರಿಗಳ ನಡುವೆ ನಡೆಯುವ ಜಿದ್ದಾ ಜಿದ್ದಿಯೇ ಈ ಧಾರಾವಾಹಿಯ ಕಥಾಹಂದರ. ಈ ಭಿನ್ನ ಜಗತ್ತಿನ ವಿಭಿನ್ನ ಮನಸುಗಳು ಹೇಗೆ ಒಂದಾಗುತ್ತೆ ಅನ್ನೋದನ್ನು ಕಾದುನೋಡಬೇಕಿದೆ. ಅಷ್ಟೇ ಅಲ್ಲದೆ ಈ ಧಾರಾವಾಹಿಯಲ್ಲಿ ಅಕ್ಕ-ತಂಗಿಯರ ಸಂಬಂಧ, ಅಣ್ಣ-ತಮ್ಮಂದಿರ ಭಾಂಧವ್ಯ ಹೇಗಿರಬೇಕು ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ.
.
“ಕಥೆಯೊಂದು ಶುರುವಾಗಿದೆ” ಧಾರಾವಾಹಿಯು ಜನಪ್ರಿಯ ಹಿರಿಯ ಕಲಾವಿದರೊಂದಿಗೆ ಒಂದು ಸುಂದರವಾದ ತಾರಾಬಳಗವನ್ನು ಹೊಂದಿದ್ದು ಸುಂದರ್ ಶ್ರೀ, ಸಹನಾ, ಅಭಿನಯ, ಭವಾನಿ, ಸುಜಾತ ಅಕ್ಷಯ, ಸುಜಯ್, ಭವಿಶ್, ಇಂಚರ ಜೋಶಿ ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ.

ಹೊಚ್ಚ ಹೊಸ ಧಾರವಾಹಿ “ಕಥೆಯೊಂದು ಶುರುವಾಗಿದೆ” ಇದೇ ನವೆಂಬರ್ 28 ರಂದು, ಸೋಮವಾರದಿಂದ ಸಂಜೆ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Leave a Comment