ವೀರಸಿಂಹಾರೆಡ್ಡಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ ಬಾಲಯ್ಯ ಅಭಿನಯದ ಸೂಪರ್ ಹಿಟ್ ಸಿನಿಮಾ ಇದೇ ಏಪ್ರಿಲ್ 30 ರಂದು ಸಂಜೆ 6 ಗಂಟೆಗೆ..!

ಜಾಹೀರಾತುಗಳು
Veera Simha Reddy Movie WTP in Kannada
Veera Simha Reddy Movie WTP in Kannada

ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ‌ ಬ್ಯಾಕ್‌ ಟು ಬ್ಯಾಕ್ ಅನೇಕ ಸೂಪರ್ ಹಿಟ್ ಸಿನಿಮಾಗಳು ಪ್ರಸಾರವಾಗುತ್ತಿದೆ. ಇದೀಗ ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣವು “ವೀರಸಿಂಹಾರೆಡ್ಡಿ” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ.

‘ಗಾಡ್ ಆಫ್ ಮಾಸ್’ ಎಂದು ಕರೆಸಿಕೊಳ್ಳುವ ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ʼವೀರಸಿಂಹಾರೆಡ್ಡಿʼ ಸಿನಿಮಾವು ಥಿಯೇಟರ್ ನಲ್ಲಿ ಹೊಸ ಛಾಪನ್ನೇ ಮೂಡಿಸಿತ್ತು. ಬಾಲಕೃಷ್ಣ ಅವರ ಜಬರ್ದಸ್ತ್ ಮಾಸ್‌ ಎಂಟ್ರಿಗೆ ಅಭಿಮಾನಿಗಳು ಮಸ್ತ್ ಎಂಜಾಯ್ ಮಾಡಿದ್ದರು.

ಜಾಹೀರಾತುಗಳು

ಇನ್ನು ಈ ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿರುವುದು, ವಿಲನ್‌ ಲುಕ್ ನಲ್ಲಿ ದುನಿಯಾ ವಿಜಯ್ ಧೂಳೆಬ್ಬಿಸಿದಷ್ಟೇ ಅಲ್ಲದೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ಅಭಿನಯಿಸಿರುವ ಈ ಸಿನಿಮಾವು ಅದ್ಬುತ ತಾರಾಬಳಗವನ್ನು ಹೊಂದಿದೆ.

ಬಾಲಕೃಷ್ಣರವರು ದ್ವಿಪಾತ್ರದಲ್ಲಿ ಅಭಿನಯಿಸಿರುವ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ “ವೀರಸಿಂಹಾರೆಡ್ಡಿ” ಇದೇ ಏಪ್ರಿಲ್ 30 ರಂದು ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Leave a Comment