
ಜೀ ಕನ್ನಡ , ಕರ್ನಾಟಕದ ಮನರಂಜನಾ ಮಾರುಕಟ್ಟೆಯ ಮಹಾರಾಜನಂತೆ ನಾಲ್ಕು ವರ್ಷಗಳ ಹಿಂದೆ ನಂಬರ್ 1 ಪಟ್ಟ ಅಲಂಕರಿಸಿರುವ ವಾಹಿನಿ. ತಮ್ಮ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರ ಮನಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದು ಶ್ರೇಯಸ್ಸಿಗೆ ಕಾರಣರಾದ ವೀಕ್ಷಕರನ್ನು ಎಂದಿಗೂ ಮರೆಯದೆ ಅವರ ನಡುವೆ ಕಾರ್ಯಕ್ರಮಗಳನ್ನು ರೂಪಿಸಿ ವಿನಯಪೂರ್ವಕವಾಗಿ ಕೃತಜ್ಞತೆ ಸಲ್ಲಿಸುವದನ್ನು ವಾಡಿಕೆ ಮಾಡಿಕೊಂಡಿದೆ. ಗೌರಿ ಗಣೇಶ ಹಬ್ಬದ ಈ ಸುಸಂಧರ್ಭದಲ್ಲಿ ಕೊಟ್ಟೂರಿನ ವಿದ್ಯಾನಗರದಲ್ಲಿರುವ ತುಂಗಭದ್ರಾ ಶಿಕ್ಷಣ ಸಂಸ್ಥೆಯ ಸಿಪಿಇಡಿ ಕಾಲೇಜು ಮೈದಾನಲ್ಲಿ ಇದೇ ಆಗಸ್ಟ್ 25 ಗುರುವಾರದಂದು ಸಂಜೆ 5.30 ಕ್ಕೆ ” ಜೀ ಕನ್ನಡ ಗಣೇಶೋತ್ಸವ ” ಕಾರ್ಯಕ್ರಮವನ್ನು ಆಯೋಜಿಸಿದೆ .
ಒಂದು ಕುಟುಂಬದಂತಿರುವ ವಾಹಿನಿ ಯಾವುದೇ ವಿಶೇಷ ಕಾರ್ಯಕ್ರಮವಾದರೂ ಫಿಕ್ಶನ್ ಮತ್ತು ನಾನ್ ಫಿಕ್ಷನ್ ಎರಡೂ ವಿಭಾಗದ ಜನಮೆಚ್ಚಿದ ಕಲಾವಿದರನ್ನು ಒಟ್ಟುಗೂಡಿಸಿ ಅವರ ಮೂಲಕ ಮನರಂಜನೆಯನ್ನು ಇಮ್ಮಡಿಗೊಳಿಸುತ್ತಲೆಯಿದೆ. ಇದೀಗ ಜೀ ಕುಟುಂಬದ ನಿಮ್ಮ ನೆಚ್ಚಿನ ಪಾರು ಧಾರಾವಾಹಿಯ ಆದಿ – ಹನುಮಂತು , ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಂಠಿ , ಸ್ನೇಹಾ , ಸುಮಾ , ಸಹನಾ ಮತ್ತು ಮುರುಳಿ , ನಾಗಿಣಿ 2 ಧಾರಾವಾಹಿಯಿಂದ ಶಿವಾನಿ ಮತ್ತು ಮಾಯಾಂಗನೆ ಆಗಮಿಸುತ್ತಿದ್ದರೇ ಇವರ ಜೊತೆಗೆ ಸರಿಗಮಪ ಕಾರ್ಯಕ್ರಮದಿಂದ ಮೆಹಬೂಬ್ , ಸಾಕ್ಷಿ ಕಲ್ಲೂರ್ , ವರ್ಣ ಚವ್ಹಾಣ್ , ಪೃಥ್ವಿ ಭಟ್ ಹಾಗು ಚನ್ನಪ್ಪ ದನಿಗೂಡಿಸಲಿದ್ದಾರೆ .
ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಿಂದ ರಾಹುಲ್ ಕಟ್ಟಿಮನಿ – ಭಾವನಾ , ಇಬ್ರಾಹಿಂ – ರೋಷಿಣಿ , ವಿಜಯ್ ಶೆಟ್ಟಿ – ಪ್ರತೀಕ್ಷಾ , ದರ್ಶನ್ – ಬೃಂದಾ ಇನ್ನು ಅನೇಕರು ರಂಜಿಸಲಿದ್ದಾರೆ ಅಷ್ಟೇ ಅಲ್ಲದೆ ಡ್ರಾಮಾ ಜೂನಿಯರ್ಸ್ ಸೀಸನ್ 4 ರ ಪುಟಾಣಿ ಪ್ರಚಂಡರಾದ ಸಮೃದ್ಧಿ , ಜತಿನ್ , ಸಾನಿಧ್ಯ , ಚಿರಂತ್ , ಕುಳ್ಳ ಸಿಂಗಂ ಅರುಣ್ ಮತ್ತು ಸೃಷ್ಟಿ ಇವರಿಗೆ ಸಾಥ್ ನೀಡಲಿದ್ದಾರೆ. ನಿಮ್ಮನ್ನು ನಕ್ಕು ನಗಿಸಲು ಕಾಮಿಡಿ ಕಿಲಾಡಿಗಳು ತಂಡ ಕೂಡ ವೇದಿಕೆಯ ಕಳೆ ಹೆಚ್ಚಿಸಲಿದ್ದು ರಘು , ಸಂಜು ಬಸಯ್ಯ , ಅಪ್ಪಣ್ಣ , ಮಂಥನ , ಸೂರಜ್ , ಸದಾನಂದ ಮತ್ತು ಉಮೇಶ್ ಸಹ ಇರಲಿದ್ದಾರೆ .
ಈ ಕಾರ್ಯಕ್ರಮ ಇದೇ ಗುರುವಾರ ಸಂಜೆ ಕೊಟ್ಟೊರಿನ ತುಂಗಭದ್ರಾ ಶಿಕ್ಷಣ ಸಂಸ್ಥೆಯ ಸಿಪಿಇಡಿ ಕಾಲೇಜು ಮೈದಾನಲ್ಲಿ ಜರುಗಲಿದ್ದು ಪ್ರವೇಶ ಉಚಿತವಾಗಿದೆ. ಕೊಟ್ಟೂರು ಸೇರಿದಂತೆ ಸುತ್ತ ಮುತ್ತ ಇರುವ ಊರುಗಳ ಜನರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜೀ ಕುಟುಂಬದ ನಿಮ್ಮಿಷ್ಟದ ಕಲಾವಿದರ ಜೊತೆಜೊತೆಗೆ ಭರ್ಜರಿ “ಗಣೇಶೋತ್ಸವನ್ನು” ಆಚರಿಸಿ , ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.