ಉದಯ ಉಡುಗೊರೆಗಳ ಉತ್ಸವ – ಉದಯ ಟಿವಿಯಲ್ಲಿ ಭಕ್ತಿ ಭಾವದ ಗಣೇಶೋತ್ಸವ ವೀಕ್ಷಕರಿಗೆ ಆಕರ್ಷಕ ಉಡುಗರೆಗಳ ಉತ್ಸವ

ಜಾಹೀರಾತುಗಳು
Udaya Udugoregala Utsava
Udaya Udugoregala Utsava

ಉದಯ ಟಿ.ವಿ. ತನ್ನ ವೈವಿಧ್ಯಮಯ ಧಾರಾವಾಹಿಗಳು, ಕಾರ್ಯಕ್ರಮಗಳು ಹಾಗೂ ಸಿನಿಮಾಗಳ ಮೂಲಕ ಕಳೆದ ೨೭ ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತ ಬಂದಿದೆ. ಹಬ್ಬ ಹರಿದಿನಗಳನ್ನು ಧಾರಾವಾಹಿಯಲ್ಲಿ ಆಚರಿಸಿ ಹೊಸ ರಂಗು ತುಂಬುವ ಟ್ರೆಂಡ್‌ ಹುಟ್ಟುಹಾಕಿದ್ದೇ ಉದಯ ಟಿ.ವಿ. ಪ್ರತಿವರ್ಷದಂತೆ ಈ ವರ್ಷವೂ ಉದಯ ಟಿ.ವಿ. ಧಾರಾವಾಹಿಗಳಲ್ಲಿ ಭಕ್ತಿ ಭಾವದ, ರಂಗುರಂಗಿನ, ಸಾಮಾಜಿಕ ಸಂದೇಶ ಸಾರುವ ಗಣೇಶೋತ್ಸವ ಯೋಜಿಸಲಾಗಿದೆ. ಕೊರೊನಾ ಸಂಕ್ರಮಣ ಕಾಲವನ್ನು ಗಮನದಲ್ಲಿ ಇರಿಸಿಕೊಂಡು ಗೌರಿ-ಗಣೇಶ ಹಬ್ಬ ಆಚರಿಸಿ ಮನರಂಜನೆಯ ಜೊತೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

ಸಂಜೆ ೬ ಗಂಟೆಗೆ ಪ್ರಸಾರವಾಗುವ ʻಯಾರಿವಳುʼ ಧಾರಾವಾಹಿಯಲ್ಲಿ ಕಷ್ಟದಲ್ಲಿರುವ ನಿಜ ಭಕ್ತರಿಗೆ ಭಗವಂತ ಯಾವುದೋ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ ಎಂಬ ಸಂದೇಶವಿದೆ. ನಾಯಕಿ ಮಾಯಾಳ ಪರಿಸ್ಥಿತಿಯನ್ನು ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.

ಸಂಜೆ ೬:೩೦ಕ್ಕೆ ಪ್ರಸಾರವಾಗುವ ʻಗೌರಿಪುರದ ಗಯ್ಯಾಳಿಗಳುʼ ಧಾರಾವಾಹಿಯಲ್ಲಿ ಪರಿಸರ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅದ್ದೂರಿತನ ಆಡಂಬರಕ್ಕಿಂತ ನಂಬಿಕೆಗೆ ದೇವರು ಒಲಿಯುತ್ತಾನೆ ಎಂಬ ಸಂದೇಶ ಇರಲಿದೆ. ಬೋರೇಗೌಡನ ವಿಸ್ಮೃತಿ ಸರಿಹೋಗುವುದೇ ಇದಕ್ಕೆ ಸಾಕ್ಷಿಯಾಗುತ್ತದೆ.

ಸಂಜೆ ೭:೦೦ ಗಂಟೆಯ ʻಕಸ್ತೂರಿ ನಿವಾಸʼ ಧಾರಾವಾಹಿ ಕೂಡು ಕುಟುಂಬವೆಲ್ಲ ಸೇರಿ ಹಬ್ಬ ಮಾಡುವುದರಲ್ಲಿ ಇರುವ ಖುಷಿಯನ್ನು ವೀಕ್ಷಕರಿಗೆ ಹಂಚಲಿದೆ. ಹೊಸದಾಗಿ ಮದುವೆಯಾಗಿ ಬಂದಿರುವ ಕಿರೀ ಸೊಸೆ ಖುಷಿ ಈ ಸಲ ಹಬ್ಬದ ಸಾರಥ್ಯ ವಹಿಸುವುದು ವಿಶೇಷ.

ಸಂಜೆ ೭:೩೦ರ ʻನೇತ್ರಾವತಿʼಯಲ್ಲಿ ನೇತ್ರಾ ತನ್ನ ಅಕ್ಕನ ಒಳಿತಿಗಾಗಿ ಗೌರಿಪೂಜೆ ಮಾಡಿಸುತ್ತಾಳೆ. ಸುಖ-ದುಃಖದಲ್ಲಿ ಅಕ್ಕ-ತಂಗಿಯರೇ ಒಬ್ಬರಿಗೊಬ್ಬರು ಆಸರೆ ಆಗಬೇಕಿದೆ ಎಂಬುದು ಗೌರಿ ಹಬ್ಬದ ಮೂಲಕ ಬಿಂಬಿತವಾಗಲಿದೆ.

ಜಾಹೀರಾತುಗಳು

ರಾತ್ರಿ ೮:೦೦ ಗಂಟೆಯ ʻಸುಂದರಿʼಯಲ್ಲಿ ಸುಂದರಿ ತನ್ನ ಸವತಿಗಾಗಿ ಗಣೇಶನಲ್ಲಿ ಪ್ರಾರ್ಥಿಸುವ ಮೂಲಕ, ತ್ಯಾಗವೇ ಜೀವನದ ಸಾರ್ಥಕತೆ ಎಂಬ ಸಂಕೇತ ಗಣೇಶನ ಹಬ್ಬದ ಸಂದರ್ಭ ಪ್ರತಿಧ್ವನಿಸಲಿದೆ.

ರಾತ್ರಿ ೮:೩೦ರ ʻಕಾವ್ಯಾಂಜಲಿʼಯಲ್ಲಿ ಕಾವ್ಯ ಹಾಗೂ ಅಂಜಲಿಯರ ಸ್ನೇಹದ ಸಂಕೇತವಾಗಿ ಗಣೇಶೋತ್ಸವ ಮೂಡಿಬರಲಿದೆ. ಸಾವೇ ಬಂದರೂ ಸ್ನೇಹ ಸಾಯದು ಎಂಬ ಸಂದೇಶ ಗಣೇಶನ ಹಬ್ಬದಲ್ಲಿ ವ್ಯಕ್ತವಾಗಲಿದೆ.

ರಾತ್ರಿ೯:೦೦ರ ʻಮನಸಾರೆʼಯಲ್ಲಿ ತಂದೆಯ ಪ್ರೀತಿಗೋಸ್ಕರ ಹಂಬಲಿಸುವ ನಾಯಕಿ ಪ್ರಾರ್ಥನಾ ಅಂತಿಮವಾಗಿ ಗಣೇಶನ ಮೊರೆ ಹೋಗುತ್ತಾಳೆ. ಅಪ್ಪ-ಮಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.

ರಾತ್ರಿ ೯:೩೦ರ ʻನಯನತಾರಾʼದಲ್ಲಿ ನಾಯಕಿ ನಯನಾ ಗಣೇಶನ ಹಬ್ಬದ ಆಚರಣೆ ಹೇಳಿಕೊಟ್ಟು ರೌಡಿಗಳ ಮನಃಪರಿವರ್ತನೆ ಮಾಡುತ್ತಾಳೆ. ಕ್ರೌರ್ಯವೇ ಜೀವನವಲ್ಲ; ಸಾಮರಸ್ಯವೇ ಜೀವನ ಎಂಬ ಸಂದೇಶ ಮೂಡಿಬರಲಿದೆ.

ಇನ್ನೊಂದು ವಿಶೇಷವೆಂದರೆ, ಈ ಸಲ ಹಬ್ಬದ ಋತುವಿನಲ್ಲಿ ಉದಯ ಟಿ.ವಿ. ವೀಕ್ಷಕರಿಗಾಗಿ ಕೋಟಿ ಮೌಲ್ಯದ ಉಡುಗೊರೆಗಳನ್ನೂ ನೀಡುತ್ತಿದೆ. ಧಾರಾವಾಹಿಗಳ ಕುರಿತು ಕೇಳಲಾಗುವ ಸರಳ ಪ್ರಶ್ನೆಗಳಿಗೆ ಸರಿ ಉತ್ತರ ಕಳಿಸುವ ವೀಕ್ಷಕರಲ್ಲಿ ಪ್ರತಿ ದಿನ ೧೦೦ ಅದೃಷ್ಟಶಾಲಿಗಳಿಗೆ ನಗದು ಬಹುಮಾನ, ಚಿನ್ನದ ನಾಣ್ಯಗಳು, ವಜ್ರದ ಉಂಗುರಗಳು ದೊರೆಯಲಿವೆ. ಇದು ವೀಕ್ಷಕರು ವಾಹಿನಿಯ ಮೇಲೆ ಇಟ್ಟಿರುವ ಅಭಿಮಾನಕ್ಕೆ ಕೃತಜ್ಞತೆ ತೋರುವ ಸಂಕೇತವಾಗಿದೆ. ಈ ʻಉದಯ ಉಡುಗೊರೆಗಳ ಉತ್ಸವʼ ನವೆಂಬರ್‌ ೬ ರಿಂದ ನಾಲ್ಕು ವಾರಗಳ ಕಾಲ ನಡೆಯಲಿರುವುದು ವಿಶೇಷ. ಈ ಉಡುಗೊರೆಗಳು ಉದಯ ವೀಕ್ಷಕರಿಗೆ ಹಬ್ಬದ ಋತುವನ್ನು ಸ್ಮರಣೀಯವಾಗಿಸಲಿದೆ.

Leave a Comment