
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ವಿಶಿಷ್ಟ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಪ್ರೇಕ್ಷಕರ ಮನಗೆದ್ದಿದೆ. ಕಳೆದ ನವೆಂಬರ್ 28 ರಂದು ವಾಹಿನಿಯು “ಕಥೆಯೊಂದು ಶುರುವಾಗಿದೆ” ಎಂಬ ಹೊಚ್ಚ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಆರಂಭಿಸಿತ್ತು.
ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೊಂದು “Golden ನಂಬರ್” ಎಂಬ ಕಾಂಟೆಸ್ಟ್ ಅನ್ನು ಆಯೋಜಿಸಿತ್ತು.
6 ದಿನಗಳ ಕಾಲ “ಕಥೆಯೊಂದು ಶುರುವಾಗಿದೆ” ಧಾರಾವಾಹಿ ಸಂಚಿಕೆಯ ಕೊನೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ “43 ಇಂಚಿನ LED TV” ಯನ್ನು ಬಹುಮಾನವಾಗಿ ಗೆಲ್ಲಿ ಎನ್ನಲಾಗಿತ್ತು.
ಈ ಕಾಂಟೆಸ್ಟ್ ನಲ್ಲಿ ವಿಜೇತರಾದ ಶಶಿಕಲಾ ಎಲ್.ಸಿ ಬೆಂಗಳೂರು, ವಿರೂಪಾಕ್ಷ ಹಾವೇರಿ, ಸೌಮ್ಯ ಹೆಚ್.ಕೆ ದಾವಣಗೆರೆ, ವಿ.ಮಂಜುನಾಥ್ ಹೊಸಕೋಟೆ, ಹನುಮವ್ವ ಭಜಂತ್ರಿ ಬಾಗಲಕೋಟೆ ಹಾಗೂ ಪ್ರದೀಪ್ ಕೆ ಆರ್ ತುಮಕೂರು, ಇವರಿಗೆ ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿ ನಾಯಕ ಯುವರಾಜ್ ಬಹದ್ದೂರ್ ಹಾಗೂ ನಾಯಕಿ ಕೃತಿ ನಿನ್ನೆ ಸ್ಟಾರ್ ಸುವರ್ಣ ಕಚೇರಿಯಲ್ಲಿ ವಿಜೇತರಿಗೆ “43 ಇಂಚಿನ LED TV” ಯನ್ನು ನೀಡಿದ್ದಾರೆ.
.
ಒಬ್ಬಳು ಸ್ವಾಭಿಮಾನಿ, ಇನ್ನೊಬ್ಬ ಅಹಂಕಾರಿ. ಸ್ವಾಭಿಮಾನಿ ಹಾಗೂ ಅಹಂಕಾರಿಯ ನಡುವೆ ನಡೆಯುವ ಜಿದ್ದಾ ಜಿದ್ದಿಯೇ ‘ಕಥೆಯೊಂದು ಶುರುವಾಗಿದೆ‘ ಧಾರಾವಾಹಿಯ ಕಥಾಹಂದರ. ತಪ್ಪದೇ ವೀಕ್ಷಿಸಿ ಸೋಮ-ಶನಿ ಸಂಜೆ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಯಲ್ಲಿ.
