
ಇಂದಿನಿಂದ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಧಾರವಾಹಿ “ನಮ್ಮ ಲಚ್ಚಿ” ಸೋಮ-ಶನಿ ರಾತ್ರಿ 8.00 ಗಂಟೆಗೆ ಪ್ರಸಾರವಾಗುತ್ತಿದೆ. ಸದಾಕಾಲ ಹೊಸತನಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ ‘ಸ್ಟಾರ್ ಸುವರ್ಣ’ ಈ ಬಾರಿ “ನಮ್ಮ ಲಚ್ಚಿ” ಧಾರಾವಾಹಿಗೆ ವಿನೂತನ ರೀತಿಯಲ್ಲಿ ಪ್ರಮೋಷನ್ ಮಾಡಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಧಾರಾವಾಹಿಯೊಂದಕ್ಕೆ ಆಗ್ಮೆಂಟೆಡ್ ರಿಯಾಲಿಟಿ ವಿಡಿಯೋವನ್ನು ಪತ್ರಿಕಾ ಜಾಹೀರಾತಿಗಾಗಿ ಮಾಡಲಾಗಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗುತ್ತಿರುವ “ನಮ್ಮ ಲಚ್ಚಿ” ಧಾರಾವಾಹಿಯ ಪ್ರಮೋಷನ್ ಗಾಗಿ ಆಗ್ಮೆಂಟೆಡ್ ರಿಯಾಲಿಟಿ ವಿಡಿಯೋವನ್ನು ಪತ್ರಿಕಾ ಜಾಹಿರಾತಿನಲ್ಲಿ ಬಳಸಲಾಗಿದೆ. ಇಂದಿನ ದಿನಪತ್ರಿಕೆಯಲ್ಲಿ ಬಂದಿರುವ ‘ನಮ್ಮ ಲಚ್ಚಿ’ ಧಾರಾವಾಹಿಯ ಜಾಹಿರಾತಿನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಮೊಬೈಲ್ ನಲ್ಲಿಇದರ ಅನುಭವ ನಿಮಗಾಗುತ್ತದೆ. ಈ ರೀತಿಯಲ್ಲಿ ವೀಕ್ಷಕರು ವಿಭಿನ್ನ ರೀತಿಯ ಅನುಭವವನ್ನು ಪಡೆದುಕೊಳ್ಳಬಹುದು. ಹಳ್ಳಿಯಲ್ಲಿ ಬೆಳೆದಿರೋ ಪುಟ್ಟ ಮಗುವಿಗೆ ಸಂಗೀತ ಅಂದ್ರೆ ಪಂಚ ಪ್ರಾಣ. ಸಂಗೀತ ಮಾಂತ್ರಿಕ ಸಂಗಮ್ ಸಾತ್ನೂರ್ ನ ಅತೀ ದೊಡ್ಡ ಅಭಿಮಾನಿಯಾಗಿರುವ ಈ ಮರಿ ಕೋಗಿಲೆಗೆ ಆತನೇ ತನ್ನ ತಂದೆ ಎಂಬ ಕಟು ಸತ್ಯ ಹೇಗೆ ತಿಳಿಯುತ್ತೆ ಎಂಬುದೇ ‘ನಮ್ಮ ಲಚ್ಚಿ’ ಧಾರಾವಾಹಿಯ ಕಥೆ.
