ನೇತಾಜಿ ಸುಭಾಷ್ ಚಂದ್ರ ಬೋಸ್ – ಜೀ ಕನ್ನಡದಿಂದ ಜೂನ್ 7ರಿಂದ ವಿನೂತನ ಧಾರಾವಾಹಿ ಪ್ರಾರಂಭ

ಜಾಹೀರಾತುಗಳು
Zee Serial Netaji Kannada Version
Zee Serial Netaji Kannada Version

ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳಲ್ಲಿ ತನ್ನ ವಿನೂತನ ಪರಿಕಲ್ಪನೆಗಳಿಗೆ ಹೆಸರಾದ ಕನ್ನಡದ ಮುಂಚೂಣಿಯ ಕಿರುತೆರೆ ವಾಹಿನಿ ಜೀ ಕನ್ನಡ ತನ್ನ ಹೊಸ ಧಾರಾವಾಹಿ “ನೇತಾಜಿ ಸುಭಾಷ್ ಚಂದ್ರ ಬೋಸ್” ಪ್ರಾರಂಭಿಸಲಿದೆ. ವೀಕ್ಷಕರಿಗೆ ಮನ ಮುಟ್ಟುವ ಧಾರಾವಾಹಿಗಳನ್ನು ರೂಪಿಸುವ ಜೀ ಕನ್ನಡದಿಂದ ಮತ್ತೊಂದು ಮಹೋನ್ನತ ಕಾರ್ಯಕ್ರಮವಾಗಿದೆ.

ಜೂನ್ 7ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5ರಿಂದ 6 ಗಂಟೆಗೆ ಒಂದು ಗಂಟೆ ಕಾಲ ಪ್ರಸಾರವಾಗಲಿರುವ ಈ ಧಾರಾವಾಹಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ನಾಯಕನ ಐತಿಹಾಸಿಕ ಕಥೆಯನ್ನು ಬಿಂಬಿಸುತ್ತದೆ.

ಅಂಬೇಡ್ಕರ್ ಧಾರಾವಾಹಿ ಪ್ರಸಾರದಿಂದ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಬಾಲವೃದ್ಧರಾದಿ ಶ್ಲಾಘನೆ ಪಡೆದಿರುವ ಜೀ ಕನ್ನಡ ಇದೀಗ ಸುಭಾಷ್ ಚಂದ್ರ ಬೋಸ್ ಅವರ ಜೀವನಗಾಥೆಯನ್ನು ಮನರಂಜಿಸುವ ರೀತಿಯಲ್ಲಿ ಇತಿಹಾಸವನ್ನು ಮರು ಕಟ್ಟಿಕೊಡಲಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಹಾದಿ ತುಳಿದ ಅವರು ಜರ್ಮನಿಯ ನೆರವಿನೊಂದಿಗೆ “ಇಂಡಿಯನ್ ನ್ಯಾಷನಲ್ ಆರ್ಮಿ” ಕಟ್ಟಿದರು. ಒರಿಸ್ಸಾದ ಕಟಕ್ ನಲ್ಲಿ ಜನಿಸಿದ ಅವರು ತನ್ನ ತಂದೆಯ ಆಸೆಯಂತೆ ಇಂಡಿಯನ್ ಸಿವಿಲ್ ಸರ್ವೀಸ್ ಸೇರಲು ಬ್ರಿಟನ್ನಿಗೆ ಹೋದರೂ ನಂತರ ಭಾರತಕ್ಕೆ ಹಿಂದಿರುಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಗಾಂಧಿಯವರ ಅಹಿಂಸಾ ಹೋರಾಟ ವಿರೋಧಿಸಿ ಸ್ವಂತ ಸೇನೆ ಕಟ್ಟಿದರು. ಅವರ ವಿಮಾನ ಅಪಘಾತದಲ್ಲಿ ಮೃತರಾದರು ಎಂದು ನಂಬಲಾಗಿದೆ. ಆದರೆ ಅದನ್ನು ಒಪ್ಪದೇ ಇರುವವರೂ ಬಹಳ ಮಂದಿ ಇದ್ದಾರೆ.

ಜಾಹೀರಾತುಗಳು

ಒಟ್ಟಿನಲ್ಲಿ ಕನ್ನಡದ ಮುಂಚೂಣಿಯ ಕಿರುತೆರೆ ವಾಹಿನಿ ಜೀ ಕನ್ನಡದಿಂದ ಹೊಚ್ಚಹೊಸ, ವಿನೂತನ ಕಾರ್ಯಕ್ರಮಗಳನ್ನು ನಿರೀಕ್ಷಿಸುವ ವೀಕ್ಷಕರಿಗೆ ಭರಪೂರ ರಂಜನೆ, ಮತ್ತೆ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಕಿಚ್ಚು ತುಂಬುವ ಈ ಧಾರಾವಾಹಿಯನ್ನು ವೀಕ್ಷಕರು ಈ ಹಿಂದಿನ ಎಲ್ಲ ಧಾರಾವಾಹಿಗಳಂತೆಯೇ ಆದರದಿಂದ ಸ್ವೀಕರಿಸುತ್ತಾರೆ ಎಂಬ ಭರವಸೆಯನ್ನು ಜೀ ಕನ್ನಡ ಹೊಂದಿದೆ.

Netaji Subhash Chandra Bose Serial
Netaji Subhash Chandra Bose Serial

Leave a Comment