
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಕಾರ್ಯಕ್ರಮಗಳೊಂದಿಗೆ ಕನ್ನಡಿಗರನ್ನು ರಂಜಿಸುತ್ತಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಜೇನುಗೂಡು, ಮನಸೆಲ್ಲಾ ನೀನೇ, ಮರಳಿ ಮನಸಾಗಿದೆ, ಮುದ್ದುಮಣಿಗಳು, ಸುವರ್ಣ ಸೂಪರ್ ಸ್ಟಾರ್, ಬೊಂಬಾಟ್ ಭೋಜನ ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ನಿಟ್ಟಿನಲ್ಲಿ ವಾಹಿನಿಯು ವೀಕ್ಷಕರಿಗೆ ದುಪ್ಪಟ್ಟು ಮನೋರಂಜನೆಯನ್ನು ನೀಡಲು ಸಜ್ಜಾಗುತ್ತಿದೆ. ಅದೇ “ಗಾನಬಜಾನ ಸೀಸನ್ 3” ಹಾಗೂ “ಕತೆಯೊಂದು ಶುರುವಾಗಿದೆ”
ಮತ್ತೆ ಬರ್ತಿದೆ ನಿಮ್ಮ ನೆಚ್ಚಿನ ರಿಯಾಲಿಟಿ ಶೋ “ಗಾನಬಜಾನ ಸೀಸನ್ 3”
ಈ ಹಿಂದೆ ಯಶಸ್ವೀ ಎರಡು ಸೀಸನ್ ಗಳನ್ನು ಮುಗಿಸಿರುವ ‘ಗಾನಬಜಾನ’ ಇದೀಗ ತನ್ನ ಮೂರನೇ ಸೀಸನ್ ನೊಂದಿಗೆ ಮತ್ತೆ ಬರ್ತಿದೆ. ಇನ್ನು ಶೋ ಲಾಂಚ್ ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಪ್ರೊಮೋ ಕೂಡ ರಿಲೀಸ್ ಆಗಿದೆ. ಇನ್ನೊಂದು ವಿಶೇಷ ಅಂದ್ರೆ ಈ ಬಾರಿ ‘ಗಾನಬಜಾನ’ ದ ನಿರೂಪಣೆಯ ಜವಾಬ್ದಾರಿ ಹೊತ್ತಿರೋದು ಸ್ಟಾರ್ ಆ್ಯಂಕರ್ ‘ಅಕುಲ್ ಬಾಲಾಜಿ’. ಈ ಹಿಂದೆ ಸುವರ್ಣ ವಾಹಿನಿಯ ಅನೇಕ ಸೂಪರ್ ಡೂಪರ್ ಹಿಟ್ ಶೋಸ್ ಗಳನ್ನು ನಿರೂಪಣೆ ಮಾಡಿ ಪ್ರೇಕ್ಷಕರ ಮನಗೆದ್ದ ಅಕುಲ್ ಈಗ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಲಿದ್ದಾರೆ.
ಇನ್ನು ಈ ಶೋ ಬಗ್ಗೆ ಮಾತಾಡೋದಾದ್ರೆ ಈ ಕಾರ್ಯಕ್ರಮವು ಸಂಗೀತದ ಜೊತೆಗೆ ತಮಾಷೆ, ಕುಣಿತ, ಆಟ ಎಲ್ಲವನ್ನು ಒಳಗೊಂಡ ಸಂಪೂರ್ಣ ಮನೋರಂಜನೆಯ ಮಿಶ್ರಣವಾಗಿದ್ದು, ಖ್ಯಾತ ಸೆಲೆಬ್ರಿಟಿಗಳನ್ನು ಶೋ ಗೆ ಕರೆತಂದು ಎರಡು ತಂಡಗಳಾಗಿ ವಿಂಗಡಿಸಲಾಗುತ್ತದೆ. ಗಾಯನದ ಜೊತೆಗೆ ಹಲವಾರು ಗೇಮ್ ಗಳನ್ನೂ ನೀಡಲಾಗುತ್ತದೆ. ಯಾರು ಹೆಚ್ಚು ಸ್ಕೋರ್ ಮಾಡ್ತಾರೋ ಅವರನ್ನು ವಿನ್ನರ್ ಎಂದು ಘೋಷಿಸಲಾಗುತ್ತದೆ. ಇದೇ ಕಾರ್ಯಕ್ರಮದ ಮೂಲ ಉದ್ದೇಶ.
ಹೊಚ್ಚ ಹೊಸ ವಿನೂತನ ರಿಯಾಲಿಟಿ ಶೋ “ಗಾನಬಜಾನ ಸೀಸನ್ 3” ಇದೇ ನವೆಂಬರ್ 13 ರಿಂದ ಪ್ರತೀ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.
____________________________________________________
ಹೊಸ ಧಾರಾವಾಹಿ “ಕಥೆಯೊಂದು ಶುರುವಾಗಿದೆ”
“ಕಥೆಯೊಂದು ಶುರುವಾಗಿದೆ” ಇದು ಮೂರು ಜೋಡಿಗಳು ಹಾಗೂ ಎರಡು ಮನೆತನಗಳ ಮಧ್ಯೆ ನಡೆಯುವ ಪ್ರೀತಿ ಸಂಘರ್ಷದ ಅದ್ದೂರಿ ಧಾರಾವಾಹಿ… ಪರಿಸ್ಥಿತಿಗೆ ಕಟ್ಟುಬಿದ್ದು ಕುಟುಂಬದ ಗೌರವಕ್ಕಾಗಿ ಪಂಡಿತ್ ಕುಟುಂಬದ ಮೂರು ಹೆಣ್ಣುಮಕ್ಕಳು, ಬಹದ್ದೂರ್ ವಂಶದ ಮೂರು ಗಂಡು ಮಕ್ಕಳಿಗೆ ಜೋಡಿ ಆಗಿ ಬರುವ ಪ್ರೀತಿ ಸಂಘರ್ಷದ ಕಥೆಯೇ ‘ಕಥೆಯೊಂದು ಶುರುವಾಗಿದೆ’ !!
ಈ ಧಾರವಾಯಿಯ ನಾಯಕಿ ಕೃತಿ, ಈಕೆ ಮಧ್ಯಮ ಕುಟುಂಬದ ಹುಡುಗಿಯಾಗಿರುತ್ತಾಳೆ. ಚಿತ್ರಕಲೆಯೇ ಇವಳ ವೃತ್ತಿ, ಫ್ಯಾಮಿಲಿ ಅಂದ್ರೆ ಈಕೆಗೆ ಪಂಚಪ್ರಾಣ, ನಂಬಿಕೆಯನ್ನೇ ಶಕ್ತಿಯನ್ನಾಗಿಸಿರೋ ಈಕೆ ಕುಟುಂಬದ ಗೌರವವನ್ನು ಉಳಿಸಲು ಯಾವ ಸವಾಲನ್ನು ಬೇಕಿದ್ರೂ ಎದುರಿಸೋಕೂ ರೆಡಿಯಾಗಿರುತ್ತಾಳೆ.

ಇನ್ನು ಈ ಕತೆಯ ನಾಯಕ ಯುವರಾಜ್ ಬಹದ್ದೂರ್. ಬಹದ್ದೂರ್ ಫ್ಯಾಮಿಲಿಗೆ ಇವನೇ ಹಿರಿಮಗ, ಈತನಿಗೆ ಇಬ್ಬರು ಸಹೋದರರು. ಖ್ಯಾತ ಬ್ಯುಸಿನೆಸ್ ಮ್ಯಾನ್ ಆಗಿರುವ ಈತ ವಜ್ರದಷ್ಟೆ ಪರ್ಫೆಕ್ಟ್. ಅಷ್ಟೇ ಅಲ್ಲದೆ ಈತನಿಗೆ ಸುತ್ತಮುತ್ತ ಇರೋರು ಕೂಡ ಪರ್ಫೆಕ್ಟ್ ಆಗಿಯೇ ಇರಬೇಕು. ಈ ಭಿನ್ನ ಜಗತ್ತಿನ ವಿಭಿನ್ನ ಮನಸುಗಳು ಹೇಗೆ ಒಂದಾಗುತ್ತೆ ಅನ್ನೋದನ್ನು ಮುಂದೆ ಕಾದುನೋಡಬೇಕಿದೆ.
“ಕಥೆಯೊಂದು ಶುರುವಾಗಿದೆ” ಧಾರಾವಾಹಿಯು ಒಂದು ಸುಂದರವಾದ ತಾರಾಬಳಗವನ್ನು ಹೊಂದಿದ್ದು ಸುಂದರ್ ಶ್ರೀ, ಸಹನಾ, ಅಭಿನಯ, ಸೂರಜ್ ಹೂಗರ್, ಭವಾನಿ, ಅಕ್ಷತಾ ದೇಶಪಾಂಡೆ, ಸುಜಾತ ಅಕ್ಷಯ, ಸುಜಯ್, ಭವಿಶ್, ಇಂಚರ ಜೋಶಿ ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ.
ಹೊಚ್ಚ ಹೊಸ ಧಾರಾವಾಹಿ “ಕಥೆಯೊಂದು ಶುರುವಾಗಿದೆ” ಅತೀ ಶೀಘ್ರದಲ್ಲಿ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.