ಇತ್ತೀಚಿನ ಕನ್ನಡ ಟೆಲಿವಿಷನ್ ಧಾರಾವಾಹಿ – ಕೃಷ್ಣ ಸುಂದರಿ

ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳಲ್ಲಿ ತನ್ನ ವಿನೂತನ ಪರಿಕಲ್ಪನೆಗಳಿಗೆ ಹೆಸರಾದ ಕನ್ನಡದ ಮುಂಚೂಣಿಯ ಜೀ ಕನ್ನಡ ತನ್ನ ಹೊಸ ಧಾರಾವಾಹಿ “ಕೃಷ್ಣ ಸುಂದರಿ”ಯನ್ನು ಪ್ರಾರಂಭಿಸಿದೆ. ಕಮಲಿ, ಪಾರು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿ-2 ಹಾಗೂ ಬ್ರಹ್ಮಗಂಟು ಮುಂತಾದ ಸೂಪರ್ ಹಿಟ್ ಧಾರಾವಾಹಿಗಳನ್ನು ಪ್ರಸ್ತುತಪಡಿಸುತ್ತಿರುವ ಜೀ ಕನ್ನಡದ ಕಿರೀಟಕ್ಕೆ ಇದು ಮತ್ತೊಂದು ಗರಿಯಾಗಿದೆ. ಜೀ ಕನ್ನಡ ಸಮಾಜಕ್ಕೆ ಅಂಟಿಕೊಂಡಿರುವ ಕಳಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಈ ಧಾರಾವಾಹಿ ಮತ್ತೊಂದು ವಿನೂತನವಾದ ನೈಜ ಪರಿಕಲ್ಪನೆಯೊಂದಿಗೆ ವೀಕ್ಷಕರನ್ನು ರಂಜಿಸಲು ಸಜ್ಜಾಗಿದ್ದು ಮೇ 17ರಿಂದ ಸಂಜೆ 7.00 ಗಂಟೆಗೆ ವಾರದ ಏಳು ದಿನಗಳೂ ಪ್ರಸಾರವಾಗಲಿದೆ.
ಪ್ರಸಾರ ಸಮಯ
“ಕೃಷ್ಣ ಸುಂದರಿ”ಯ ಕಥೆಯು ಸಾಧಾರಣವಾಗಿ ಕಾಣುವ ಗಾಯಕಿ ಶ್ಯಾಮ ಮೌಲ್ಯಗಳನ್ನು ಜೀವಿಸುವ ಶ್ರೀಮಂತ ಅಖಿಲ್ ನನ್ನು ಮದುವೆಯಾಗುತ್ತಾಳೆ. ಆದರೆ ಆಕೆಯ ಜೀವನದ ಏರಿಳಿತಗಳನ್ನು ಮೀರಿ ಪ್ರಯಾಣಿಸಿ ಪತಿಯ ಸಹಕಾರದಿಂದ ಖ್ಯಾತ ಗಾಯಕಿಯಾಗುತ್ತಾಳೆ. ಆಕೆ ಆಧ್ಯಾತ್ಮಿಕತೆಯತ್ತ ಹೊರಳುವ ಮೂಲಕ ಶ್ರೀಕೃಷ್ಣನನ್ನು ಆರಾಧಿಸುತ್ತಾಳೆ. ಶ್ರೀಕೃಷ್ಣನೇ ಆಕೆಗೆ ಮಾರ್ಗದರ್ಶನ ನೀಡಬೇಕೆಂದು ಬಯಸುತ್ತಾಳೆ. ಅಖಿಲ್ ಆಕೆಯ ಹೊರಗಿನ ಸೌಂದರ್ಯಕ್ಕಿಂತ ಆಕೆಯ ಆಂತರಿಕ ಸೌಂದರ್ಯವನ್ನು ಮೆಚ್ಚಿಕೊಳ್ಳುತ್ತಾನೆ. ಆತನ ಸತತ ಬೆಂಬಲ ಮತ್ತು ಉತ್ತೇಜನವು ಆಕೆಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.
ಶ್ಯಾಮ ಸುಂದರಿಯ ಉತ್ಸಾಹಕರ ಪ್ರಯಾಣವನ್ನು ಕಾಣಲು ಮೇ 17, ರಿಂದ ಪ್ರತಿನಿತ್ಯ ಸಂಜೆ 7.00ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್.ಡಿ.ಯಲ್ಲಿ ಕೃಷ್ಣ ಸುಂದರಿಗೆ ಟ್ಯೂನ್ ಮಾಡಿಕೊಳ್ಳಿ. ಮನರಂಜನೆಯ ಪಾಲುದಾರರಾಗಿ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ನಾವು ನಿಮಗೆ ಕೋರುತ್ತೇವೆ